Karnataka Vs USA Cricket match: ಚಿನ್ನಸ್ವಾಮಿಯಲ್ಲಿ ನಾಳೆಯಿಂದ ಕರ್ನಾಟಕ Vs ಅಮೆರಿಕ ಮ್ಯಾಚ್, ಕ್ರಿಕೆಟ್ ಪ್ರಿಯರಿಗೆ ಫ್ರೀ ಎಂಟ್ರಿ

ಬೆಂಗಳೂರು: (Karnataka Vs USA Cricket match) ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಬೆಂಗಳೂರಿಗೆ ಆಗಮಿಸಿದ್ದು, ನಾಳೆಯಿಂದ ಆತಿಥೇಯ ಕರ್ನಾಟಕ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಅಮೆರಿಕ ಮತ್ತು ಕರ್ನಾಟಕ ತಂಡಗಳ ನಡುವಿನ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಕರ್ನಾಟಕ ತಂಡವನ್ನು ರಣಜಿ ಕ್ರಿಕೆಟಿಗ ಕೆ.ವಿ ಸಿದ್ಧಾರ್ಥ್ ಮುನ್ನಡೆಸಲಿದ್ದು, ಮತ್ತೊಬ್ಬ ರಣಜಿ ಆಟಗಾರ ಶುಭಾಂಗ್ ಹೆಗ್ಡೆ ಕೂಡ ತಂಡದಲ್ಲಿದ್ದಾರೆ. ಉಳಿದಂತೆ ರಾಜ್ಯದ ಪ್ರಮುಖ ಆಟಗಾರರು ವಿವಿಧ ತಂಡಗಳ ಐಪಿಎಲ್ ಕ್ಯಾಂಪ್’ಗಳಲ್ಲಿರುವ ಕಾರಣ ಕರ್ನಾಟಕದ 25ರ ವಯೋಮಿತಿಯ ತಂಡದ ಆಟಗಾರರು ಅಮೆರಿಕ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಲು ಭಾರತಕ್ಕೆ ಆಗಮಿಸಿದೆ. ವಿಶ್ವಕಪ್ ಟೂರ್ನಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿದ್ದು, ಅದಕ್ಕೂ ಮೊದಲು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಅರ್ಹತಾ ಸುತ್ತಿನ ಪಂದ್ಯಗಳಿಗೆ ಸಜ್ಜಾಗುತ್ತಿರುವ ಅಮೆರಿಕ ತಂಡ, ಅದಕ್ಕೂ ಮುನ್ನ ಕರ್ನಾಟಕ ತಂಡದ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲು ಬಯಸಿದೆ.

ಕರ್ನಾಟಕ ತಂಡದ ವಿರುದ್ಧ ಅಮೆರಿಕ ಆಡಲಿರುವ 5 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯ ಮಂಗಳವಾರ ಮತ್ತು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 3, 4 ಹಾಗೂ 5ನೇ ಪಂದ್ಯಗಳು ಬೆಂಗಳೂರಿನ ಹೊರವಲಯದ ಆಲೂರು ಬಳಿಯಿರುವ KSCA ಮೈದಾನದಲ್ಲಿ ಮುಂದಿನ ಭಾನುವಾರ, ಮಂಗಳವಾರ ಹಾಗೂ ಬುಧವಾರ ನಡೆಯಲಿವೆ.

ಕರ್ನಾಟಕ Vs ಅಮೆರಿಕ ಏಕದಿನ ಸರಣಿಯ ವೇಳಾಪಟ್ಟಿ
ಮಾರ್ಚ್ 07: ಮೊದಲ ಏಕದಿನ (ಎಂ.ಚಿನ್ನಸ್ನಾಮಿ ಕ್ರೀಡಾಂಗಣ, ಬೆಂಗಳೂರು)
ಮಾರ್ಚ್ 09: ಎರಡನೇ ಏಕದಿನ (ಎಂ.ಚಿನ್ನಸ್ನಾಮಿ ಕ್ರೀಡಾಂಗಣ, ಬೆಂಗಳೂರು)
ಮಾರ್ಚ್ 12: ಮೂರನೇ ಏಕದಿನ (KSCA ಕ್ರೀಡಾಂಗಣ, ಆಲೂರು; ಬೆಂಗಳೂರು)
ಮಾರ್ಚ್ 14: ನಾಲ್ಕನೇ ಏಕದಿನ (KSCA ಕ್ರೀಡಾಂಗಣ, ಆಲೂರು; ಬೆಂಗಳೂರು)
ಮಾರ್ಚ್ 15: ಐದನೇ ಏಕದಿನ (KSCA ಕ್ರೀಡಾಂಗಣ, ಆಲೂರು; ಬೆಂಗಳೂರು)

ಇದನ್ನೂ ಓದಿ : Irani Cup : ಕನ್ನಡಿಗ ಮಯಾಂಕ್ ಸಾರಥ್ಯದಲ್ಲಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ

ಇದನ್ನೂ ಓದಿ : ಸೆಲೆಬ್ರಿಟಿ ಕ್ರಿಕೆಟ್ ಲೀಗ್ : ಚೆನ್ನೈ ರೈನೋಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ : RCBಗೆ ಇಂದು ಡೆಲ್ಲಿ ಚಾಲೆಂಜ್, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಮಾಹಿತಿ

Karnataka Vs USA Cricket match: Karnataka Vs USA match from tomorrow at Chinnaswamy, free entry for cricket lovers

Comments are closed.