H3N2 inFluenza A virus: H3N2 ಕೊರೊನಾಕ್ಕಿಂತಲೂ ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

(H3N2 inFluenza A virus) ಕೊರೊನಾ ಎನ್ನುವ ಮಹಾಮಾರಿ ಒಂದೊಮ್ಮೆ ಇಡೀ ದೇಶವನ್ನಷ್ಟೇ ಅಲ್ಲದೇ ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿತ್ತು. ಈ ಕೊರೊಮಾ ಮಹಾಮಾರಿಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದರು. ಕೊರೊನಾ ಹೋಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಹೊಸ ರೂಪದಲ್ಲಿ ಕೊರೊನಾ ಸೋಂಕುಗಳು ಮತ್ತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿವೆ. ಇಲ್ಲಿಯವರೆಗೆ ಕೊರೊನಾ, ನಂತರ ಒಮಿಕ್ರಾನ್‌, ಈಗ H3N2 ಸೋಂಕು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ದೇಶದ ಮೇಲೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದರಿಂದ ಜನತೆ ಮತ್ತೆ ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನಿರಂತರವಾಗಿ ಕೆಮ್ಮು, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿರುವದನ್ನು ಗಮನಿಸುತ್ತಿದ್ದು, ಇದಕ್ಕೆ H3N2 ವೈರಸ್‌ ಕಾರಣ ಎಂದು ಐಸಿಎಂಆರ್‌ ಹೇಳಿದೆ. ಕೊರೊನಾ ರೀತಿಯಲ್ಲೇ ಲಕ್ಷಣಗಳನ್ನು ಹೊಂದಿರುವ H3N2 ವೈರಸ್‌ ದೇಶದಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ.

H3N2 ವೈರಸ್‌ ಎಂದರೇನು?
H3N2v ಎಂಬುದು ಮಾನವರಲ್ಲದ ಇನ್ಫ್ಲುಯೆನ್ಸ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಹಂದಿಗಳಲ್ಲಿ ಪರಿಚಲನೆಯಾಗುತ್ತದೆ ಮತ್ತು ಅದು ಮನುಷ್ಯರಿಗೆ ಸೋಂಕು ತರುತ್ತದೆ. ಹಂದಿಗಳಲ್ಲಿ ಸಾಮಾನ್ಯವಾಗಿ ಹರಡುವ ವೈರಸ್‌ಗಳು “ಹಂದಿ ಇನ್‌ಫ್ಲುಯೆನ್ಸ ವೈರಸ್‌ಗಳು.” ಈ ವೈರಸ್‌ಗಳು ಮನುಷ್ಯರಿಗೆ ಸೋಂಕು ತಗುಲಿದಾಗ, ಅವುಗಳನ್ನು “ವೇರಿಯಂಟ್” ವೈರಸ್‌ಗಳು ಎಂದು ಕರೆಯಲಾಗುತ್ತದೆ.

H3N2 ವೈರಸ್‌ ಹೇಗೆ ಹರಡುತ್ತದೆ?
2011 ರಲ್ಲಿ, ಏವಿಯನ್, ಹಂದಿ ಮತ್ತು ಮಾನವ ವೈರಸ್‌ಗಳ ಜೀನ್‌ಗಳು ಮತ್ತು 2009 ರ H1N1 ಸಾಂಕ್ರಾಮಿಕ ವೈರಸ್ M ಜೀನ್‌ನೊಂದಿಗೆ ನಿರ್ದಿಷ್ಟ H3N2 ವೈರಸ್ ಪತ್ತೆಯಾಗಿದೆ. ವೈರಸ್ 2010 ರಲ್ಲಿ ಹಂದಿಗಳಲ್ಲಿ ಪರಿಚಲನೆಯಾಯಿತು ಮತ್ತು 2011 ರಲ್ಲಿ ಜನರಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. H3N2 ವೈರಸ್‌ ಇನ್ಫ್ಲುಯೆನ್ಞಾ ಎ ವೈರಸ್‌ ನ ಉಪತಳಿಯಾಗಿದ್ದು, ಈ ವೈರಸ್‌ ಮೊದಲು ಅಮೇರಿಕಾದಲ್ಲಿ ಕಂಡುಬಂದಿತ್ತು. ಹದಿನೈದು ವರ್ಷಕ್ಕಿಂದ ಕೆಳಗಿನ ಮಕ್ಕಳಲ್ಲಿ ಈ ವೈರಸ್‌ ಪತ್ತೆಯಾಗಿದ್ದು, ಐವತ್ತು ವರ್ಷ ಮೇಲ್ಪಟ್ಟವರನ್ನೂ ಕೂಡ ಈ ವೈರಸ್‌ ಕಾಡುತ್ತಿದೆ. ಈ ಸೋಂಕು ಗಾಳಿಯಿಂದ ಹರಡಲಿದೆ. ಇನ್ನೂ ಸೋಂಕಿತ ವ್ಯಕ್ತಿಗಳಿಂದ ಕೂಡ ಹರಡಲಿದೆ.

H3N2 ವೈರಸ್‌ ಎಷ್ಟು ಅಪಾಯಕಾರಿ?
ಒಬ್ಬರಿಂದ ಒಬ್ಬರಿಗೆ, ಅಥವಾ ಗಾಳಿಯ ಮೂಲಕ ಹರಡುವ ಈ ವೈರಸ್‌ ಅತೀ ವೇಗವಾಗಿ ಹರಡುತ್ತದೆ. ಕೊರೊನಾ ಮಾದರಿಯಲ್ಲೇ ಈ ವೈರಸ್‌ ಹರಡಲಿದ್ದು, ಒಂದು ವಾರದವರೆಗೆ ಕಾಡಲಿದೆ. ಕೆಲವರಲ್ಲಿ ದೀರ್ಘಕಾಲದವರೆಗೂ ಕಾಡಬಹುದು. ಕೆಮ್ಮು, ಜ್ವರ, ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ, ಅತಿಸಾರ, ಮೈಕೈ ನೋವು, ತಲೆ ನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕಾಲೋಚಿತ ಇನ್ಫ್ಲುಯೆನ್ಸ ಸಹ ಗಂಭೀರ ಕಾಯಿಲೆಯಾಗಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಕೆಲವೊಮ್ಮೆ ಕಾಲೋಚಿತ ಇನ್ಫ್ಲುಯೆನ್ಸವು ನ್ಯುಮೋನಿಯಾದಂತಹ ತೊಡಕುಗಳಿಗೆ ಕಾರಣವಾಗಬಹುದು. ಇದು ಆಸ್ಪತ್ರೆಗೆ ದಾಖಲು ಮತ್ತು ಸಾವಿಗೆ ಕಾರಣವಾಗಬಹುದು.

ಇದನ್ನೂ ಓದಿ : Guidelines for H3N2 infection: H3N2 ಸೋಂಕಿನ ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಸುಧಾಕರ್‌

H3N2 ವೈರಸ್‌ ಬಗ್ಗೆ ತಜ್ಞರು ಹೇಳುವುದೇನು?
ಸಂಶೋಧನೆಯ ಮೂಲಕ ಉಸಿರಾಟದ ವೈರಸ್‌ಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ನಿಕಟ ನಿಗಾ ಇಡಲಾಗುತ್ತಿದೆ. ರೋಗನಿರ್ಣಯ ಪ್ರಯೋಗಾಲಯಗಳ ಜಾಲ ವಿಸ್ತರಿಸಲಾಗುತ್ತಿದೆ ಎಂದು ಐಸಿಎಂಆರ್ ಹೇಳಿದೆ. ಅಂತೆಯೇ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಹ ಐಸಿಎಂಆರ್ ಬಿಡುಗಡೆ ಮಾಡಿದೆ. ಇನ್ನೂ CDC ರಾಜ್ಯಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುವುದನ್ನು ಮುಂದುವರೆಸಿದೆ ಮತ್ತು H3N2v ಯ ಮಾನವ ಪ್ರಕರಣಗಳನ್ನು ಪತ್ತೆಹಚ್ಚಲು ರಾಜ್ಯಗಳು ಕಣ್ಗಾವಲು ಮತ್ತು ಪ್ರಯೋಗಾಲಯ ಚಟುವಟಿಕೆಗಳನ್ನು ಮುಂದುವರೆಸಿದೆ. CDC ಸಹ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.

H3N2 inFluenza A virus: What is H3N2? How is this infection spread?: Do you know what experts say about it?

Comments are closed.