Shilpa Shetty: ಟ್ರೆಂಡಿ ಫ್ಯಾಷನ್‌ನಲ್ಲಿ ಕಂಗೊಳಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Bollywood Actress Shilpa Shetty) ಆರೋಗ್ಯ, ಫಿಟ್‌ನೆಸ್ ವಿಚಾರದಲ್ಲಿ ಕಟ್ಟುನಿಟ್ಟು. ಯೋಗ, ಧ್ಯಾನ, ನಿರಂತರ ವ್ಯಾಯಾಮದಿಂದ ಸದಾ ದೇಹಾರೋಗ್ಯ ಚೆನ್ನಾಗಿಟ್ಟುಕೊಂಡಿರುವ ಅವರು ಉಡುಗೆ–ತೊಡುಗೆ, ಫ್ಯಾಷನ್ ವಿಚಾರದಲ್ಲೂ ಅಷ್ಟೇ, ಸದಾ ಮುಂಚೂಣಿಯಲ್ಲಿರುತ್ತಾರೆ. ಶಿಲ್ಪಾ ಶೆಟ್ಟಿ ಅವರು ಟ್ರೆಂಡಿ ದಿರಿಸು (Shilpa Shetty New Dress Trends) ತೊಟ್ಟಿರುವ ಕೆಲವು ಫೋಟೊಗಳಂತೂ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ (Instagram) ಹವಾ ಎಬ್ಬಿಸಿವೆ.

ಶಿಲ್ಪಾ ಅವರು ಗುಲಾಬಿ ಬಣ್ಣದ ಟ್ರೆಂಡಿ ಗೌನ್‌ನಲ್ಲಿ ಕಂಗೊಳಿಸುತ್ತಿರುವ ಚಿತ್ರವೊಂದನ್ನು ಬಾಲಿವುಡ್ ಫ್ಯಾಷನ್ ಡಿಸೈನರ್ ಮೋಹಿತ್ ರೈ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಶಿಲ್ಪಾ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಇದೇ ರೀತಿ ಸ್ಪಾರ್ಕಲ್ ಜಂಪ್ ಸ್ಯೂಟ್‌ನಲ್ಲಿ ಪೋಸ್ ಕ್ಯಾಮರಾಗೆ ಕೊಟ್ಟಿರುವ ಮತ್ತೊಂದು ಚಿತ್ರವೂ ಗಮನ ಸೆಳೆದಿದೆ. ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರು ಸಂಪೂರ್ಣ ಕಸೂತಿಯಿಂದ ರಚಿಸಿದ ಮಿನುಗು ಜಂಪ್‌ಸೂಟ್‌ನಲ್ಲಿ ಮಿಂಚಿದರು ಎಂದು ನಾಜ್‌ಸಾದೆ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

ಬೆಳ್ಳಿ ಬಣ್ಣದ, ಗರಿಗರಿ ಮಿಂಚುವ ದಿರಿಸಿನಲ್ಲಿ ಶಿಲ್ಪಾ ಶೆಟ್ಟಿ ಮಿಂಚುತ್ತಿರುವ ಮತ್ತೊಂದು ಚಿತ್ರವನ್ನು ಫ್ಯಾಷನ್ ಡಿಸೈನರ್ ಶುಭಿ ಕುಮಾರ್ ಪೋಸ್ಟ್ ಮಾಡಿದ್ದಾರೆ. ಒಂದು ತೋಳಿನ ದಿರಿಸಿನಲ್ಲಿ, ಕೂದಲು ಹರಡಿರುವ ಪೋಸ್ ನೀಡುವ ಮೂಲಕ ಶಿಲ್ಪಾ ಸರಳವಾಗಿ ಹೇಗೆ ಟ್ರೆಂಡಿಯಾಗಿರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶುಭಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯದ ಜತೆಗೆ ಸೌಂದರ್ಯ ಕಾಪಾಡಿಕೊಳ್ಳುವುದರಲ್ಲಿಯೂ ಶಿಲ್ಪಾ ಬಹಳ ಕಾಳಜಿ ವಹಿಸುತ್ತಾರೆ. ನಿಯಮಿತ ಆಹಾರ, ವ್ಯಾಯಾಮ, ಯೋಗ ಒಳಗೊಂಡ ಉತ್ತಮ ದಿನಚರಿಯ ಮೂಲಕ ನಿಜ ಜೀವನ ಹಾಗೂ ಬಾಲಿವುಡ್‌ನಲ್ಲಿ ಇನ್ನೂ ತಾರಾ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಶಿಲ್ಪಾ ಅವರ ಟ್ರೆಂಡಿ ಉಡುಗೆ–ತೊಡುಗೆಗೆ ಬಾಲಿವುಡ್ ಅಂಗಳದಲ್ಲಿಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚೆಷ್ಟೇ ತಮ್ಮ ಮಾವ (ಶಿಲ್ಪಾ ಪತಿ ರಾಜ್ ಕುಂದ್ರಾ ತಂದೆ) ಬಾಲಕೃಷ್ಣ ಕುಂದ್ರಾ ಜನ್ಮ ದಿನ ಪ್ರಯುಕ್ತ ಅವರ ಜತೆಗಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು ಶಿಲ್ಪಾ ಶೆಟ್ಟಿ. ಫೋಟೊ ಜತೆಗೆ ‘ಜಗತ್ತಿನಲ್ಲೇ ಅತ್ಯುತ್ತಮ ಮಾವ’ ಎಂದು ಬಾಲಕೃಷ್ಣ ಕುಂದ್ರಾ ಅವರನ್ನು ಬಣ್ಣಿಸಿದ್ದರು.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Bollywood Shilpa Shettys latest fashion choices are incredibly trendy)

Comments are closed.