Google Maps : ರಾತ್ರಿ ವೇಳೆ ಕೈಕೊಟ್ಟ ಗೂಗಲ್‌ ಮ್ಯಾಪ್‌ : ಪರದಾಡಿದ ಪ್ರಯಾಣಿಕರು

ಪಂಜಾಬ್‌ : ಇತ್ತೀಚಿನ ವರ್ಷಗಳಲ್ಲಿ ಎಲ್ಲಿಗಾದ್ರೂ ಪ್ರಯಾಣಿಸಬೇಕಾದ್ರೆ ಸಾಮಾನ್ಯವಾಗಿ ಗೂಗಲ್‌ ಮ್ಯಾಪ್‌ (Google Maps) ಬಳಕೆ ಮಾಡ್ತೇವೆ. ಆದರೆ ಕೆಲವೊಮ್ಮೆ ಗೂಗಲ್‌ ಮ್ಯಾಪ್‌ ನಂಬಿಕೊಂಡು ಹೋಗುವುದು ಅಪಾಯಕಾರಿ ಅನ್ನೋದಕ್ಕೆ ಈ ಸ್ಟೋರಿನೇ ಬೆಸ್ಟ್‌ ಎಕ್ಸಾಂಪಲ್.‌ ಅವ್ರೆಲ್ಲಾ ಗೂಗಲ್‌ ಮ್ಯಾಪ್‌ ನಂಬಿಕೊಂಡು ಪ್ರಯಾಣಿಸುತ್ತಿದ್ರು. ಆದರೆ ರಾತ್ರಿ ಹೊತ್ತಲೇ ಗೂಗಲ್‌ (Google) ಕೈಕೊಟ್ಟಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

ಬರ್ನಾಲ್‌ನ ಪಪ್ಪಿ ಎಂಬ ಚಾಲಕ ಗೂಗಲ್‌ ಮ್ಯಾಪ್‌ ಬಳಸಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆಯಲ್ಲಿ ಏಕಾಏಕಿಯಾಗಿ ಮ್ಯಾಪ್‌ ತಾಂತ್ರಿಕ ಕಾರಣಗಳಿಂದಾಗಿ ಕಾರ್ಯನಿರ್ವಹಣೆ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದೆ. ಇದರಿಂದಾಗಿ ಕಾರಿನಲ್ಲಿ ತೆರಳುತ್ತಿದ್ದವರಿಗೆ ದಾರಿ ಕಾಣದೆ ಕಕ್ಕಾಬಿಕ್ಕಿಯಾಗಿದ್ದಾರೆ. ವಾಹನವನ್ನು ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿ ಎಷ್ಟು ಬಾರಿ ಪ್ರಯತ್ನಿಸಿದರೂ ಕೂಡ ಮ್ಯಾಪ್‌ ಕಾರ್ಯನಿರ್ವಹಿಸಲಿಲ್ಲ.

ಗೂಗಲ್‌ ಮ್ಯಾಪ್‌ ನಂಬಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರು ಕೂಡ ಇಂತಹ ಸಂದರ್ಭವನ್ನು ಹಲವು ಬಾರಿ ಎದುರಿಸಿರುತ್ತಾರೆ. ಇದೀಗ ಗೂಗಲ್‌ ಮ್ಯಾಪ್‌ನಿಂದ (Google Maps)ಉಂಟಾಗಿರುವ ಸಂಕಷ್ಟದ ಕುರಿತು ಪ್ರಯಾಣಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಜನರು ಎಲ್ಲಿಗೆ ಪ್ರಯಾಣಿಸ ಬೇಕಾದ್ರೂ ಗೂಗಲ್‌ ಮ್ಯಾಪ್‌ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ : PAN Aadhar ಅನ್ನು ಮಾರ್ಚ್‌ 31ರ ಒಳಗೆ ಲಿಂಕ್‌ ಮಾಡಿ!

ಇದನ್ನೂ ಓದಿ : ಬಿಎಸ್‌ಎನ್‌ಎಲ್‌ನ ಹೊಸ ಪ್ಲಾನ್ ಬಗ್ಗೆ ಗೊತ್ತಾದ್ರೆ ಅದನ್ನೇ ರೀಚಾರ್ಜ್ ಮಾಡ್ಸೋದು ಗ್ಯಾರಂಟಿ !

Comments are closed.