ಬೆಂಗಳೂರು: (SC Student Scholarship) ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾರ್ಚ್ 15, 2023 ರವರೆಗೆ ವಿಸ್ತರಿಸಿದೆ. ಅರ್ಹ ವಿದ್ಯಾರ್ಥಿಗಳು ಇಲಾಖೆಯ ವೆಬ್ಸೈಟ್ www.tw.kar.nic.in ಮೂಲಕ ಅರ್ಜಿ ಸಲ್ಲಿಸಬಹುದು.
ಕೋರ್ಸ್ಗಳ ವಿವರಗಳು:
ಎರಡನೇ/3ನೇ ಡಿಪ್ಲೊಮಾ ಪಾಲಿಟೆಕ್ನಿಕ್-20,000/-
ಪದವಿ-25,000 ರೂ.
ಸ್ನಾತಕೋತ್ತರ -ಎಂಎ., MSc, M.Com, MBA, MCA,, MPA., ಇತರೆ 30,000 ರೂ.
ಕೃಷಿ/ಇಂಜಿನಿಯರಿಂಗ್/ವೈದ್ಯಕೀಯ / ಪಶುವೈದ್ಯಕೀಯ-35,000 ರೂ. ನಂತೆ ಪ್ರತಿ ವಿದ್ಯಾರ್ಥಿಗೆ ಪ್ರೋತ್ಸಾಹಕ ಮೊತ್ತ ನೀಡಲಾಗುವುದು.
ಪಿಯುಸಿ ಮತ್ತು ನಂತರದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು ಮತ್ತು ಸಲ್ಲಿಸಿದ ಅರ್ಜಿಯನ್ನು ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ: 205, 2ನೇ ಮಹಡಿ, ಜಿಲ್ಲಾದಳಿತ ಭವನ ಕಛೇರಿ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇವರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
SSLC ಅಂಕಪಟ್ಟಿ ಪ್ರತಿ
ಜಾತಿ ಮತ್ತು ಆದಾಯ ಪ್ರಮಾಣಪತ್ರ
ಆಧಾರ್ ಕಾರ್ಡ್
ಹಿಂದಿನ ತರಗತಿ ಪ್ರಮಾಣಪತ್ರ/ಅಂಕಗಳು
ಪ್ರಸ್ತುತ ವಿದ್ಯಾರ್ಥಿಗಳ ವೈಯಕ್ತಿಕ ಬ್ಯಾಂಕ್ ಖಾತೆ ವಿವರಗಳು
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸಲು ಪಿಯುಸಿ/ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29787448 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀ ತ್ಯಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Temporary selection list of teachers: ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅನ್ಯಾಯ: ಕೋರ್ಟ್ ಮೊರೆ ಹೋದ ಅಭ್ಯರ್ಥಿಗಳು
ಇದನ್ನೂ ಓದಿ : PUC Annual Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ
ಇದನ್ನೂ ಓದಿ : Changes in PUC question paper: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ದೊಡ್ಡ ಬದಲಾವಣೆ
SC Student Scholarship: Scheduled Caste Student Scholarship: Application date extended till March 15