ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿಯು ಮಾರ್ಚ್/ ಏಪ್ರಿಲ್ 2022ರ ಎಸ್ಎಸ್ಎಲ್ಸಿSSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ರಾಜ್ಯದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 11ನೇ ತಾರೀಖಿನವರೆಗೆ ಪರೀಕ್ಷೆಗಳು ನಡೆಯಲಿವೆ.
ಇನ್ನು ಪ್ರಸ್ತುತ ಪ್ರಕಟಿಸಲಾದ ವೇಳಾಪಟ್ಟಿಯಲ್ಲಿ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ದೂರು ಸಲ್ಲಿಸಲು ಇಂದಿನಿಂದ ಜನವರಿ 14ರವರೆಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು www.sslc.karnataka.gov.in / dpikseed@gmail.com ಗೆ ಇ ಮೇಲ್ ಮಾಡುವಂತೆ ಅಥವಾ ನಿರ್ದೇಶಕರು , ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003ಗೆ ಅಂಚೆ ಮಾಡುವಂತೆ ತಿಳಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿಗಳ ವಿವರ ಈ ಕೆಳಗಿನಂತಿದೆ :


ಬೆಂಗಳೂರಲ್ಲಿ ಗುರುವಾರದಿಂದ ಶಾಲೆಗಳು ಬಂದ್, ರಾಜ್ಯದಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿ
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಕೊರೊನಾ ಸ್ಪೋಟವಾಗಿದ್ದು, ದೆಹಲಿ, ಪಶ್ವಿಮಬಂಗಾಲ, ತೆಲಂಗಾಣದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿಂದು ಮಹತ್ವದ ಸಭೆಯನ್ನು ನಡೆಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರ ಜೊತೆಗೆ ಕೇರಳ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಕೋವಿಡ್ ಹಾಗೂ ಓಮಿಕ್ರಾನ್ ಬಗ್ಗೆ ತೀರ್ಮಾನ ಕೈಗೊಂಡಿದೆ. ಕೋವಿಡ್‌ಗಿಂತ ಓಮಿಕ್ರಾನ್ ಐದು ಪಟ್ಟು ಜಾಸ್ತಿ ಹರಡುತ್ತಿದೆ ಎಂದು ತಜ್ಞರು ವರದಿಯನ್ನು ನೀಡಿದ್ದಾರೆ. ಬೆಂಗಳೂರಲ್ಲಿ ಒಂದೇ ೩೦೪೮ ಕೊರೊನಾ ಪ್ರಕರಣ ದಾಖಲಾಗಿದ್ದು, ೧೪೭ ಓಮಿಕ್ರಾನ್ ಪ್ರಕರಣ ಇಂದು ಒಂದೇ ದಿನ ದಾಖಲಾಗಿದೆ. ಕೊರೊನಾ ಸೋಂಕು ಎರಡರಿಂದ ಮೂರು ದಿನದಲ್ಲಿ ದುಪ್ಪಟ್ಟಾಗುತ್ತಿದೆ. ಐದಾರು ದಿನದಲ್ಲಿ ನಿತ್ಯವೂ ಹತ್ತು ಸಾವಿರ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ೨೦ರಿಂದ ೪೦ ವರ್ಷದವರನ್ನೇ ಹೆಚ್ಚಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಗೆ ಪ್ರತ್ಯೇಕ ರೂಲ್ಸ್ ಜಾರಿ ಮಾಡಲಾಗುತ್ತಿದೆ.
10 ಮತ್ತು12 ನೇ ತರಗತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಎರಡು ವಾರದ ಮಟ್ಟಿಗೆ ಮುಚ್ಚಲಾಗುತ್ತದೆ. ಉಳಿದ ತರಗತಿಗಳಿಗೆ ಆನ್‌ಲೈನ್ ಕ್ಲಾಸ್ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ. ಜನವರಿ 5 ರಿಂದ ರಾತ್ರಿ 10 ಗಂಟೆಯಿಂದಲೇ ಹೊಸ ರೂಲ್ಸ್ ಜಾರಿಗೆ ಬರಲಿದೆ. ಜನವರಿ 6 ರಿಂದ ಎರಡು ದಿನಗಳ ಕಾಲ ವೀಕೆಂಡ್ ಕರ್ಪ್ಯೂ ಜಾರಿಗೆ ಬರಲಿದೆ. ಸದ್ಯ ಜಾರಿಯಲ್ಲಿರುವ ನೈಟ್ ಕರ್ಪ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ. 50 ರಷ್ಟು ಸಾಮರ್ಥ್ಯಕ್ಕೆ ಅನುಮತಿ ನೀಡಲಾಗಿದೆ.
ಮದುವೆ ಹೊರಾಂಗಣ 200, ಒಳಾಂಗಣ 100 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಎಲ್ಲಾ ಕಡೆಗಳಲ್ಲಿಯೂ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕು. ಇನ್ನು ಹೊರರಾಜ್ಯದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಸದ್ಯದ ಈ ನಿಯಮ ಮುಂದಿನ ಎರಡು ವಾರಗಳ ಕಾಲ ಜಾರಿಯಲ್ಲಿರಲಿದೆ.
SSLC main exam time table release
ಇದನ್ನು ಓದಿ : schools colleges closed : 3 ರಾಜ್ಯಗಳಲ್ಲಿ ಶಾಲೆಗಳು ಬಂದ್ : ಕರ್ನಾಟಕದಲ್ಲಿ ಮತ್ತೆ ಬಾಗಿಲು ಮುಚ್ಚಲಿದ್ಯಾ ಶಾಲಾ- ಕಾಲೇಜು
ಇದನ್ನೂ ಓದಿ : school collage close : ಕರ್ನಾಟಕದಲ್ಲಿ ಆರ್ಭಟಿಸಿದ ಕೊರೊನಾ : ಶಿಕ್ಷಣ ಸಚಿವರಿಗೆ ಸೋಂಕು : ಮತ್ತೆ ಶಾಲೆಗಳು ಬಂದ್ !