UP Election : ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ : 2ನೇ ಬಾರಿಗೆ ಯೋಗಿ ಸರ್ಕಾರ

ಲಖನೌ : ದೇಶದ ಗಮನ ಸೆಳೆದಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತವನ್ನು ತಲುಪಿದೆ. ಉತ್ತರ ಪ್ರದೇಶದಲ್ಲಿ (UP Election ) ಈ ಬಾರಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಮತ್ತೆ ಯುಪಿಯಲ್ಲಿ ಯೋಗಿ ಸರಕಾರ ರಚನೆಯಾಗಲಿದೆ. ಈ ಮೂಲಕ ಬಿಜೆಪಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಹೊಸ ದಾಖಲೆ ಬರೆದಿದೆ.

ಉತ್ತರ ಪ್ರದೇಶದಲ್ಲಿನ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 271 ಸ್ಥಾನಗಳಲ್ಲಿ ಯೋಗಿ ಆದಿತ್ಯಾನಾಥ್ (Yogi Adityanath) ನೇತೃತ್ವದ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಅಧಿಕಾರದ ಗದ್ದುಗೆಗೆ ಏರುವ ಕನಸು ಕಾಣುತ್ತಿದ್ದ ಸಮಾಜವಾದಿ ಪಾರ್ಟಿ ಈ ಬಾರಿಯೂ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆದರೆ ಮಾಯಾವತಿ ಅವರ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ಬಿಜೆಪಿ ಆರ್ಭಟದಿಂದ ಧೂಳಿಪಟವಾಗಿದೆ.

ಉತ್ತರ ಪ್ರದೇಶದಲ್ಲಿ (UP Election) 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಅಲ್ಲದೇ ಸಮಾಜವಾದಿ ಪಾರ್ಟಿ 47, ಬಿಎಸ್‌ಪಿ 19 ಹಾಗೂ ಕಾಂಗ್ರೆಸ್‌ 07 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿದ್ದವು. ಆದರೆ ಈ ಬಾರಿ 271 ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಹಾಗೂ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಮೂಲಕ ಬಿಜೆಪಿಗೆ ಕಳೆದ ಬಾರಿಗಿಂತ ಕಡಿಮೆ ಸೀಟುಗಳನ್ನು ಪಡೆದುಕೊಂಡಿದೆ. ಆದರೆ ಸಮಾಜವಾದಿ ಪಾರ್ಟಿ ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಾರ್ಟಿ ಎರಂಡಿ ದಾಟುವಲ್ಲಿ ವಿಫಲವಾಗಿವೆ.

ಉತ್ತರ ಪ್ರದೇಶದಲ್ಲಿ ಸತತವಾಗಿ ಗೆದ್ದು ಆಡಳಿತ ಪಕ್ಷ ಅಧಿಕಾರಕ್ಕೆ ಏರಿದ ಇತಿಹಾಸ ತೀರಾ ಕಡಿಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಗೆಲ್ಲುವ ಮೂಲಕ ಅಧಿಕಾರಕ್ಕೇರಿದೆ. ಒಂದೊಮ್ಮೆ ಯೋಗಿ ಆದಿತ್ಯನಾಥ್‌ (Yogi Adityanath) ಅವರೇ ಸಿಎಂ ಆದ್ರೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ. ಅಲ್ಲದೇ ಐದು ವರ್ಷಗಳ ಕಾಲ ಪೂರ್ಣ ಆಡಳಿತವನ್ನು ನಡೆಸಿ, ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿ ಅನ್ನೋ ಖ್ಯಾತಿಗೂ ಪಾತ್ರರಾಗಲಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶ ಚುನಾವಣೆ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.

ಇದನ್ನೂ ಓದಿ : ಕಾಮಗಾರಿಗೆ 40% ಕಮಿಷನ್‌ : ಈಶ್ವರಪ್ಪ ಭ್ರಷ್ಟಾಚಾರ, ಹೈಕಮಾಂಡ್‌ಗೆ ದೂರು

ಇದನ್ನೂ ಓದಿ : ರಾಜಕೀಯಕ್ಕೆ ಬರ್ತಾರಾ ಜ್ಯೂನಿಯರ್ ರೆಬೆಲ್ ಅಭಿಷೇಕ್‌ ಅಂಬರೀಷ್‌ : ಏನಂದ್ರು ಗೊತ್ತಾ ಸುಮಲತಾ

( UP Election : Uttara Pradesh election results bjp win )

Comments are closed.