Odisha: ನದಿಗೆ ಉರುಳಿದ ಗೂಡ್ಸ್‌ ಟ್ರೈನ್‌ : ತಪ್ಪಿತು ಭಾರೀ ದುರಂತ

ಒಡಿಶಾ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೂಡ್ಸ್‌ ರೈಲಿನ ಆರು ಬೋಗಿಗಳು ನದಿಗೆ ಉರುಳಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಈಸ್ಟ್ ಕೋಸ್ಟ್ ರೈಲ್ವೇಸ್ ನ ಅಂಗುಲ್-ತಲ್ಚರ್ ರಸ್ತೆ ಮಾರ್ಗದಲ್ಲಿ ಚಲಿಸುತ್ತಿರುವ ಗೂಡ್ಸ್ ರೈಲಿನ ಕನಿಷ್ಠ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋಧಿಯನ್ನು ಹೊತ್ತ ರೈಲಿನ ಆರು ಬೋಗಿಗಳು ನಸುಕಿನ 2.30 ರ ಸುಮಾರಿಗೆ ನದಿಗೆ ಧುಮುಕಿವೆ. ಆದರೆ ಇಂಜಿನ್ ಟ್ರ್ಯಾಕ್‌ನಲ್ಲಿ ಇರುವುದರಿಂದ ಲೋಕೋ ಪೈಲಟ್ ಮತ್ತು ಇತರ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯು ನಂದಿರಾ ನದಿಯ ಸೇತುವೆಯ ಮೇಲೆ ಫಿರೋಜ್‌ಪುರದಿಂದ ಖುರ್ದಾ ರಸ್ತೆಗೆ ಹೋಗುತ್ತಿದ್ದಾಗ ಅಪಘಾತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ತಾಲ್ಚರ್ 160 ಮಿಮೀ ಹಾಗೂ ಅಂಗುಲ್ (74 ಮಿಮೀ) ಮಳೆಯಾಗಿದೆ. ರೈಲು ದುರಂತದ ನಂತರ ಈ ಮಾರ್ಗದಲ್ಲಿನ ಎಲ್ಲಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ರೈಲು ಮಾರ್ಗವನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ : ಮೈಸೂರು ಗ್ಯಾಂಗ್‌ರೇಪ್‌ ಬೆನ್ನಲ್ಲೇ ಮತ್ತೊಂದು ಕೃತ್ಯ : ಮಹಿಳೆಯ ಬೆತ್ತಲೆಗೊಳಿಸಿ ಅಂಗಾಂಗ ಮುಟ್ಟಿ ವಿಕೃತಿ ಮೆರೆದ ದುರುಳರು

ಇದನ್ನೂ ಓದಿ : ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಕಾರ್ಖಾನೆ ವಿಭಿನ್ನ ಸಾಧನೆ: ಸಂಪೂರ್ಣ ವ್ಯವಸ್ಥೆ ಮಹಿಳಾಮಯ

( 6 coaches of goods train derail, fall into river; East Coast Railways route affected )

Comments are closed.