ಒಂದೆಡೆ ರಾಜ್ಯದಲ್ಲಿ ನೂತನ ಪಠ್ಯಪುಸ್ತಕ ವಿವಾದ ಸೃಷ್ಟಿಸಿದೆ. ಪರಿಷ್ಕರಣೆಗೊಂಡ ಪಠ್ಯಪುಸ್ತಕದ ವಿರುದ್ಧ ಈಗ ನಾಡಿನ ಸಾಹಿತಿಗಳು,ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಈಗಾಗಲೇ ಕಾರ್ಯಾರಂಭ ಮಾಡಿರೋ ಶಾಲೆಗಳಿಗೆ ಹಳೆಯ ಪಠ್ಯಪುಸ್ತಕಗಳೇ ಪೊರೈಕೆಗೊಳ್ಳುತ್ತಿದ್ದು, ಇದರ ವಿರುದ್ಧ ಶಿಕ್ಷಣ ಇಲಾಖೆ ಸಮರ ಸಾರಿದ್ದು, ಸೂಚನೆ ಮೀರಿ ಹಳೆಪಠ್ಯಕ್ರಮಗಳನ್ನು ಪೊರೈಸಿದ್ರೆ (Education Department Warning) ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.
ಈ ಬಗ್ಗೆ ವಿಸ್ಕೃತ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, 2022 ಮತ್ತು 23 ನೇ ಶೈಕ್ಷಣಿಕ ಸಾಲಿನಲ್ಲಿ 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನದ ಕನ್ನಡ, ಆಂಗ್ಲ, ತೆಲುಗು, ತಮಿಳು, ಮರಾಠಿ, ಉರ್ದು ಹಾಗೂ ಹಿಂದಿ ಮಾಧ್ಯಮದ ಪುಸ್ತಕಗಳನ್ನು ಪರಿಷ್ಕರಣೆಗೊಳಿಸಲಾಗಿದೆ. ಮಾತ್ರವಲ್ಲದೇ, 1, 2, 4, 5, 6, 7, 8, 9, 10 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಗಳು,6,8,9 ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಪುಸ್ತಕಗಳು 7,8,9 ನೇ ತರಗತಿಯ ತೃತೀಯ ಭಾಷೆ ಕನ್ನಡದ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಈ ಪಠ್ಯಗಳನ್ನು ರಾಜ್ಯದ 204 ಬ್ಲಾಕ್ ಗಳಿಗೆ ಪೂರೈಸಲಾಗುತ್ತಿದೆ. ಆದರೆ ಕೆಲ ಕಡೆಗಳಲ್ಲಿ ಹಳೆಯ ಪಠ್ಯಗಳನ್ನು ಪೊರೈಕೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಿದ್ದರೂ ಹಲವೆಡೆ ಹಳೆಯ ಪಠ್ಯ ಪೊರೈಕೆಯಾಗುತ್ತಿರುವ ದೂರು ಬಂದಿದೆ. ಯಾವುದೇ ಕಾರಣಕ್ಕೂ ಹಳೆಯ ಪಠ್ಯ ಪೊರೈಕೆ ಮಾಡಬಾರದು. ಒಂದೊಮ್ಮೆ ಹಳೆಯ ಪಠ್ಯ ಪೊರೈಸಿದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಸಿದೆ.

ಅಲ್ಲದೇ ಒಂದೊಮ್ಮೆ ಈಗಾಗಲೇ ಹಳೆಯ ಪಠ್ಯಗಳನ್ನು ಪೊರೈಸಿದ್ದಲ್ಲಿ ಅವುಗಳನ್ನು ತಕ್ಷಣ ಹಿಂಪಡೆಯುವಂತೆಯೂ ಶಿಕ್ಷಣ ಇಲಾಖೆ ಸೂಚಿಸಿದೆ. ಒಂದೊಮ್ಮೆ ಸರ್ಕಾರದ ಈ ಆದೇಶ ಪಾಲಿಸುವಲ್ಲಿ ವಿಫಲವಾದಲ್ಲಿ ಬ್ಲಾಕ್ ಹಂತದ ಪಠ್ಯಪುಸ್ತಕ ನೋಡಲ್ ಆಫೀಸರ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಂತದ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತು ಕ್ರಮಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ (Education Department Warning ) ಆದೇಶಿಸಿದೆ.

ಮೂಲಗಳ ಮಾಹಿತಿ ಪ್ರಕಾರ ಸರ್ಕಾರ ಈ ವರ್ಷ ಪಠ್ಯಪುಸ್ತಕ ಮುದ್ರಣಕ್ಕೆ ನೀಡುವಾಗಲೇ ಸಾಕಷ್ಟು ವಿಳಂಬ ಮಾಡಿದೆ. ಪರಿಷ್ಕರಣೆಯ ಕಾರಣಕ್ಕೆ ಪಠ್ಯಪುಸ್ತಕ ಮುದ್ರಣ ವಿಳಂಬ ವಾಗಿದೆ. ಅದರಲ್ಲೂ ಸರ್ಕಾರ ಈ ವರ್ಷ ಅವಧಿಗೂ ಮುನ್ನ ಶಾಲೆ ಆರಂಭಿಸಿರೋದರಿಂದ ಮತ್ತಷ್ಟು ಸಮಸ್ಯೆಯಾಗ್ತಿದೆ. ಶಾಲೆಗಳಿಗೆ ಹೊಸ ಪಠ್ಯ ಪುಸ್ತಕ ತಲುಪಿಸೋ ಸರ್ಕಸ್ ನಲ್ಲಿರೋ ಸರ್ಕಾರಕ್ಕೆ ಹಳೆ ಪಠ್ಯ ಪೊರೈಕೆ ಸಹಿಸಲಾರದಂತಾಗಿದ್ದು ಇದಕ್ಕಾಗಿ ಖಡಕ್ ಆದೇಶ (Education Department Warning) ಹೊರಡಿಸಿದೆ .
ಶಾಲಾರಂಭಕ್ಕೆ ತೋರಿದ ಹುಮಸ್ಸು, ಪಠ್ಯ ವಿತರಣೆಯಲ್ಲಿ ಯಾಕಿಲ್ಲ ಸಚಿವರೇ ?
ಬೇಸಿಗೆ ಬೇಗೆಯ ನಡುವಲ್ಲೇ ಹಠಕ್ಕೆ ಬಿದ್ದವರಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹದಿನೈದು ದಿನಗಳ ಕಾಲ ಮುಂಚಿತವಾಗಿ ಶಾಲೆಗಳನ್ನು ಆರಂಭಿಸಿದ್ದರು. ಕಲಿಕಾ ಚೇತರಿಕೆ ಮಾಡುವುದಾಗಿ ಹೇಳಿದ್ದ ಸಚಿವರು, ಸರಕಾರಿ ಶಾಲೆಗಳಲ್ಲಿ ಮಾತ್ರವೇ ಮಳೆಬಿಲ್ಲು ಕಾರ್ಯಕ್ರಮ ನಡೆಸಿದ್ದಾರೆ. ಖಾಸಗಿ, ಅನುದಾನಿತ ಶಾಲೆಯ ಶಿಕ್ಷಕರು ಹದಿನೈದು ದಿನ ಏನು ಮಾಡಬೇಕು ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಜೊತೆಗೆ ಹಳೆ ಪಠ್ಯವನ್ನು ಬೋಧನೆ ಮಾಡುವುದಕ್ಕೆ ಶಿಕ್ಷಣ ಇಲಾಖೆ ಬಿಡುತ್ತಿಲ್ಲ, ಇನ್ನೊಂದೆಡೆಯಲ್ಲಿ ಹೊಸ ಪಠ್ಯ ಪುಸ್ತಕವೂ ವಿತರಣೆಯಾಗಿಲ್ಲ. ಪಠ್ಯ ಪುಸ್ತಕ ವಿತರಣೆ ಮಾಡಿದ ನಂತರ ಶಾಲೆಗಳನ್ನು ಆರಂಭಿಸಬೇಕಾಗಿದ್ದ ಸಚಿವರು ತರಾತುರಿಯಲ್ಲಿ ಶಾಲಾರಂಭ ಮಾಡಿರುವುದರ ಹಿಂದೆ ಖಾಸಗಿ ಮಾಫಿಯಾದ ಕೈವಾಡವಿದೆ ಅನ್ನೋ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ : CET rules : ಸಿಇಟಿಗೆ ನೋ ಹಿಜಾಬ್, ಆಭರಣ ಧರಿಸಿಯೂ ಪರೀಕ್ಷೆ ಬರೆಯುವಂತಿಲ್ಲ
ಇದನ್ನೂ ಓದಿ : Textbook Controversy : ಪಠ್ಯಪುಸ್ತಕ ವಿವಾದ ಜಟಿಲ : ಸಿಎಂ ಮಧ್ಯಪ್ರವೇಶಕ್ಕೆ ಬರಗೂರು ಆಗ್ರಹ
Schools distributing Old Books, Education Department Warning