PUC College Start : ನಾಳೆಯಿಂದ ಪಿಯು ಕಾಲೇಜು ಆರಂಭ : ಹಿಜಾಬ್ ಗೆ ನೋ ಎಂಟ್ರಿ

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರ್ಮೋಡ ಶಿಕ್ಷಣ ಕ್ಷೇತ್ರವನ್ನು ಆಪ್ ಲೈನ್ ನಿಂದ ಆನ್ ಲೈನ್ ಗೆ ಸೀಮಿತಗೊಳಿಸಿ ಮಕ್ಕಳನ್ನು ಮನೆಯಲ್ಲೇ ಕಟ್ಟಿಹಾಕಿತ್ತು. ಈಗ ನಾಲ್ಕನೇ ಅಲೆಯ ಭೀತಿಯ ಬಳಿಕ ರಾಜ್ಯದಲ್ಲಿ ಶೈಕ್ಷಣಿಕ ವರ್ಷಾರಂಭವಾಗಿದೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ತರಗತಿಗಳು ಆರಂಭ ಆಗಿದ್ದು ಗುರುವಾರದಿಂದ ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳು (PUC College Start ) ಆರಂಭವಾಗಲಿದೆ.

ರಾಜ್ಯದಲ್ಲಿ ಗುರುವಾರದಿಂದ ಪದವಿ ಪೂರ್ವ ಅಂದ್ರೇ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಾಲೇಜುಗಳು ಆರಂಭವಾಗಲಿದೆ. ಕಳೆದ ವರ್ಷ ಹಿಜಾಬ್ ಕಾರಣಕ್ಕೆ ರಾಜ್ಯದ ಪಿಯು ಕಾಲೇಜುಗಳು ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದ್ದವು. ಮಾತ್ರವಲ್ಲ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ, ಹಿಜಾಬ್ ಅವಕಾಶ ನೀಡದಿರುವುದು ಹಾಗೂ ಕೇಸರಿ ಶಾಲಿಗೆ ಒತ್ತಾಯ ಸೇರಿದಂತೆ ನಾನಾ ಕಾರಣಕ್ಕೆ ಕಾಲೇಜುಗಳು ವಿವಾದದ ಗೂಡಾಗಿದ್ದವು. ಹೀಗಾಗಿ ಈ ಭಾರಿ ಮುತುವರ್ಜಿಯಿಂದ ಪ್ರವೇಶಾವಕಾಶ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಶಾಲಾ ಕಾಲೇಜುಗಳ ತರಗತಿಯ ಒಳಗೆ ಹಿಜಾಬ್ ಅವಕಾಶ ಇಲ್ಲ ಎಂದು ಮೊದಲೆ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಬಹುತೇಕ ಕಾಲೇಜುಗಳು ಸಮವಸ್ತ್ರವನ್ನು ಕಡ್ಡಾಯಗೊಳಿಸಿವೆ. ಇನ್ನೊಂದೆಡೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ತರಗತಿ ಸರಿಯಾಗಿ ನಡೆದಿರಲಿಲ್ಲ. ಹೀಗಾಗಿ ಈ ಭಾರಿ ಆಫ್ ಲೈನ್ ತರಗತಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅಲ್ಲದೇ ಈ ಬಾರಿ ದಾಖಲೆ ಪ್ರಮಾಣದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಪಿಯು ಕಾಲೇಜುಗಳಿಗೆ ಡಿಮ್ಯಾಂಡ್ ಹೆಚ್ಚಿದ್ದು, ತರಗತಿ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುವ ಪಿಯು ಇಲಾಖೆ ಸಿದ್ಧತೆ ಪೂರ್ಣಗೊಳಿಸಿದೆ.

ಇನ್ನೂ ಸರ್ಕಾರಿ ಪಿಯು ಕಾಲೇಜುಗಳಲ್ಲಿ 3 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಅಗತ್ಯವಿದ್ದು, ಈ ಬಗ್ಗೆ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ ಕಾಲೇಜು ಗಳಲ್ಲಿ ಮೂಲಸೌಕರ್ಯ ಸಹಿತ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಉಪನಿರ್ದೇಶಕರಿಗೆ ನಿರ್ದೇಶನಪಿಯು ಇಲಾಖೆ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಇದು ಅಲ್ಲದೇ ಮತ್ತೊಮ್ಮೆ ರಾಜ್ಯದಲ್ಲಿ ಹಿಜಾಬ್ ವಿವಾದ ಕಾಲೇಜುಗಳಲ್ಲಿ ತಲೆ ಎತ್ತದಂತೆ ನೋಡಿಕೊಳ್ಳಲು ಹೈಕೋರ್ಟ್ ತೀರ್ಪಿನ ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರವನ್ನು ಸಹ ಕೆಲ ಕಾಲೇಜುಗಳು ಪಡೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಯಾವುದೇ ವಿವಾದವಿಲ್ಲದೇ ಶೈಕ್ಷಣಿಕ ವರ್ಷಾರಂಭಕ್ಕೆ ಪಿಯು ಇಲಾಖೆ ಸಿದ್ಧವಾಗಿದೆ.

ಇದನ್ನೂ ಓದಿ : uttara pradesha shruti sharma : ಯುಪಿಎಸ್​ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್​ ಪಡೆದ ಶ್ರುತಿ ಶರ್ಮಾ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Integrated coaching : ಇಂಟಿಗ್ರೇಟೆಡ್ ಕೋಚಿಂಗ್ ಹೆಸರಿನಲ್ಲಿ ಕಾಲೇಜುಗಳಿಂದ ಸುಲಿಗೆ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

PUC College Start Tomorrow in Karnataka Hijab No Entry

Comments are closed.