SSLC ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ ಪರೀಕ್ಷೆ : ಬದಲಾಯ್ತು ಪ್ರಶ್ನೆ ಪತ್ರಿಕೆಗಳ ವಿನ್ಯಾಸ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಅತಂತ್ರವಾಗಿದೆ. ಈ‌ ನಡುವಲ್ಲೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಆದರೆ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆ ಸುಲಭವಾಗಲಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಶೇಕಡಾ 30 ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸ ಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸುಲಭಗೊಳಿಸುವ ಸಲುವಾಗಿ ಈ ಬಾರಿ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

ಈ ಬಾರಿಯ ಪ್ರಶ್ನೆ ಪತ್ರಿಕೆಯಲ್ಲಿ ಶೇಕಡ 5 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿದ್ದು, ಉಳಿದಂತೆ ಶೇಕಡ 40 ರಷ್ಟು ಸರಳ ಪ್ರಶ್ನೆಗಳು ಶೇಕಡ 20 ರಷ್ಟು ಸ್ವಲ್ಪ ಕಷ್ಟಕರ ಪ್ರಶ್ನೆಗಳು ಇರಲಿವೆ.  ಪ್ರಬಂಧ ಮಾದರಿ ಪ್ರಶ್ನೆಗಳ ಸಂಖ್ಯೆಯನ್ನು ಕೂಡ ಕಡಿತ  ಮಾಡಲಾಗುತ್ತದೆ.

ಈ ಬಾರಿ ಕಷ್ಟದ ಪ್ರಶ್ನೆಗಳ ಬದಲಿಗೆ ಸುಲಭ ವಾದ ಮತ್ತು ನೇರ ಪ್ರಶ್ನೆಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತೆ ಪರೀಕ್ಷೆ ವಿನ್ಯಾಸ ಬದಲಿಸಿ ಸುಲಭಗೊಳಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.

Comments are closed.