ಎಸ್ ಎಸ್ಎಲ್ ಸಿ ಪರೀಕ್ಷೆ : ಅಂಕ ಇಲ್ಲದಿದ್ರೂ ಬರೆಯಲೇ ಬೇಕು ಹಿಂದಿ ಪರೀಕ್ಷೆ

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ 625 ಅಂಕಗಳ ಫಲಿತಾಂಶ ಮಾದರಿಯಲ್ಲಿ ಬದಲಾವಣೆ ತಂದು, ಅಂಕಗಳನ್ನು 525ಕ್ಕೆ ಇಳಿಸಿ ಬಳಿಕ ಹಿಂದಿ ಭಾಷೆಯ ಫಲಿತಾಂಶಕ್ಕೆ ಗ್ರೇಡ್ ನೀಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು : ರಾಜ್ಯದ ಲಕ್ಷಾಂತರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ವಿದ್ಯಾರ್ಥಿಗಳ ಫಲಿತಾಂಶ ಪ್ರಮಾಣ ಪತ್ರದಲ್ಲಿ ದ್ವಿಭಾಷಾ ನೀತಿಯನ್ನು ಅನುಸರಿಸಲು ಕೇಂದ್ರ ಸರ್ಕಾರ ಮುಂದಾಯಿತಾ ಈ ಪ್ರಶ್ನೆ ಇದೀಗ ಮನೆ ಮಾಡಿದೆ.

ಪ್ರಸ್ತುತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 625 ಅಂಕಗಳ ಪರೀಕ್ಷಾ ಪದ್ಧತಿ ಚಾಲ್ತಿಯಲ್ಲಿದೆ. ಆದರೆ ವಿದ್ಯಾರ್ಥಿಗಳ ಹೊರೆ ಕಮ್ಮಿ ಮಾಡುವ ಉದ್ದೇಶದಿಂದ ಹಿಂದಿ ಭಾಷೆಯ ಅಂಕಗಳಿಗೆ ರಿಸಲ್ಟ್ ಶೀಟ್ನಲ್ಲಿ ಕೊಕ್ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಒಟ್ಟೂ ಅಂಕಗಳು 525ಕ್ಕೆ ಇಳಿಕೆಯಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ 625 ಅಂಕಗಳ ಫಲಿತಾಂಶ ಮಾದರಿಯಲ್ಲಿ ಬದಲಾವಣೆ ತಂದು, ಅಂಕಗಳನ್ನು 525ಕ್ಕೆ ಇಳಿಸಿ ಬಳಿಕ ಹಿಂದಿ ಭಾಷೆಯ ಫಲಿತಾಂಶಕ್ಕೆ ಗ್ರೇಡ್ ನೀಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ದ್ವಿ ಭಾಷಾ ನೀತಿ ಜಾರಿಗೆ ಬರಬೇಕು. ಮಕ್ಕಳ ಮೇಲೆ ಹಿಂದಿ ಹೇರಿಕೆ ಮಾಡಬಾರದು ಎಂದು ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು.
.ಈ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಸರ್ಕಾರದ ನಿಲುವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಆದರೆ ವೈಯಕ್ತಿಕವಾಗಿ ಸಿಎಂ ಸಿದ್ದರಾಮಯ್ಯ ಕೂಡ ದ್ವಿಭಾಷಾ ನೀತಿಯ ಪರವಾಗಿಯೇ ಇದ್ದಾರೆ. ಆದರೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Karnataka 1st PUC Result 2026: ಪ್ರಥಮ ಪಿಯುಸಿ ಫಲಿತಾಂಶ ಯಾವಾಗ ? ಮನೆಯಲ್ಲೇ ಕುಳಿತು ರಿಸಲ್ಟ್ ಚೆಕ್ ಮಾಡುವುದು ಹೇಗೆ ?

ಶಿಕ್ಷಣ ಇಲಾಖೆ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಒಂದು ವೇಳೆ ದ್ವಿಭಾಷಾ ನೀತಿ ರಾಜ್ಯದಲ್ಲಿ ಜಾರಿಗೆ ಬಂದರೆ, ಹಿಂದಿ ಭಾಷೆಯ ಅಂಕ ಕೇವಲ ಗ್ರೇಡ್ಗೆ ಮಾತ್ರ ಸೀಮಿತವಾಗಲಿದೆ.

ವಿದ್ಯಾರ್ಥಿಯ ಒಟ್ಟೂ ಫಲಿತಾಂಶಕ್ಕೆ ಹಿಂದಿ ಪರೀಕ್ಷೆಯ ಅಂಕ ಗಣನೆಗೆ ಬರುವುದಿಲ್ಲ. ಹಿಂದಿ ಭಾಷೆಯಲ್ಲಿ ವಿದ್ಯಾರ್ಥಿ ಗಳಿಸಿದ ಅಂಕ ಆಧರಿಸಿ ಎ,ಬಿ,ಸಿ,ಡಿ ಎಂಬ ಗ್ರೇಡ್ಗಳನ್ನು ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಹೊರೆ ಕಡಿಮೆಯಾಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories