ಟಿಇಟಿ ಪಾಸಾದವರಿಗೆ ಗುಡ್ ನ್ಯೂಸ್ : ಪ್ರಮಾಣ ಪತ್ರ ಲೈಫ್ ಟೈಮ್ ಸಿಂಧುತ್ವ

ಬೆಂಗಳೂರು : ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾದವರಿಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಟಿಇಟಿ ಪರೀಕ್ಷೆ ಉತ್ತೀರ್ಣರಾದವರ ಪ್ರಮಾಣ ಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ.

ಪ್ರಸ್ತುತ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಉತ್ತೀರ್ಣರಾದವರ ಪ್ರಮಾಣ ಪತ್ರ 7 ವರ್ಷಗಳ ವರೆಗೆ ಮಾತ್ರವೇ ಬಳಕೆ ಮಾಡಬಹುದಾಗಿದೆ. ಆದರೆ ಎನ್ ಸಿಟಿಸಿಯ ಹೊಸ ತೀರ್ಮಾನದಿಂದಾಗಿ ಪ್ರಮಾಣ ಪತ್ರ ಪಡೆದ ಅಭ್ಯರ್ಥಿಗಳಿಗೆ 7 ವರ್ಷದಿಂದ ಜೀವಿತಾವಧಿಯವರೆಗೆ ಸಿಂಧುತ್ವವನ್ನು ವಿಸ್ತರಿಸಲಾಗಿದೆ.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದಲೇ 2015 ರಿಂದ ಟಿಇಟಿಯನ್ನು ಜಾರಿಗೆ ತಂದಿದೆ. ಹೀಗಾಗಿ ಬಿಎಡ್ ಹಾಗೂ ಡಿಎಡ್ ಪದವೀಧರರು ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾಗಲು ಟಿಇಟಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು.

ಅಲ್ಲದೇ ಸರಕಾರಿ ಶಾಲೆ ಶಿಕ್ಷಕರ ನೇಮಕಾತಿಯನ್ನು ಟಿಇಟಿಯಲ್ಲಿ ಪಡೆದ ಶೇ.15ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

Comments are closed.