ಎಸ್‌ಎಸ್‌ಎಲ್‌ಸಿ ಮೌಲ್ಯಮಾಪಕರಿಗೆ ಗುಡ್ನ್ಯೂಸ್..! ಗೌರವ ಸಂಭಾವನೆ ಹೆಚ್ಚಿಸಿದ ರಾಜ್ಯ ಸರ್ಕಾರ
ರಾಜ್ಯಾದ್ಯಂತ ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಜ್ಜಾಗುತ್ತಿದ್ದಾರೆ. ಏಪ್ರಿಲ್ 8ರಂದು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಎಲ್ಲದರ ನಡುವೆಯೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಿಗೆ (SSLC evaluators) ಸಿಹಿಸುದ್ದಿ ನೀಡಿದೆ.
ಹೌದು..! ಈ ಬಾರಿ ಎಸ್.ಎಸ್.ಎಲ್‌ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಿಗೆ ಸಿಗುವ ಗೌರವ ಧನದಲ್ಲಿ 5 ಪರ್ಸೆಂಟ್ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಎಚ್.ಎನ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ…! ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫಲಿತಾಂಶ ಸಂಭಾವ್ಯ ದಿನಾಂಕ ಪ್ರಕಟ
ರಾಜ್ಯದಲ್ಲಿರುವ 35 ಶೈಕ್ಷಣಿಕ ಜಿಲ್ಲೆಗಳ ಒಟ್ಟು 262 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲ್ಯಮಾಪನ ಕಾರ್ಯ ಏಪ್ರಿಲ್ 8ರಿಂದ ಆರಂಭಗೊಳ್ಳಲಿದೆ.ಉಪ ಮುಖ್ಯ ಮೌಲ್ಯಮಾಪಕರಿಗೆ ಏಪ್ರಿಲ್ 7ರಂದು ಹಾಜರಾಗುವಂತೆ ತಿಳಿಸಲಾಗಿದೆ.. ಸಹಾಯಕ ಮೌಲ್ಯಮಾಪಕರು ಏಪ್ರಿಲ್ 8ರಂದು ಕೇಂದ್ರಗಳಿಗೆ ಹಾಜರಾಗಬೇಕಿದೆ. ತೃತೀಯ ಭಾಷೆಗಳಾದ ಹಿಂದಿ ಮತ್ತು ಸಂಸ್ಕೃತ ವಿಷಯಗಳ ಮೌಲ್ಯಮಾಪನವು ಏಪ್ರಿಲ್ 9ರಿಂದ ಆರಂಭವಾಗಲಿದೆ. ಮೌಲ್ಯ ಮಾಪನ ಕಾರ್ಯ ಪೂರ್ಣಗೊಳಿಸಲು ಏಪ್ರಿಲ್ 8ರವರೆಗೆ ಗಡುವು ನೀಡಲಾಗಿದೆ.



