ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಪ್ಯೂ ರದ್ದು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಸೆಪ್ಟೆಂಬರ್ 17ರಿಂದ 8, 9 ಮತ್ತು 10ನೇ ತರಗತಿಗಳು ಆರಂಭವಾಗಲಿದೆ. ಕೇರಳ ವಿದ್ಯಾರ್ಥಿಗಳ ಜೊತೆಗೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವ ಪೋಷಕರ ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿಯನ್ನು ನಡೆಸಲು ಸೂಚಿಸಲಾಗಿದೆ. 8 ನೇ ತರಗತಿಗಳು ಮಧ್ಯಾಹ್ನದ ವೇಳೆಯಲ್ಲಿ ನಡೆದ್ರೆ, 9 ಮತ್ತು 10ನೇ ತರಗತಿಗಳು ಬೆಳಗಿನ ವೇಳೆಯಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದ್ದಾರೆ.
ಪದವಿ ಕಾಲೇಜುಗಳಲ್ಲಿ ಕೇವಲ ವಿಜ್ಞಾನ ವಿಭಾಗಕ್ಕೆ ಮಾತ್ರವೇ ಭೌತಿಕ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಉಳಿದ ತರಗತಿಗಳ ಆರಂಭದ ಕುರಿತು ವಿವಿ ಆಡಳಿತ ಮಂಡಳಿಯ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಅಲ್ಲದೇ ಅಂತಿಮ ಪದವಿ ತರಗತಿಗಳ ಆರಂಭಕ್ಕೆ ಸಾಕಷ್ಟು ಮನವಿಗಳು ಬರುತ್ತಿವೆ ಎಂದಿದ್ದಾರೆ.
ರಾಜ್ಯದಾದ್ಯಂತ ಶಾಲೆ, ಕಾಲೇಜುಗಳು ಆರಂಭವಾಗಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹಾಗೂ ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಆರ್ಭಟದ ಹಿನ್ನೆಲೆಯಲ್ಲಿ ಶಾಲಾರಂಭವಾಗಿರಲಿಲ್ಲ. ಇದೀಗ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲೀಗ ಶಾಲೆಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಶಾಲಾರಂಭದ ಸಿದ್ದತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.
ಮಂಗಳೂರಲ್ಲಿ : ಯುವಕನಲ್ಲಿ ಪತ್ತೆಯಾಯ್ತು ನಿಫಾ ವೈರಸ್ ಲಕ್ಷಣ !
ಗೋವಾದ ಲ್ಯಾಬ್‌ನಲ್ಲಿ ಮೈಕ್ರೋ ಬಯಲಾಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಾರವಾರ ಮೂಲದ ಯುವಕನೋರ್ವನಿಗೆ ಜ್ವರ ಲಕ್ಷಣ ಕಂಡು ಬಂದಿತ್ತು. ಈತ ಪಾಸಿಟಿವ್ ಸ್ಯಾಂಪಲ್‌ಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದ. ಯುವಕನಿಗೆ ಜ್ವರ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯುವಕ ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದ್ರೆ ಇದೀಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಯುವಕನಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಯುವಕ ತನಗೆ ನಿಫಾ ಲಕ್ಷಣ ಇರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದು, ನಿಫಾ ಟೆಸ್ಟ್ ಮಾಡಿಸುವಂತೆ ಮನವಿ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಹಿನ್ನೆಲೆಯಲ್ಲಿ ಯುವಕನ ಸ್ಯಾಂಪಲ್ ಪಡೆದು ಬೆಂಗಳೂರಿಗೆ ರವಾನಿಸಲಾಗಿದೆ.
ಬೆಂಗಳೂರಿನಿಂದ ರಿಪೋರ್ಟ್ ಇನ್ನಷ್ಟೇ ಬರಬೇಕಾಗಿದೆ. ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲೀಗ ಯುವಕನನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಯುವಕನ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಪಡೆಯಲಾಗುತ್ತಿದೆ. ಒಂದೊಮ್ಮೆ ನಿಫಾ ವೈರಸ್ ಪತ್ತೆಯಾದ್ರೆ ಸಂಪರ್ಕಿತರನ್ನೂ ಕೂಡ ತಪಾಸಣೆಗೆ ಒಳಪಡಿಸುವ ಸಾಧ್ಯತೆಯಿದೆ. ನೆರೆಯ ಕೇರಳದಲ್ಲಿ ನಿಫಾ ವೈರಸ್ ಹೆಚ್ಚುತ್ತಿದ್ದರೂ ಕೂಡ ಮಂಗಳೂರಲ್ಲಿ ಯಾವುದೇ ಪ್ರಕರಣ ಇದುವರೆಗೂ ದಾಖಲಾಗಿರಲಿಲ್ಲ.
ಯುವಕ ಲ್ಯಾಬ್ ಟೆಸ್ಟ್ ಹೊರತು ಪಡಿಸಿ ಹೆಚ್ಚು ಜನರ ಜೊತೆಗೆ ಸಂಪರ್ಕವನ್ನು ಹೊಂದಿಲ್ಲ. ಅದ್ರಲ್ಲೂ ಮಂಗಳೂರಿನಲ್ಲಿ ಯಾರೊಂದಿಗೂ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ ಟೆನ್ಶನ್ ಕಡಿಮೆಯಾಗಿದೆ. ಇಂದು ಸಂಜೆ ಯುವಕನ ರಿಪೋರ್ಟ್ ಲಭ್ಯವಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕೇರಳದಲ್ಲಿ ನಿಫಾ ಭೀತಿ ಹೆಚ್ಚುತ್ತಿದೆ. ದಿನೇ ದಿನೇ ನಿಫಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕೋವಿಡ್ ಸೋಂಕಿಗಿಂತಲೂ ಮಾರಕ ಎನ್ನಲಾಗುತ್ತಿರುವ ನಿಫಾ ಭೀತಿ ಇದೀಗ ಮಂಗಳೂರಲ್ಲಿಯೂ ಎದುರಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದ್ರೀಗ ಜಿಲ್ಲೆಯಲ್ಲಿ ನಿಫಾ ವೈರಸ್ ಲಕ್ಷಣ ಕಂಡು ಬಂದ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್ ಆಗಿದೆ.
ಇದನ್ನೂ ಓದಿ : ಶಿಕ್ಷಕರ ರಜೆಗೆ ಬೀಳುತ್ತೆ ಕತ್ತರಿ : ಪ್ರಾಥಮಿಕ ಶಾಲಾರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದೇನು ?
ಇದನ್ನೂ ಓದಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ವಿದ್ಯಾರ್ಥಿನಿ ಸೇರಿ 6 ಜನರ ಬಂಧನ
(School and college reopen permission granted in Dakshin Kannada : dc K.V.Rajendra )