UGC NSP ವಿದ್ಯಾರ್ಥಿವೇತನ 2025 ; ಸ್ಕಾಲರ್‌ಶಿಪ್‌ ಅಪ್ಲೈ ಮಾಡೋಕೆ ಇದೇ ಕೊನೆಯ ದಿನಾಂಕ

ಯುಜಿಸಿ ಎನ್‌ಎಸ್‌ಪಿ ವಿದ್ಯಾರ್ಥಿವೇತನ 2025 ರ ಮೆರಿಟ್‌ ಪಟ್ಟಿ ಬಿಡುಗಡೆಯಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ (ಎನ್‌ಎಸ್‌ಪಿ) ಅಡಿಯಲ್ಲಿ ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳಿಗೆ 2025 ರ ಮೆರಿಟ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಬಯಸುವ, ಮೊದಲ ಬಾರಿಗೆ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.

ಮಾನವಿಕ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳಿಗೆ ಈ ಮೆರಿಟ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ವಿದ್ಯಾರ್ಥಿಗಳು  ನವೆಂಬರ್‌ 15, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಆದರೆ ಸಂಸ್ಥೆಯ ಪರಿಶೀಲನಾ ಪ್ರಕ್ರಿಯೆಯು ನವೆಂಬರ್‌ 30, 2025 ರವರೆಗೆ ಮುಂದುವರೆಯುತ್ತದೆ.  

ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ;

ʼರಾಷ್ಟ್ರೀಯ ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿವೇತನʼ ಯೋಜನೆಯ ಉದ್ದೇಶ, ದೇಶದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವುದು. ಈ ಯೋಜನೆಯ ಅಡಿಯಲ್ಲಿ ಯುಜಿಸಿ ಪ್ರತೀ ವರ್ಷ 10,000 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇದರಿಂದ ಅವರು ಆರ್ಥಿಕ ನಿರ್ಬಂಧನೆಗಳಿಲ್ಲದೆ ತನ್ನ ಆಯ್ಕೆಯ ಸ್ನಾತಕೋತ್ತರ ಕೋರ್ಸನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿ ವೇತನವನ್ನು ತಿಂಗಳಿಗೆ 15,000 ರೂ. ದರದಲ್ಲಿ 10 ತಿಂಗಳವರೆಗೆ ನೀಡಲಾಗುತ್ತದೆ. ಇದು ವರ್ಷಕ್ಕೆ ಒಟ್ಟು, 1.5 ಲಕ್ಷ ಸಹಾಯ ಧನವಾಗುತ್ತದೆ.

ಎನ್‌ಎಸ್‌ಪಿ ವಿದ್ಯಾರ್ಥಿವೇತನ 2025 ಮೆರಿಟ್‌ ಪಟ್ಟಿ: ಎಷ್ಟು ವಿದ್ಯಾರ್ಥಿಗಳಿಗೆ ಸ್ನಾನ?

ಯುಸಿಜಿ ಬಿಡುಗಡೆ ಮಾಡಿದ ಈ ಮಧ್ಯಂತರ ಮೆರಿಟ್‌ ಪಟ್ಟಿಯಲ್ಲಿ ಒಟ್ಟು 10,000 ವಿದ್ಯಾರ್ಥಿಗಳು ಸೇರಿದ್ದಾರೆ. ಇವರಲ್ಲಿ 5000 ವಿದ್ಯಾರ್ಥಿಗಳು ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದವರಾಗಿದ್ದರೆ, 5000 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದವರಾಗಿರುತ್ತಾರೆ.

ಎನ್‌ಎಸ್‌ಪಿ ವಿದ್ಯಾರ್ಥಿವೇತನ 2025: ಅರ್ಹತಾ ಮಾನದಂಡಗಳು

ಪಿಜಿ ಪದವಿಗೆ ಮೊದಲ ಬಾರಿಗೆ ದಾಖಲಾಗಿರುವವರು.

30 ಕಡಿಮೆ ವಯಸ್ಸಿನವರು (ಪ್ರವೇಶದ ದಿನಾಂಕದಂತೆ).

ಪೂರ್ಣ ಸಮಯ ಅಥವಾ ನಿಯಮಿತ ನೋಂದಣಿದಾರರು

ಸ್ನಾತಕೋತ್ತರ ಘಟಕಕ್ಕೆ ಮಾತ್ರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಮೆರಿಟ್‌ ಪಟ್ಟಿ ಡೌನ್‌ಲೋಡ್‌ ಮಾಡೋದು ಹೇಗೆ?

ಅಧಿಕೃತ ವೆಬ್‌ಸೈಟ್‌ https://scholarships.gov.in/ ಗೆ ಭೇಟಿ ನೀಡಿ

ಮುಖಪುಟದಲ್ಲಿನ UGC/AICTE/PG ವಿದ್ಯಾರ್ಥಿವೇತನ ವಿಭಾಗದ ಮೇಲೆ ಕ್ಲಿಕ್‌ ಮಾಡಿ

ಮಧ್ಯಂತರ ಮೆರಿಟ್‌ ಪಟ್ಟಿ 2025 (ಮಾನವಿಕ / ವಿಜ್ಞಾನ) ಲಿಂಕ್‌ ಕ್ಲಿಕ್‌ ಮಾಡಿ

ಪಿಡಿಎಫ್‌ ತೆರೆದ ನಂತರ ಡೌನ್‌ಲೋಡ್‌ ಬಟನ್‌ ಕ್ಲಿಕ್‌ ಮಾಡಿ

ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ಅರ್ಜಿ ಐಡಿಯನ್ನು ಹುಡುಕಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಉಳಿಸಿಕೊಳ್ಳಿ.

ಪ್ರಮುಖ ದಿನಾಂಕಗಳು

ವಿದ್ಯಾರ್ಥಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : ನವೆಂಬರ್‌ 15, 2025

ಸಂಸ್ಥೆಯ ಪರಿಶೀಲನೆ ಕೊನೆಯ ದಿನಾಂಕ : ನವೆಂಬರ್‌ 30, 2025

ಮೆರಿಟ್‌ ಪಟ್ಟಿ ಬಿಡುಗಡೆ : ನವೆಂಬರ್‌ 4, 2025

ಯುಸಿಜಿ ಅಧಿಕೃತ ಅಧಿಸೂಚನೆಗಳು

ಈ ವಿದ್ಯಾರ್ಥಿ ವೇತನವು ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲ ನಿಯಮಿತ ಪಿಜಿ ಕೋರ್ಸ್‌ಗೆ ಮೊದಲ ಬಾರಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ.

ಈ ವಿದ್ಯಾರ್ಥಿ ವೇತನವು ಹಣಕಾಸಿನ ನೆರವು ನೀಡುವುದಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಮತ್ತು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಹಾಯಕವಾಗಿದೆ.  

ಈ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://www.youtube.com/watch?v=z3uPHoMF0EQ

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.