Text book price hike: ಪೋಷಕರಿಗೆ ಶಾಕಿಂಗ್‌ ನ್ಯೂಸ್‌: ಪಠ್ಯ ಪುಸ್ತಕ ದರ ಶೇ. 25 ರಷ್ಟು ಏರಿಕೆ

ಬೆಂಗಳೂರು : (Text book price hike) ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಸರಕಾರದಿಂದ ಪೂರೈಸಲಾಗುವ ಪುಸ್ತಕದ ಬೆಲೆ ಏರಿಕೆ ಮಾಡಲಿದ್ದು, ಶಾಲಾ ಕಾಲೇಜು ಮಕ್ಕಳ ಪೋಷಕರಿಗೆ ಶಾಕಿಂಗ್‌ ಸುದ್ದಿ ಇದಾಗಿದೆ. ಖಾಸಗಿ ಶಾಲಾ, ಕಾಲೇಜುಗಳ ಮಕ್ಕಳ ಪಠ್ಯ ಪುಸ್ತಕದ ದರ ಶೇ. 25 ರಷ್ಟು ಏರಿಕೆಯಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯ ಪುಸ್ತಕಗಳ ಬೆಲೆ ಏರಿಕೆ ಆಗಲಿದೆ.

ಸರಕಾರಿ ಹಾಗೂ ಅನುದಾನಿತ ಶಾಲೆ ಕಾಲೇಜುಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುತ್ತಿದ್ದು, ಖಾಸಗಿ ಶಾಲೆ, ಕಾಲೇಜುಗಳು ಒಂದರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ಸರಕಾರಕ್ಕೆ ಶೇ. 10 ರಷ್ಟು ಮುಂಗಡ ಹಣ ಪಾವತಿಸಿ ಬೇಡಿಕೆ ಸಲ್ಲಿಸಬೇಕಿದೆ. ಇದಕ್ಕೆ ಅನುಗುಣವಾಗಿ ಪಠ್ಯ ಪುಸ್ತಕ ಮುದ್ರಣ ಮಾಡಿ ಪೂರೈಕೆ ಮಾಡಲಾಗುವುದು.

ರಾಜ್ಯ ಪಠ್ಯಕ್ರಮ ಭೋದನೆ ಮಾಡುವ ಖಾಸಗಿ ಶಾಲೆ ಹಾಗೂ ಪಿಯು ಕಾಲೇಜುಗಳ ಮಕ್ಕಳಿಗೆ ಸರಕಾರದಿಂದ ಪಠ್ಯ ಪುಸ್ತಕ ಪೂರೈಕೆ ಮಾಡಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯ ಪುಸ್ತಕಗಳ ಬೆಲೆ ಏರಿಕೆ ಆಗಲಿದೆ. ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುದ್ರಣ ಮಾಡಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ, ಪಿಯುಸಿ ಕಾಲೇಜುಗಳಿಗೆ ಪೂರೈಕೆ ಮಾಡಲಾಗುತ್ತದೆ. 2023-24 ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳಿಗೆ ಕಳೆದ ವರ್ಷಕ್ಕಿಂತ ಶೇ. 20- 25 ರಷ್ಟು ದರ ಹೆಚ್ಚಳ ಮಾಡಲಾಗಿದೆ.

ಕಳೆದ ವರ್ಷ 46 ರೂ. ಇದ್ದ ಗಣಿತ ಭಾಗ-2 ಪುಸ್ತಕದ ಮಾರಾಟ ಬೆಲೆ 60 ರೂ. ಗೆ ಏರಿಕೆಯಾಗಿದೆ. ಕಾಗದದ ಬೆಲೆ, ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗಿದ್ದು, ಬೆಲೆ ಏರಿಕೆ, ಜಿಎಸ್‌ಟಿ ಕಾರಣದಿಂದ ಪಠ್ಯ ಪುಸ್ತಕದ ದರ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : GATE 2023 Result: ಪಿಜಿ ಪ್ರವೇಶಕ್ಕಾಗಿ ಗೇಟ್ ಸ್ಕೋರ್ ಅನ್ನು ಸ್ವೀಕರಿಸುವ ವಿದೇಶಿ ವಿಶ್ವವಿದ್ಯಾಲಯಗಳು

ಇದನ್ನೂ ಓದಿ : NEET UG 2023: ನೀಟ್ ಯುಜಿ ಆಕಾಂಕ್ಷಿಗಳಿಗೆ ಪ್ರಮುಖ ಸೂಚನೆ‌

Text book price hike: Shocking news for parents: Text book price per cent. 25 percent increase

Comments are closed.