ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ಚಿತ್ರದುರ್ಗಕ್ಕೆ ಮೊದಲ ಸ್ಥಾನ, ಈ ಬಾರಿಯೂ ಬಾಲಕಿಯರೇ ಮೇಲುಗೈ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result Announced) ಪ್ರಕಟವಾಗಿದ್ದು, ಈ ಬಾರಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ರೆ, ಮಂಡ್ಯ ಜಿಲ್ಲೆ ಎರಡನೇ ಹಾಗೂ ಹಾಸನ ಜಿಲ್ಲೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರತೀ ವರ್ಷದಂತೆಯೇ ಈ ಬಾರಿಯೂ ರಾಜ್ಯದಲ್ಲಿ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 7,00,619 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾಗಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ 3,59,511 ಬಾಲಕಿಯರು ಹಾಗೂ 3,41,108 ಬಾಲಕರು ಉತ್ತೀರ್ಣರಾಗಿದ್ದಾರೆ. 23 ಜಿಲ್ಲೆಗಳು A ಗ್ರೇಡ್‌ ಹಾಗೂ 12 ಜಿಲ್ಲೆಗಳು B ಗ್ರೇಡ್‌ ಪಡೆದುಕೊಂಡಿವೆ.

SSLC Result Announced : ನಾಲ್ವರು ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ

  • ಭೂಮಿಕಾ ಪೈ- ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು
  • ಯಶಸ್​​ಗೌಡ- ಬಿಜಿಎಸ್​ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ
  • ಅನುಪಮಾ ಶ್ರೀಶೈಲ್ ಹಿರೆಹೋಳಿ- ಶ್ರೀಕುಮಾರೇಶ್ವರ ಶಾಲೆ ಸವದತ್ತಿ
  • ಬೀಮನಗೌಡ ಪಾಟೀಲ್-ವಿಜಯಪುರ

ರಾಜ್ಯದಲ್ಲಿನ ಒಟ್ಟು1517 ಸರಕಾರಿ ಶಾಲೆಗಳು ಶೇ 100 ಫಲಿತಾಂಶವನ್ನು ಪಡೆದುಕೊಂಡಿವೆ. ಕಳೆದ ವರ್ಷ 1462 ಸರಕಾರಿ ಶಾಲೆಗಳು ಈ ಸಾಧನೆ ಮಾಡಿದ್ದವು. ರಾಜ್ಯದಲ್ಲಿನ ಯಾವುದೇ ಸರಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ. ಆದರೆ 11 ಖಾಸಗಿ ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ಚಿತ್ರದುರ್ಗ ಜಿಲ್ಲೆಗೆ ಮೊದಲ ಸ್ಥಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ.ಚಿತ್ರದುರ್ಗ ಜಿಲ್ಲೆ ಶೇಕಡಾ 96.08 ಫಲಿತಾಂಶ ಪಡೆದು ಮೊದಲ ಸ್ಥಾನವನ್ನು ಪಡೆದುಕೊಂಡಿದ್ರೆ, ಶೇ.96.74 ಫಲಿತಾಂಶ ಪಡೆದು ಮಂಡ್ಯ 2ನೇ ಸ್ಥಾನ, ಶೇ.96.68 ಫಲಿತಾಂಶ ಪಡೆದ ಹಾಸನ 3ನೇ ಸ್ಥಾನ, ಶೇ.96.78 ಫಲಿತಾಂಶದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ 4ನೇ ಸ್ಥಾನ, ಶೇ.96.15 ರಷ್ಟು ಫಲಿತಾಂಶದ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆ 5ನೇ ಸ್ಥಾನ, ಶೇ.94.6ರಷ್ಟು ಫಲಿತಾಂಶ ಪಡೆದ ಕೋಲಾರ ಜಿಲ್ಲೆ 6ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

SMS ಮೂಲಕ ಫಲಿತಾಂಶ ಲಭ್ಯ

ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಎಸ್‌ಎಂಎಸ್‌ ಮೂಲಕವೂ ಪಡೆದುಕೊಳ್ಳಬಹುದಾಗಿದೆ.

ಸಂದೇಶವನ್ನು ಟೈಪ್ ಮಾಡಿ: KAR10ರೋಲ್ ಸಂಖ್ಯೆ.
ಈಗ, ಈ ಸಂದೇಶವನ್ನು 56263 ಗೆ ಕಳುಹಿಸಿ.
ಫಲಿತಾಂಶಗಳನ್ನು ಅದೇ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ : Karnataka SSLC Result 2023 : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : LKG Age Limit : ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ಕಡ್ಡಾಯ

Comments are closed.