Reliance Jio Happy New Year offer : ಹೊಸ ವರ್ಷದ ಜಿಯೋ ಆಫರ್‌ ವಿಸ್ತರಣೆ; 499 ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಏನೆಲ್ಲ ಸಿಗಲಿದೆ?

ರಿಲಯನ್ಸ್ ಜಿಯೋ(Reliance Jio) ತನ್ನ ಅಗ್ಗದ ದರದ ಆಫರ್ ಗಳಿಂದಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದೆ. ಆದರೆ ಜಿಯೋ ಮತ್ತು ಇತರ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಬಹಳಷ್ಟು ಪ್ಲಾನ್‌ಗಳ ಬೆಲೆ ಕೆಲವು ವಾರಗಳ ಹಿಂದೆ ಹೆಚ್ಚಿವೆ. ಅಷ್ಟೇ ಅಲ್ಲದೆ, ಕೆಲವು ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಿ ಅಥವಾ ಹೊಸ ಆಫರ್ ಗ್ರಾಹಕರಿಗೆ (Jio New Offers) ನೀಡಲಾಗಿದೆ. ಇಂದು ರಿಲಯನ್ಸ್ ಜಿಯೋ 2ಜಿಬಿ ದೈನಂದಿನ ಡೇಟಾ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಮೆಂಬರ್ಷಿಪ್ (Disney+ Hotstar) ಪ್ರಯೋಜನಗಳೊಂದಿಗೆ ಜನಪ್ರಿಯ ರೂ 499 ಯೋಜನೆಯನ್ನು ಈಗ ಮತ್ತೆ ಹೊಸದಾಗಿ (Reliance Jio Happy New Year offer) ಎಂದು ಘೋಷಿಸಿದೆ. ಈ ಹೊಸ ರೂ 499ರ ಪ್ರಿಪೇಯ್ಡ್ ಪ್ಲಾನ್ (449 Rs Jio Prepaid Plan) ಕುರಿತು ಎಲ್ಲಾ ವಿವರಗಳು ಇಲ್ಲಿವೆ.

ಜಿಯೋ ರೂ 499 ಪ್ರಿಪೇಯ್ಡ್ ಯೋಜನೆ: ವ್ಯಾಲಿಡಿಟಿ ಮತ್ತು ಪ್ರಯೋಜನಗಳು
ರೂ 499 ಯೋಜನೆಯು ಈಗ 2ಜಿಬಿ ಡೈಲಿ ಡೇಟಾವನ್ನು ನೀಡುತ್ತದೆ. ಒಂದೊಮ್ಮೆ 2ಜಿಬಿ ಮುಗಿದರೂ 64ಕೆಬಿ/ಸೆ ಕಡಿಮೆ ಡೇಟಾ ವೇಗವನ್ನು ಬಳಸಲು ಸಾಧ್ಯವಾಗುತ್ತದೆ.ಈ ಯೋಜನೆಯು ಈಗ 28 ದಿನಗಳ ಅವದಿಯ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ದಿನಕ್ಕೆ 100 ಎಸ್ ಎಂ ಎಸ್ ಮತ್ತು ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಅನಿಯಮಿತ ಜಿಯೋ ಟು ಜಿಯೋ ಮತ್ತು ಜಿಯೋ ಟು ನಾನ್ ಜಿಯೋ ಅನ್ ಲಿಮಿಟೆಡ್ ಕಾಲಿಂಗ್ ಸೌಲಭ್ಯ ಇದೆ.

ರೂ 499 ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಸಬ್ ಸ್ಕ್ರಿಪ್ಶನ್ ಜೊತೆ ಬರುತ್ತದೆ. ಹೀಗಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ಲಾಟ್‌ಫಾರ್ಮ್‌ಗೆ ಒಂದು ವರ್ಷದ ಫ್ರೀ ಮೆಂಬರ್ ಶಿಪ್ ನೀಡುತ್ತದೆ. ಇದರ ಇನ್ನೊಂದು ಪ್ರಯೋಜನಗಳು ಅಂದರೆ ಈ ಆಫರ್ ರೀಚಾರ್ಜ್ ಮಾಡಿದಲ್ಲಿ ಜಿಯೋ ಸಿನೆಮಾ ಮತ್ತು ಜಿಯೋ ಟಿವಿ ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಫ್ರೀ ಅಕ್ಸೆಸ್ ಸಾಧ್ಯವಿದೆ.

ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ವಿಸ್ತರಿಸಿದ ಜಿಯೋ
ಜಿಯೋ ಹೊಸ ವಾರ್ಷಿಕ ರೂ 2,545 ಯೋಜನೆಯಲ್ಲಿ ಹೊಸ ಹ್ಯಾಪಿ ನ್ಯೂ ಇಯರ್ ಆಫರ್‌ಗಾಗಿ ಆಪರೇಟರ ವ್ಯಾಲಿಡಿಟಿ ಹೆಚ್ಚಿಸುತ್ತದೆ ಎಂದು ರಿಲಯನ್ಸ್ ಜಿಯೋ ಘೋಷಿಸಿತು. ಈ ಆಫರ್ ಹಿಂದೆ ಜನವರಿ 2 ರವರೆಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಈ ಅವಧಿಯನ್ನು ಜನವರಿ 7 ರವರೆಗೆ ವಿಸ್ತರಿಸಲಾಗಿದೆ. ಮತ್ತು ಆ ದಿನಾಂಕದೊಳಗೆ ರೀಚಾರ್ಜ್ ಮಾಡುವ ಬಳಕೆದಾರರು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈ 2,545 ಯೋಜನೆಯು ವಾರ್ಷಿಕ ಯೋಜನೆಯಾಗಿದ್ದು ಅದು ಅನಿಯಮಿತ ಕರೆ, ದಿನಕ್ಕೆ 100 ಎಸ್ ಎಂ ಎಸ್ ಮತ್ತು 1.5ಜಿಬಿ ದೈನಂದಿನ ಡೇಟಾವನ್ನು 336 ದಿನಗಳ ಅವಧಿಗೆ ನೀಡುತ್ತದೆ. ಜೊತೆಗೆ, ಹೊಸ ಹ್ಯಾಪಿ ನ್ಯೂ ಇಯರ್ ಕೊಡುಗೆಯೊಂದಿಗೆ, ಯೋಜನೆಯು ಈಗ 29 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತದೆ, ಇದು ಸಾಮಾನ್ಯ 336 ದಿನಗಳ ಬದಲಿಗೆ ಪೂರ್ಣ 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Reliance Jio extends Happy New Year offer brings back Rs 499 prepaid plan)

Comments are closed.