ಭಾನುವಾರ, ಏಪ್ರಿಲ್ 27, 2025
HomeeducationSummer Vacation : ಶಿಕ್ಷಕರ ಬೇಸಿಗೆ ರಜೆ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು...

Summer Vacation : ಶಿಕ್ಷಕರ ಬೇಸಿಗೆ ರಜೆ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು ಗೊತ್ತಾ ?

- Advertisement -

ಬೆಂಗಳೂರು : ಪ್ರತೀ ವರ್ಷವೂ ಶಿಕ್ಷಕರಿಗೆ ನೀಡಲಾಗುತ್ತಿದ್ದ ಬೇಸಿಗೆ ರಜೆಯನ್ನು(Summer Vacation ) ಈ ಬಾರಿ ಕಡಿತ ಮಾಡಲಾಗಿದೆ. ಆದರೆ ಈ ಕುರಿತು ಶಿಕ್ಷಕರು ಬೇಸರಗೊಳ್ಳಬೇಡಿ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ಕೊಡುಗೆ ನೀಡಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಕೋವಿಡ್‌ 19 ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎರಡು ವರ್ಷಗಳಲ್ಲಿ ಶೈಕ್ಷಣಿಕ ಚಟುವಟಿಕೆ ಕುಠಿತವಾಗಿದೆ. ವಿದ್ಯಾರ್ಥಿಗಳು ಎರಡು ವರ್ಷಗಳ ಅವಧಿಯಲ್ಲಿ ಏನನ್ನು ಕಳೆದುಕೊಂಡಿದ್ದಾರೋ ಅದನ್ನು ಕಲಿಯಲು ಸಹಕಾರಿಯಾಗುವ ನಿಟ್ಟಿನಲ್ಲಿ ಈ ಬಾರಿ ಕಲಿಕೆ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

2023-24ರ ಶೈಕ್ಷಣಿಕ ವರ್ಷದೊಳಗೆ ಕೋವಿಡ್‌ ಕಾರಣದಿಂದ ಉಂಟಾಗಿದ್ದ ಕಲಿಕೆಯ ಅಂತರವನ್ನು ತೆರವುಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. 15 ದಿನಗಳ ಕಾಲ ಬ್ರಿಡ್ಜ್ ಕೋರ್ಸ್ ನಡೆಸಲು ಯೋಚಿಸಿದ್ದೇವೆ. ನಂತರ ಕಲಿಕಾ ನಷ್ಟದ ವರದಿಗಳನ್ನ ಪರಿಗಣಿಸಿ, ವರ್ಷವಿಡೀ ಸಕ್ರಿಯವಾಗಿರುವ ಕಾರ್ಯಕ್ರಮವನ್ನ ರಚಿಸಲು ನಾವು ನಿರ್ಧರಿಸಿದ್ದೇವೆ. ಕೋವಿಡ್‌ ಕಾರಣದಿಂದಾಗಿ ಕುಠಿತವಾಗಿರುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ಹೀಗಾಗಿ ಎರಡು ಶಿಕ್ಷಕರಿಗೆ ವರ್ಷಂಪ್ರತಿ ನೀಡಲಾಗುತ್ತಿದ್ದ ಬೇಸಿಗೆ ರಜೆಯಲ್ಲಿ ಎರಡು ವಾರವನ್ನು ಕಡಿತ ಮಾಡಲಾಗಿದೆ. ಆದರೆ ಶಿಕ್ಷಕರು ಯಾವುದೇ ಕಾರಣಕ್ಕೂ ಅಸಮಾಧಾನಗೊಳ್ಳಬಾರದು ಎಂದು ಶಿಕ್ಷಕರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಎರಡು ವರ್ಷಗಳ ನಂತರ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸರಿಯಾಗಿ ನಡೆಸಲಾಗುತ್ತಿದೆ. ಹೀಗಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ನಿರಂತರ ಸಂಪರ್ಕದಲ್ಲಿರಬೇಕು. ಎಲ್ಲರೂ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಬೇಕು ಎಂದರು.

ಇದನ್ನೂ ಓದಿ : ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್‌ 10 ರಿಂದ ಬೇಸಿಗೆ ರಜೆ : ಮೇ 16 ಶಾಲಾರಂಭ

ಇದನ್ನೂ ಓದಿ : ಗೇಟ್ ಫಲಿತಾಂಶ 2022 ಪ್ರಕಟ : ಉತ್ತರ ಕೀ, ಟಾಪರ್‌ಗಳ ಪಟ್ಟಿ, ಇತರ ವಿವರಗಳನ್ನು ಪರಿಶೀಲಿಸಿ

(Teachers summer vacation cuts, what says Education Minister BC Nagesh)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular