ಭಾನುವಾರ, ಏಪ್ರಿಲ್ 27, 2025
HomeeducationRe Exams : ಪರೀಕ್ಷೆ ಇಲ್ಲದೇ ಪಾಸ್‌ ಆದವರಿಗೆ ಶಾಕ್‌ : ಮತ್ತೆ ಬರೆಯಲೇ ಬೇಕು...

Re Exams : ಪರೀಕ್ಷೆ ಇಲ್ಲದೇ ಪಾಸ್‌ ಆದವರಿಗೆ ಶಾಕ್‌ : ಮತ್ತೆ ಬರೆಯಲೇ ಬೇಕು ಪರೀಕ್ಷೆ

- Advertisement -

ಶಿವಮೊಗ್ಗ: ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್‌ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸೋದಕ್ಕೂ ವಿದ್ಯಾರ್ಥಿಗಳು ಭಯಪಟ್ಟಿದ್ದರು. ಆದರೆ ರಾಜ್ಯ ಸರಕಾರ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪರೀಕ್ಷೆ ಇಲ್ಲದೇ ಪಾಸ್‌ ಆಗಿರುವ ವಿದ್ಯಾರ್ಥಿಗಳಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಪರೀಕ್ಷೆ ಬರೆಯದೇ ಉತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ (Re Exams) ಎದುರಿಸಬೇಕಾದ ಸಂದಿಗ್ದತೆಗೆ ಸಿಲುಕಿದ್ದಾರೆ.

ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿಯೂ (Kuvempu University) 2019-20 ನೇ ಸಾಲಿನಲ್ಲಿ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೇ ಪಾಸ್ ಮಾಡಲಾಗಿತ್ತು. ಪರೀಕ್ಷೆ ನಡೆಸದೇ ಪಾಸ್ ಮಾಡಿದಕ್ಕೆ ಸಿಂಡಿಕೇಟ್ ಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಲಪತಿ ಪ್ರೋ.ವೀರಭದ್ರಯ್ಯ ತಿಳಿಸಿದ್ದಾರೆ.

2019-20 ನೇ ಸಾಲಿನಲ್ಲಿ ಕೋವಿಡ್​ನಿಂದಾಗಿ ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾನಿಯಲದ ಸಿಂಡಿಕೇಟ್‌ ಸಭಯೆಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿವಿಯು ಸುಮಾರು 24 ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸ್ ಮಾಡಿದ್ದರ ಕುರಿತು ಸಿಂಡಿಕೇಟ್ ಸದಸ್ಯರೇ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ದೂರ ನೀಡಿದ್ದರು. ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು (Re Exams) ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಎದುರಾಗಬಹುದಾದ ಕಾನೂನು ತೂಡಗಿನ ಕುರಿತು ಸಲಹೆ ಪಡೆಯಲು ಕುಲಸಚಿವರಿಗೆ ಸೂಚನೆ ನೀಡಲಾಗಿದೆ ಎಂದರು.‌

ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಹಲವು ವಿಚಾರಗಳ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಳದ ಕುರಿತು ನಿರ್ಣಯಿಸಲಾಗಿದೆ. ಸಂಭಾವನೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕುಲಸಚಿವರ ಅಧ್ಯಕ್ಷತೆಯಲ್ಲಿ ಕುಲಸಚಿವ (ಪರೀಕ್ಷಾಂಗ), ಸಿಂಡಿಕೇಟ್ ಸದಸ್ಯರಾದ ಶ್ರೀ ಜಿ. ಧರ್ಮಪ್ರಸಾದ್, ಶ್ರೀ ಮಂಜುನಾಥ ಎನ್.ಆರ್ ಮತ್ತು ಹಣಕಾಸು ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗಿತ್ತು. ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಶೀಲನೆ ಮತ್ತು ನಿರ್ಣಯಕ್ಕಾಗಿ ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಯಿತು. ಇದನ್ನು ಜಾರಿಗೆ ತರಬೇಕೆಂದು ಸಿಂಡಿಕೇಟ್ ಸದಸ್ಯರಾದ ಶ್ರೀ ಬಿ. ನಿರಂಜನಮೂರ್ತಿ, ಶ್ರೀ ಹೆಚ್.ಬಿ. ರಮೇಶ್ ಬಾಬು, ಶ್ರೀ ಬಳ್ಳೇಕೆರೆ ಸಂತೋಷ್, ಶ್ರೀ ಕಿರಣ್ ರವೀಂದ್ರ ದೇಸಾಯಿ, ಶ್ರೀ ರಾಮಲಿಂಗಪ್ಪ ಹೆಚ್. ಹಾಗೂ ಶ್ರೀ ಎಸ್ ಆರ್. ನಾಗರಾಜ್ ಇವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸದರಿ ಸಭೆಯು ಕೆಲವೊಂದು ತಿದ್ದುಪಡಿಗಳೊಂದಿಗೆ ವರದಿ ಅಂಗೀಕರಿಸಿದ್ದು, ಅದರಂತೆ ಈ ಕೆಳಕಂಡಂತೆ ಎಂಟು ವಿವಿಧ ಹಂತಗಳಲ್ಲಿ ಸಂಭಾವನೆ/ವೇತನವನ್ನು ಪರಿಷ್ಕರಿಸಲಾಗಿದೆ.

ಅತಿಥಿ ಉಪನ್ಯಾಸಕರ ಪರಿಷ್ಕೃತ ವೇತನ :

  • 15 ವರ್ಷ ಹಾಗೂ ಹೆಚ್ಚಿನ ಸೇವೆ : 45.000 ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಪರಿಗಣಿಸಿ )
  • 15 ವರ್ಷ ಹಾಗೂ ಹೆಚ್ಚಿನ ಸೇವೆ : 40,000 ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಇಲ್ಲದವರಿಗೆ )
  • 10 ವರ್ಷ ಮತ್ತು 15 ವರ್ಷಕ್ಕಿಂತ ಕಡಿಮೆ ಸೇವೆ : 38,000 ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಪರಿಗಣಿಸಿ )
  • 10 ವರ್ಷ ಮತ್ತು 15 ವರ್ಷಕ್ಕಿಂತ ಕಡಿಮೆ ಸೇವೆ : 36,000ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಇಲ್ಲದವರಿಗೆ )
  • 5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ : 35,000 ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಪರಿಗಣಿಸಿ )
  • 5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ : 33,000 ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಇಲ್ಲದವರಿಗೆ )
  • 5 ವರ್ಷ ಕ್ಕಿಂತ ಕಡಿಮೆ ಸೇವೆ : 31,000.ರೂ. ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಪರಿಗಣಿಸಿ )
  • 5 ವರ್ಷ ಕ್ಕಿಂತ ಕಡಿಮೆ ಸೇವೆ : ರೂ. 30,000 ( ಸೇವಾನುಭವ, ಯು.ಜಿ.ಸಿ ನಿಯಮ, ವಿದ್ಯಾರ್ಹತೆ ಇಲ್ಲದವರಿಗೆ ) ವೇತನವನ್ನು ನಿಗದಿ ಮಾಡಿದೆ. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಭತ್ಯೆಯನ್ನು ವೇತನ ಸಹಿತ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಕುಲಪತಿ ಪ್ರೋ. ವೀರಭದ್ರಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ : ಕನ್ನಡ ಶಾಲೆ ಉಳಿವಿಗೆ ಪಣತೊಟ್ಟ ಉದ್ಯಮಿ : ಗಿಳಿಯಾರು ಶಾಂಭವಿ ಶಾಲೆಗೆ 40 ಕೋಟಿ ರೂ. ದಾನ ಮಾಡಿದ ವಿನೋದ್‌ ಕುಮಾರ್

ಇದನ್ನೂ ಓದಿ : PUC Exam Time Table : ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ

Re Exams Shock For Those Passing Without Exam in Kuvempu University

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular