ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಕರ್ನಾಟಕದಲ್ಲಿ ಪರೀಕ್ಷೆ ರದ್ದು

ಬೆಂಗಳೂರು: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆಗಳು ರದ್ದುಗೊಂಡ ಬೆನ್ನಲ್ಲೇ ಕರ್ನಾಟಕದಲ್ಲೂ ದ್ವಿತೀಯ ಪಿಯುಸಿ  ಪರೀಕ್ಷೆ ರದ್ದು ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಸಚಿವ ಸುರೇಶ್‍ಕುಮಾರ್, ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರಲ್ಲಿ ಪಾಸ್ ಮಾಡಲು ಸರ್ಕಾರ ನಿರ್ಧಾರ ಘೋಷಿಸಿದ್ದಾರೆ. ರಾಜ್ಯ ದಲ್ಲಿ ಪರೀಕ್ಷೆ ನಡೆಸುವುದು, ರದ್ದಾಗುವುದು ತಜ್ಞರು ನೀಡುವ ವರದಿಯ ಮೇಲೆ ನಿಂತಿತ್ತು. ತಜ್ಞರ ವರದಿ ಆಧಾರಿಸಿ ಸರ್ಕಾರ ಈಗ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ.

ಕಳೆದ ವರ್ಷ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಎಸ್‍ಎಸ್‍ಎಲ್‍ ಸಿ ಪರೀಕ್ಷೆ ನಡೆದಿತ್ತು.  ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಆದೆ ಕೊರೊನಾ ಕಾಲದಲ್ಲಿ ಪರೀಕ್ಷೆ ನಡೆಸುವುದು ಬಹಳ ಅಪಾಯಕಾರಿ. ಪರೀಕ್ಷೆ ನಡೆಸದೇ ಹೋದರೂ ಸರ್ಕಾರಕ್ಕೆ ಸಮಸ್ಯೆ ಯಾಗಲಿದೆ. ಒಟ್ಟಿನಲ್ಲಿ ಪರೀಕ್ಷೆ ಎಂಬ ಅಡಕತ್ತರಿಯಲ್ಲಿ ಶಿಕ್ಷಣ ಇಲಾಖೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರ‌ ಸಲಹೆ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆ.

Comments are closed.