dancing champion winner : ಡ್ಯಾನ್ಸಿಂಗ್​ ಚಾಂಪಿಯನ್​ ವಿಜೇತರಾಗಿ ಹೊರಹೊಮ್ಮಿದ ಕೆಜಿಎಫ್​ ಖ್ಯಾತಿಯ ಅನ್ಮೋಲ್​ – ಆದಿತ್ಯ

dancing champion winner : ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಡ್ಯಾನ್ಸಿಂಗ್​ ಚಾಂಪಿಯನ್​​ನ ಫಿನಾಲೆ ಕಾರ್ಯಕ್ರಮ ನಿನ್ನೆ ಪ್ರಸಾರವಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ಜ್ಯೂನಿಯರ್​ ರಾಕಿ ಭಾಯ್​ ಖ್ಯಾತಿಯ ಅನ್ಮೋಲ್​ ಹಾಗೂ ಆದಿತ್ಯ ಟ್ರೋಫಿಯನ್ನು ಗೆದ್ದಿದ್ದಾರೆ. ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ವಿಜೇತರಿಗೆ ಪುನೀತ್​ ರಾಜ್​ ಕುಮಾರ್​ ಟ್ರೋಫಿ ಹಾಗೂ ಐದು ಲಕ್ಷ ರೂಪಾಯಿ ಬಹುಮಾನವನ್ನು ವಿತರಿಸಿದರು.


ಡ್ಯಾನ್ಸಿಂಗ್​ ಚಾಂಪಿಯನ್​ ಸ್ಪರ್ಧೆಯಲ್ಲಿ ವಿಜೇತರಾಗಿರುವ ಅನ್ಮೋಲ್​​ ಕೆಜಿಎಫ್​​ ಸಿನಿಮಾದಲ್ಲಿ ಯಶ್​ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಕೆಲವೊಂದು ಕಿರುಚಿತ್ರಗಳಲ್ಲಿಯೂ ಅನ್ಮೋಲ್​ ನಟಿಸಿದ್ದಾರೆ. ಡ್ಯಾನ್ಸಿಂಗ್​ ಚಾಂಪಿಯನ್​​ನ ಆರಂಭದ ಎಪಿಸೋಡ್​ಗಳಿಂದಲೂ ದಾವಣೆಗೆರೆ ಮೂಲದ ಆದಿತ್ಯ ಜೊತೆಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದರು.


ಈ ಕಾರ್ಯಕ್ರಮದಲ್ಲಿ ಚಂದನಾ – ಅಕ್ಷತಾ, ಆರತಿ- ಸಾಗರ್​, ಅರ್ಜುನ್​​ – ರಾಣಿ, ಆರಾಧ್ಯ -ನಿವೇದಿತಾ ಹಾಗೂ ಅನ್ಮೋಲ್​ – ಆದಿತ್ಯ ಫಿನಾಲೆಯ ಸ್ಪರ್ಧಿಗಳಾಗಿದ್ದರು. ಈ ಸ್ಪರ್ಧೆಯಲ್ಲಿ ಆರಾಧ್ಯ – ನಿವೇದಿತಾ ಮೊದಲ ರನ್ನರ್​ ಅಪ್​, ಚಂದನಾ – ಅಕ್ಷತಾ ಸೆಕೆಂಡ್​ ರನ್ನರ್​ ಅಪ್​ , ಆರತಿ-ಸಾಗರ್​​ ನಾಲ್ಕನೇ ಸ್ಥಾನ ಹಾಗೂ ರಾಣಿ – ಅರ್ಜುನ್​ ಐದನೇ ಸ್ಥಾನವನ್ನು ಪಡೆದಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಲಾಗಿದ್ದ ಈ ಕಾರ್ಯಕ್ರಮದ ಟ್ರೋಫಿಯನ್ನು ಪುನೀತ್​ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅನಾವರಣಗೊಳಿಸಿದರು. ಅಲ್ಲದೇ ಎಲ್ಲಾ ಸ್ಪರ್ಧಿಗಳಿಗೂ ಶುಭಾಶಯ ಕೋರಿದ್ದರು. ನಟ ಧ್ರುವ ಸರ್ಜಾ ಕೂಡ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿ ವಿಜೇತರ ಹೆಸರನ್ನು ಘೋಷಣೆ ಮಾಡಿದ್ದಾರ. ನಟ ವಿಜಯ ರಾಘವೇಂದ್ರ, ನಟಿ ಮೇಘನಾ ರಾಜ್​ ಸರ್ಜಾ ಹಾಗೂ ನೃತ್ಯ ನಿರ್ದೇಶಕಿ ಮಯೂರಿ ಈ ಕಾರ್ಯಕ್ರಮದ ನಿರ್ಣಾಯಕರಾಗಿದ್ದರು. ಅಕುಲ್​ ಬಾಲಾಜಿ ಈ ರಿಯಾಲಿಟಿ ಶೋ ಆ್ಯಂಕರ್​ ಆಗಿದ್ದರು.

ಇದನ್ನು ಓದಿ : Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ

ಇದನ್ನೂ ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

colors kannada dancing champion winner aditya and anmol

Comments are closed.