Textbook Controversy : ಪಠ್ಯಪುಸ್ತಕ ವಿವಾದ ಜಟಿಲ : ಸಿಎಂ ಮಧ್ಯಪ್ರವೇಶಕ್ಕೆ ಬರಗೂರು ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ (Textbook Controversy ) ತಾರಕಕ್ಕೇರಿದೆ. ಹಲವು ಪಠ್ಯಗಳನ್ನು ಕೈಬಿಟ್ಟಿರೋದಿಕ್ಕೆ ನಾಡಿನ ಹಲವು ಸಾಹಿತಿಗಳು, ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಸರ್ಕಾರ ತಮ್ಮ ನಿಲುವನ್ನು ಸಮರ್ಥಿಸಿ ಕೊಂಡಿದೆ. ಈ ಮಧ್ಯೆ ರೋಹಿತ್ ಚಕ್ರತೀರ್ಥ ವಿರುದ್ಧ ಪ್ರತಿಭಟನೆಗೂ ಸಿದ್ಧತೆ ನಡೆದಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ನಾಡಿನ‌ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ವಿವಾದದ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸಿಎಂ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿನ ಪಠ್ಯಕ್ರಮ ವಿವಾದ (Textbook Controversy) ವಿಚಾರಕ್ಕೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಮೌನ ಮುರಿದಿದ್ದಾರೆ. ಈ ವಿಚಾರದಲ್ಲಿ ಸಿಎಂ ಮಧ್ಯ ಪ್ರವೇಶ ಮಾಡುವಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಬರಗೂರು ರಾಮಚಂದ್ರಪ್ಪ, ಶೈಕ್ಷಣಿಕ ಕ್ಷೇತ್ರದ ಘನತೆ ಉಳಿಬೇಕು ಅನ್ನೋದು ನನ್ನ ನಿಜವಾದ ಕಳಕಳಿ. ಹೀಗಾಗಿ ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಿದ್ದೇನೆ.

ಅನೇಕ ಪಠ್ಯಗಳನ್ನ ಕೈಬಿಟ್ಟಿದ್ದಾರೆ ಕೆಲವನ್ನ ಸೇರಿಸಿದ್ದಾರೆ ನಾವು ಪರಿಷ್ಕರಣೆ ಮಾಡುವಾಗಲು ಕೆಲವೊಂದಿಷ್ಟು ಕೈ ಬಿಟ್ಟಿದ್ದೇವು ಕೆಲವೊಂದು ಸೇರಿಸಿದ್ದೇವೆ. ಆಗ ಯಾಕೆ ತೆಗೆದಿದ್ದೇವೆ. ಯಾಕೆ ಸೇರಿಸಿದ್ದೇವೆ ಅನ್ನೋದನ್ನ ಪಠ್ಯ ಪುಸ್ತಕ ಸಂಘಕ್ಕೆ ಮಾಹಿತಿ ನೀಡಿದ್ದೇವೆ. ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು ಅಂತ ಒಂದಿದೆ. ಸಂವಿಧಾನದ ಆಶಯಗಳಿವೆ. ಅನೇಕ ಲೇಖಕ ರನ್ನ ಪಠ್ಯದಿಂದ ಕೈಬಿಡಲಾಗಿದೆ. ಆದರೆ ಯಾಕೆ ಎಂಬುದಕ್ಕೆ ಸ್ಪಷ್ಟ ವಿವರಣೆ ಇಲ್ಲ.

ಮುಖ್ಯಮಂತ್ರಿಗಳು ಈ ಬಗ್ಗೆ ಮಧ್ಯ ಪ್ರವೇಶ ಮಾಡಬೇಕು. ಶಿಕ್ಷಣ ಕ್ಷೇತ್ರದ ಘನತೆ ಎತ್ತಿ ಹಿಡಿಯಲು ಸಿಎಂ ಮಧ್ಯ ಪ್ರವೇಶ ಮಾಡಬೇಕು ಎಂಬುದು ನಮ್ಮೆಲ್ಲರ ಆಶಯ ಎಂದು ಬರಗೂರು ಪುನರುಚ್ಛರಿಸಿದ್ದಾರೆ. ಈಗಾಗಲೇ ವಿಳಂಬವಾಗಿದೆ. ಹೀಗಾಗಿ ಸಿಎಂ ತುರ್ತಾಗಿ ಮಧ್ಯಪ್ರವೇಶ ಮಾಡಿ ಇರೋ ಆಕ್ಷೇಪಣೆ ಬಗೆ ಹರಿಸಿ ವಿವಾದ ಅಂತ್ಯಗೊಳಿಸಬೇಕು ಎಂದಿದ್ದಾರೆ. ಇನ್ನೂ ಪಠ್ಯ ಕ್ರಮ ರಚಿಸಿದ ಸಮಿತಿ ಬಗ್ಗೆ ಪ್ರತಿಕ್ರಿಯೆಗೆ ಬರಗೂರು ನಿರಾಕರಿಸಿದ್ದು, ಕಮಿಟಿ ಬಗ್ಗೆ ಸಾಕಷ್ಟು ವಿವರಣೆ ಕೊಡಬೇಕಾಗುತ್ತೆ.

‌ಹೀಗಾಗಿ ಅವರ ರೀತಿ ನಾನು ಮಾತನಾಡಲ್ಲ.ಅವರು ವೈಯಕ್ತಿಕ ಮಟ್ಟಕ್ಕೆ ಇಳಿದು ಮಾತನಾಡುತಿದ್ದಾರೆ. ನಾನು ಆ ಮಟ್ಟಕ್ಕೆ ಇಳಿದು ಉತ್ತರ ನೀಡುವ ಮನುಷ್ಯ ನಾನಲ್ಲ.ಅದನ್ನ ಕರ್ನಾಟಕದ ಜನ ನೋಡಿಕೊಳ್ತಾರೆ ಅದಕ್ಕೆ ಅವರೆ ಉತ್ತರ ಕೊಡ್ತಾರೆ. ನನಗೆ ಕನ್ನಡದ ಬಗ್ಗೆ ಸಂವೇದನೆ ಇದೆ ಇದನ್ನ ಸಿಎಂ ಪರಿಹರಿಸಬೇಕು ಅನ್ನೋದು ನನ್ನ ಒತ್ತಾಯ ಎಂದಿದ್ದಾರೆ. ಒಟ್ಟಿನಲ್ಲಿ ಪಠ್ಯಪುಸ್ತಕ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ.

ಇದನ್ನೂ ಓದಿ : ಶಾಲಾರಂಭ ಮಾಡಿ ಸಮಯ ವ್ಯರ್ಥ ಮಾಡಿದ ಸರಕಾರ : ಮುದ್ರಣವೇ ಗೊಂಡಿಲ್ಲ ಪಠ್ಯಪುಸ್ತಕ, ತಲುಪೋಕೆ ಬೇಕು ಒಂದು ತಿಂಗಳು

ಇದನ್ನೂ ಓದಿ : IOCL Recruitment 2022‌ : ಐಓಸಿಎಲ್ ನೇಮಕಾತಿ 2022 : 2.4 ಲಕ್ಷ ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

Baraguru Ramachandrappa demands for CM to intervene in textbook controversy

Comments are closed.