ಶಾಲಾ ಶಿಕ್ಷಕರಿಗೆ ಹೊಸದೊಂದು ಹೊಣೆ : ಮೊಟ್ಟೆ ಬೇಯಿಸುವುದು ಇನ್ನು ಗುರುಗಳ ಜವಾಬ್ದಾರಿ
ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಬೋಧಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಇದೀಗ ಹೊಸದೊಂದು ಜವಾಬ್ದಾರಿ ನೀಡಿದೆ.
ಬೆಂಗಳೂರು : ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಬೋಧಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಇದೀಗ ಹೊಸದೊಂದು ಜವಾಬ್ದಾರಿ ನೀಡಿದೆ. ಬಿಸಿಯೂಟ ವ್ಯವಸ್ಥೆ ಹೊಂದಿರದ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ಬೆಂದಿದೆಯೇ ಇಲ್ಲವೇ ಎಂಬುದನ್ನು ನೋಡುವ ಜವಾಬ್ದಾರಿ ಶಿಕ್ಷಕರಿಗೆ ನೀಡಲಾಗಿದೆ.
ಹೌದು..! ರಾಜ್ಯದಲ್ಲಿರುವ ಕೆಲ ಶಾಲೆಗಳಿಗೆ ಇಸ್ಕಾನ್ ಹಾಗೂ ಅದಮ್ಯ ಚೇತನದ ಮೂಲಕ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ. ಇಂತಹ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ ನೀಡುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ಈ ಶಾಲೆಗಳಿಗೆ ಗ್ಯಾಸ್ ಸ್ಟೌಗಳ ಪೂರೈಕೆಗೆ ಸರ್ಕಾರ ಅಸ್ತು ಎಂದಿದೆ.
ಇದನ್ನೂ ಓದಿ: ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ? ನಿಮ್ಹಾನ್ಸ್ (NIMHANS) ನೀಡಿದೆ ಹೊಸ ಸಲಹೆ
ಹೀಗಾಗಿ ಎಲ್ಲಾ ಪರಿಕರಗಳನ್ನು ಪೂರೈಕೆ ಮಾಡಿದ ಬಳಿಕ ಆ ಶಾಲೆಗಳಲ್ಲಿ ಶಿಕ್ಷಕರ ಸಮ್ಮುಖದಲ್ಲಿಯೇ ಮೊಟ್ಟೆ ಬೇಯಿಸುವ ಕಾರ್ಯ ನಡೆಯಲಿದೆ. ಬಿಸಿಯೂಟ ವ್ಯವಸ್ಥೆ ಇರುವ ಶಾಲೆಗಳಲ್ಲಿ ಬಿಸಿಯೂಟದ ಸಿಬ್ಬಂದಿಯೇ ಈ ಕಾರ್ಯ ನಿರ್ವಹಿಸ್ತಾ ಇರೋದ್ರಿಂದ ಈ ಶಾಲೆಗಳಲ್ಲಿ ಶಿಕ್ಷಕರ ಮೇಲ್ವಿಚಾರಣೆಯ ಅವಶ್ಯಕತೆ ಇರುವುದಿಲ್ಲ.
ಆದರೆ ಶಾಲೆಗಳಲ್ಲೇ ಅಡುಗೆ ತಯಾರಿಸುವ ವ್ಯವಸ್ಥೆ ಇಲ್ಲದ ಶಾಲೆಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತಿದೆ . ಹೀಗಾಗಿ ಬಿಸಿಯೂಟ ಸಿಬ್ಬಂದಿಯನ್ನು ಶಾಲೆಯಲ್ಲಿಯೇ ಹೊಂದಿರುವ ಶಿಕ್ಷಕರು ಈ ಹೆಚ್ಚುವರಿ ಹೊಣೆಗಾರಿಕೆಯಿಂದ ಪಾರಾಗಿದ್ದಾರೆ.



