SSLC Grace mark: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಈ ಬಾರಿ ಸಿಗಲಿದೆ ಶೇ 10 ರಷ್ಟು ಗ್ರೇಸ್‌ ಮಾರ್ಕ್‌

ಬೆಂಗಳೂರು : (SSLC Grace mark) 2023-24 ನೇ ಸಾಲಿನ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆಯಿಂದಲೇ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಈಗಾಗಲೇ ಉತ್ತಮ ತಯಾರಿ ನಡೆಸುತ್ತಿದ್ದು, ಈ ತಯಾರಿಯ ನಡುವೆಯೇ ವಿದ್ಯಾರ್ಥಿಗಳಿಗೆ ಇನ್ನೊಂದು ಶುಭ ಸುದ್ದಿ ಇಲ್ಲಿದೆ. ಹೌದು ನಾಳೆಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಈ ಬಾರಿ ಹತ್ತು ಪ್ರತಿಶತ ಗ್ರೇಸ್‌ ಅಂಕಗಳನ್ನು ನೀಡಲು ನಿರ್ಧರಿಸಲಾಗಿದೆ.

ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶೇ 10 ರಷ್ಟು ಗ್ರೇಸ್‌ ಮಾರ್ಕ್‌ (SSLC Grace mark) ಗಳನ್ನು ನೀಡಲಾಗಿತ್ತು. ಇದರ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಬೋರ್ಡ್ ನಿರ್ಧಾರ ತೆಗೆದುಕೊಂಡಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಮಹತ್ವದ ಮಾಹಿತಿ ಇದ್ದು, ಯಾವ ವಿದ್ಯಾರ್ಥಿಗಳು ಪಾಸ್‌ ಆಗಲು ಕೆಲವು ಅಂಕಗಳನ್ನು ಕಡಿಮೆ ಪಡೆದಿರುತ್ತಾರೋ ಅಂತವರಿಗೆ ಮಾತ್ರ ಇದು ಅನ್ವಯವಾಗಲಿದೆ. ಮತ್ತು ಇದು ಕೇವಲ ಮೂರು ವಿಷಯಗಳಿಗೆ ಅಂದರೆ ಭಾಷಾ ಹಾಗೂ ಕೋರ್‌ ವಿಷಯಗಳಿಗೆ ಮಾತ್ರ ಗ್ರೇಸ್‌ ಮಾರ್ಕ್‌ (SSLC Grace mark) ನೀಡಲಾಗುತ್ತದೆ. ಪಾಸ್‌ ಆಗಲು ಕಡಿಮೆ ಅಂಕಗಳು ಬಂದಿದೆ ಎನ್ನುವ ಸಂದರ್ಭದಲ್ಲಿ ಗ್ರೇಸ್‌ ಮಾರ್ಕ್‌ ನೀಡಿ ಪಾಸ್‌ ಮಾಡಲಾಗುತ್ತದೆ. ಇನ್ನೂ ಹೆಚ್ಚಿಗೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ.

ಇದನ್ನೂ ಓದಿ : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 : ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : NEET PG 2023 Councelling: ನೀಟ್ ಪಿಜಿ ಕೌನ್ಸಿಲಿಂಗ್ ಜುಲೈನಲ್ಲಿ ಪ್ರಾರಂಭ

ರಾಜ್ಯಾದ್ಯಂತ ಒಟ್ಟು 3305 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ. ಈ ಬಾರಿ ಚುನಾವಣೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲು ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಗೆ ಮೊದಲೇ ಸೂಚನೆ ಕೊಡಲಾಗಿದೆ ಅಂತ ಪರೀಕ್ಷಾ ಮಂಡಳಿ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ. ಆಲ್ಲದೆ ಪರೀಕ್ಷಾ ಅಕ್ರಮಗಳನ್ನ ತಡೆಯಲು ಕಟ್ಟುನಿಟ್ಟಾಗಿ ಕ್ರಮ‌ ಕೈಗೊಳ್ಳಲಾಗಿದ್ದು ಊಹಾ ಪೋಹಗಳಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕಿವಿಕೊಡದಂತೆ ಬೋರ್ಡ್ ‌ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ : ಭಾರತದಲ್ಲಿ ಶಿಕ್ಷಣ ಸಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

SSLC Grace mark: Good news for SSLC students: This time they will get 10% grace mark

Comments are closed.