ಶಾಲೆಯ ಆಸೆಂಬ್ಲಿಯಲ್ಲಿ ಮೊಳಗಿದ ಅಜಾನ್‌ : ಶಿಕ್ಷಕ ಆಮಾನತು

ಮುಂಬೈ: Mumbai school Azaan : ಶಾಲೆಯಲ್ಲಿ ಬೆಳಗಿನ ಅಸೆಂಬ್ಲಿಯ ವೇಳೆಯಲ್ಲಿ ಅಜಾನ್‌ ನುಡಿಸಿದ ಹಿನ್ನೆಲೆಯಲ್ಲಿ ಫೋಷಕರು ಹಾಗೂ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಮುಂಬೈನ ಕಾಂದಿವಲಿಯಲ್ಲಿನ ಕಪೋಲ್ ವಿದ್ಯಾನಿಧಿ ಇಂಟರ್ನ್ಯಾಷನಲ್ ಸ್ಕೂಲ್ (ICSE ಬೋರ್ಡ್)ನಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ 7.15 ರ ಸುಮಾರಿಗೆ ಕಪೋಲ್ ವಿದ್ಯಾನಿಧಿ ಇಂಟರ್ನ್ಯಾಷನಲ್ ಸ್ಕೂಲ್ ನ ಅಸೆಂಬ್ಲಿಯಲ್ಲಿ ಸಾಮಾನ್ಯವಾಗಿ ಮಸೀದಿಗಳಲ್ಲಿ ಮೊಳಗುವ ಅಜಾನ್‌ ಮೊಳಗಿತ್ತು. ಈ ವೇಳೆಯಲ್ಲಿ 4 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ತರಗತಿಯಲ್ಲಿದ್ದರು. ಶಾಲಾ ಮಕ್ಕಳು ಒಮ್ಮೆ ಶಾಕ್‌ ಆಗಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿರುವ ಜನರು ಕೂಡ ಅರೆಕ್ಷಣ ದಂಗಾಗಿ ಶಾಲೆಯ ಬಳಿಗೆ ಬಂದಿದ್ದಾರೆ. ವಾಕಿಂಗ್‌ ಮಾಡುತ್ತಿದ್ದ ಕೆಲವರು ಅಜಾನ್‌ ಮೊಳಗುವುದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ಹರಿದಾಡುತ್ತಿದ್ದಂತೆಯೇ ವಿದ್ಯಾರ್ಥಿಗಳ ಪೋಷಕರು, ಬಿಜೆಪಿ, ಎಂಎನ್‌ಎಸ್ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣದ ಕಾರ್ಯಕರ್ತರು ಜಾಮಾಯಿಸಿ, ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಶಾಲೆಯ ಬಳಿಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಶಾಲೆಯ ಪ್ರಾಂಶುಪಾಲೆ ರೇಷ್ಮಾ ಹೆಡ್ಗೆ ಅವರು ಪೋಷಕರು ಹಾಗೂ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನಿಸಿದರೂ ಕೂಡ ಪ್ರತಿಭಟನೆ ನಿಲ್ಲಲಿಲ್ಲ. ಅಲ್ಲದೇ ಪೋಷಕರು ಶಾಲಾ ಆವರಣದಲ್ಲಿಯೇ ಧರಣಿ ಕುಳಿತುಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಜಾನ್ ನುಡಿಸಿದ ಶಿಕ್ಷಕನನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೇ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ವೇದ ಗೀತೆಯನ್ನೂ ನುಡಿಸಲಾಯಿತು. ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದು : ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಶಾಲೆಯಲ್ಲಿ ಅಜಾನ್‌ ನುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಎಫ್‌ಐಆರ್‌ ದಾಖಲು ಮಾಡಿಲ್ಲ, ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ವೇಳೆಯಲ್ಲಿ ಅಜಾನ್‌ ನುಡಿಸಲಾಗಿದೆ ಎಂದು ಕೆಲವು ಪೋಷಕರು ನಮಗೆ ದೂರು ನೀಡಿದ್ದಾರೆ. ಹೀಗಾಗಿ ಎಲ್ಲಾ ಕೋನಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದು, ಸೂಕ್ತ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸ್‌ ಉಪ ಆಯುಕ್ತ ಅಜಯ್ ಬನ್ಸಾಲ್ ತಿಳಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಇದನ್ನೂ ಓದಿ :

ಜೂನ್ 6 ರಂದು ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿತ್ತು. ಇದೀಗ ಶಾಲಾರಂಭಗೊಂಡ ಹತ್ತೇ ದಿನಗಳಲ್ಲಿ ಶಾಲೆಯಲ್ಲಿ ಅಜಾನ್‌ ವಿವಾದ ಹುಟ್ಟುಕೊಂಡಿದೆ. ಇನ್ನು ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಇದ್ದು, ಪ್ರತಿಭಟನೆಯ ವೇಳೆಯಲ್ಲಿ ವಿದ್ಯಾರ್ಥಿಗಳು ತರಗತಿಯ ಒಳಗಡೆ ಕುಳಿತುಕೊಂಡಿದ್ದರು. ಆದರೆ ಬಹುತೇಕ ಪೋಷಕರಿಗೆ ಪ್ರತಿಭಟನೆಗೆ ಕಾರಣ ಏನು ಅನ್ನೋದು ತಿಳಿದಿರಲಿಲ್ಲ. ಆದರೂ ಕೂಡ ಎರಡನೇ ಪಾಳಿಗೆ ಆಗಮಿಸಿದ 1ರಿಂದ 3ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನಾಕಾರರ ಜೊತೆಗೂಡಿ ಪ್ರತಿಭಟಿಸಿದ್ದಾರೆ. ಇದನ್ನೂ ಓದಿ : Engineering students : ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ಸರಕಾರ‌ : ಶೇಕಡಾ 10 ರಷ್ಟು ಶುಲ್ಕ ಹೆಚ್ಚಳ

ಪ್ರಾಂಶುಪಾಲರು ಅಂತಿಮವಾಗಿ ಪೋಷಕರು ಹಾಗೂ ಪ್ರತಿಭಟನಾಕಾರರಲ್ಲಿ ನಡೆದ ಘಟನೆಗೆ ಕ್ಷಮೆಯಾಚಿಸಿದ್ದಾರೆ. ಇನ್ನು ಅಮಾನತುಗೊಂಡ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದಾರೆ. ಆದರೆ ಕಾಂದಿವಲಿ (ಪಶ್ಚಿಮ) ದ ಚಾರ್ಕೋಪ್‌ನ ಬಿಜೆಪಿ ಶಾಸಕ ಯೋಗೇಶ್ ಸಾಗರ್ ಅವರು ಆಜಾನ್ ನುಡಿಸುವುದು “ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ” ಎಂದು ಹೇಳಿದ್ದಾರೆ.

mumbai school azaan : Teacher plays Azaan in morning assembly, suspended by Kapol Vidyanidhi International School in mumbai

Comments are closed.