Summer Holiday Reduced : ಕರ್ನಾಟಕದಲ್ಲಿ ಶಾಲೆಗಳಿಗೆ ಈ ಬಾರಿಯೂ ಬೇಸಿಗೆ ರಜೆ ಕಡಿತ

ಬೆಂಗಳೂರು :Summer Holiday Reduced : ಕಳೆದ ಎರಡು ವರ್ಷಗಳಿಂದಲೂ ಕರ್ನಾಟಕ (Karnataka ) ರಾಜ್ಯದಲ್ಲಿನ ಶಾಲೆಗಳಿಗೆ (Schools) ಬೇಸಿಗೆ ಹಾಗೂ ದಸರಾ ರಜೆಯ ಅವಧಿಯಲ್ಲಿ ಕಡಿತ ಮಾಡಲಾಗಿದೆ. ದಸರಾ ರಜೆ ಕಡಿತದ ಬೆನ್ನಲ್ಲೇ ಶಿಕ್ಷಕರು ಹಾಗೂ ಪೋಷಕರು ಶಿಕ್ಷಣ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ದಸರಾ ರಜೆ ವಿಸ್ತರಣೆ ಮಾಡುವಂತೆ ಶಿಕ್ಷಕರು ಪಟ್ಟು ಹಿಡಿಯುತ್ತಲೇ ಬೇಸಿಗೆ ರಜೆ ಕಡಿತ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದರು. ಆದ್ರೀಗ ಬೇಸಿಗೆ ರಜೆ ಕಡಿತವಾಗುವ ಸಾಧ್ಯತೆಯಿದೆ.

ಶಿಕ್ಷಣ ಇಲಾಖೆ ಈಗಾಗಲೇ ಎಸ್ಎಸ್ಎಲ್ ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ತಾತ್ಕಾಲಿಕ ವೇಳಾಪಟ್ಟಿಯ ಅನ್ವಯ ಎಪ್ರಿಲ್ 15 ರಂದು ಅಂತಿಮ ಪರೀಕ್ಷೆ ನಡೆಯಲಿದೆ. ಹೀಗಾಗಿ ಎಪ್ರಿಲ್ 15 ರ ವರೆಗೂ ಶಿಕ್ಷಕರು ಶಾಲೆಗೆ ಹಾಜರಾಗಬೇಕಾಗಿರುವುದು ಕಡ್ಡಾಯ. ಇನ್ನೊಂದೆಡೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನಕ್ಕೆ ಹಾಜರಾಗಬೇಕಾಗಿದೆ. ಹೀಗಾಗಿ ಎಪ್ರೀಲ್ ಅಂತ್ಯದ ವರೆಗೂ ಶಿಕ್ಷಕರು ಬಿಡುವಿಲ್ಲದ ಕಾರ್ಯದಲ್ಲಿ ತೊಡಗಬೇಕಾಗಿದೆ. ಒಂದೊಮ್ಮೆ ಈ ಬಾರಿಯಂತೆ ಮೇ ಮಧ್ಯದಲ್ಲಿಯೇ ಶಾಲೆಗಳನ್ನು ಆರಂಭಿಸಿದ್ರೆ ಶಿಕ್ಷಕರಿಗೆ ಕೇವಲ ಹದಿನೈದು ದಿನಗಳ ಕಾಲವಷ್ಟೇ ಬೇಸಿಗೆ ರಜೆ ಲಭ್ಯವಾಗಲಿದೆ.

ಶಿಕ್ಷಣ ಇಲಾಖೆ ಇದುವರೆಗೂ ಎಷ್ಟು ದಿನಗಳ ಕಾಲ ಬೇಸಿಗೆ ರಜೆಯನ್ನು ನೀಡಲಿದೆ ಅನ್ನುವ ಕುರಿತು ಘೋಷಣೆ ಮಾಡಿಲ್ಲ. ದಸರಾ ರಜೆ ಕಡಿತ ಮಾಡಿದ್ದ ವೇಳೆಯಲ್ಲಿಯೂ ಶಿಕ್ಷಕರ ಸಂಘಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಮನವಿಯನ್ನು ಸಲ್ಲಿಸಿದ್ದವು ಆದರೂ ಕೂಡ ದಸರಾ ರಜೆಯನ್ನು ಸರಕಾರ ವಿಸ್ತರಣೆ ಮಾಡಿರಲಿಲ್ಲ. ಮುಂದಿನ ವರ್ಷದಿಂದ ಇಂತಹ ಸಮಸ್ಯೆ ಉದ್ಬವಿಸುವುದಿಲ್ಲ ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದು ಶಿಕ್ಷಕರ ಸಂಘಗಳು ಹೇಳಿಕೊಂಡಿದ್ದವು. ಆದ್ರೀಗ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿಯ ಮೂಲಕ ಇಲಾಖೆ ಬೇಸಿಗೆ ರಜೆ ಕಡಿತದ ಸೂಚನೆಯನ್ನು ನೀಡಿದಂತಿದೆ.

ಕೊರೊನಾ ವೈರಸ್ ಸೋಂಕಿನ ನೆಪದಲ್ಲಿ ಶಿಕ್ಷಣ ಇಲಾಖೆ ಕಳೆದ ಎರಡು ವರ್ಷಗಳಿಂದಲೂ ಮಕ್ಕಳ ಮೇಲೆ ಒತ್ತಡ ಹೇರುವ ಕಾರ್ಯವನ್ನು ಮಾಡುತ್ತಿದೆ. ಮಳೆ, ಕೊರೊನಾ ನೆಪದಲ್ಲಿ ಶಾಲಾ ರಜೆಯ ಅವಧಿಯಲ್ಲಿ ಕಡಿತ ಮಾಡಿರುವುದರಿಂದ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಮಯವನ್ನು ಶಾಲೆಗಳಲ್ಲಿಯೇ ಕಳೆದಿದ್ದಾರೆ. ಈ ಬಾರಿ ಬೇಸಿಗೆಯಲ್ಲೇ ಶಾಲಾರಂಭ ಮಾಡಿರುವುದರಿಂದ ಮಕ್ಕಳು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದಾರೆ. ಇನ್ನೊಂದೆಡೆಯಲ್ಲಿ ನಿರಂತರ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುವುದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಶಿಕ್ಷಣ ಇಲಾಖೆ ಶಾಲಾ ರಜೆಯನ್ನು ಕಡಿತ ಮಾಡುತ್ತಿದೆ.

ಹಿಂದೆಲ್ಲಾ ಅಕ್ಟೋಬರ್ 2 ರಿಂದ ಅಕ್ಟೋಬರ್ ಅಂತ್ಯದ ವರೆಗೂ ಮಧ್ಯ ವಾರ್ಷಿಕ ರಜೆಯನ್ನು ನೀಡಲಾಗುತ್ತಿದ್ರೆ, ಎಪ್ರೀಲ್ 1 ರಿಂದ ಮೇ ಅಂತ್ಯದ ವರೆಗೂ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ರಜೆಯ ಅವಧಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಇತರ ಇಲಾಖೆಗಳಿಗೆ ಹೋಲಿಕೆ ಮಾಡಿದ್ರೆ ಶಾಲಾ ಶಿಕ್ಷಕರಿಗೆ ಅತೀ ಕಡಿಮೆ ರಜೆಯನ್ನು ನೀಡಲಾಗುತ್ತಿದೆ. ಅದ್ರಲ್ಲೂ ಶಿಕ್ಷಕರು ಕಳೆದ ಎರಡು ವರ್ಷಗಳಿಂದಲೂ ತಮ್ಮ ಹಕ್ಕಿನ ರಜೆಗಾಗಿ ಆಗ್ರಹಿಸುತ್ತಿದ್ದಾರೆ. ಒಂದೊಮ್ಮೆ ಬೇಸಿಗೆ ರಜೆ ಕಡಿತವಾದ್ರೆ ಹೋರಾಟ ನಡೆಸುವುದಾಗಿಯೂ ಶಿಕ್ಷಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ : SSLC exam: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ : ಏಪ್ರಿಲ್ 1ರಿಂದ ಎಕ್ಸಾಂ ಶುರು

ಇದನ್ನೂ ಓದಿ : Tuition Center Registration : ಮನೆ ಮನೆಯಲ್ಲಿ ಟ್ಯೂಶನ್ ಮಾಡುವಂತಿಲ್ಲ: ಹೊರಬಿತ್ತು ಶಿಕ್ಷಣ ಇಲಾಖೆ ಆದೇಶ

Summer Holiday Reduced in Karnataka Schools

Comments are closed.