fake universities in india :ಯುಜಿಸಿಯಿಂದ ನಕಲಿ ವಿವಿ ಪಟ್ಟಿ ರಿಲೀಸ್​ : ಕರ್ನಾಟಕದ ಒಂದು ವಿಶ್ವವಿದ್ಯಾಲಯ ಅಮಾನ್ಯ

ದೆಹಲಿ : fake universities in india : ದೇಶದಲ್ಲಿ ಶಿಕ್ಷಣವನ್ನು ಒದಗಿಸುತ್ತಿರುವ ವಿಶ್ವ ವಿದ್ಯಾಲಯಗಳ ಪೈಕಿ ಕೆಲವು ವಿಶ್ವ ವಿದ್ಯಾಲಯಗಳು ನಕಲಿಯಾಗಿವೆ ಎಂಬ ಶಾಕಿಂಗ್​ ಮಾಹಿತಿಯನ್ನು ವಿಶ್ವ ವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಬಿಡುಗಡೆ ಮಾಡಿದೆ. ವಿಶ್ವ ವಿದ್ಯಾಲಯ ಧನಸಹಾಯ ಆಯೋಗ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ 21 ನಕಲಿ ವಿಶ್ವ ವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಆಘಾತಕಾರಿ ವಿಚಾರ ಎಂಬಂತೆ 21 ನಕಲಿ ವಿಶ್ವ ವಿದ್ಯಾಲಯಗಳ ಪೈಕಿ ಕರ್ನಾಟಕದ ಒಂದು ವಿವಿ ನಕಲಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ .


ಯುಜಿಸಿ ಬಿಡುಗಡೆ ಮಾಡಿರುವ 21 ನಕಲಿ ವಿಶ್ವ ವಿದ್ಯಾಲಯಗಳು ಯುಜಿಸಿಯಿಂದ ಮಾನ್ಯತೆಯನ್ನು ಪಡೆದಿಲ್ಲ. ಹೀಗಾಗಿ ಈ 21 ವಿಶ್ವವಿದ್ಯಾಲಯಗಳನ್ನು ಯುಜಿಸಿ ಅಮಾನ್ಯ ಎಂದು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ, ಒಡಿಶಾ, ಕೇರಳ ಹಾಗೂ ಕರ್ನಾಟಕದ ವಿವಿಗಳು ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್​ನಲ್ಲಿರುವ ಬಡಗಣದಲ್ಲಿರುವ ವಿಶ್ವ ವಿದ್ಯಾಲಯವನ್ನು ನಕಲಿ ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ನಕಲಿ ಪಟ್ಟಿಯಲ್ಲಿರುವ ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ನೀಡುವ ಯಾವುದೇ ಅರ್ಹತೆಯನ್ನು ಹೊಂದಿರುವುದಿಲ್ಲ.


ಯುಜಿಸಿ ಕಾರ್ಯದರ್ಶಿ ರಂಜನೀಶ್​ ಜೈನ್​ ಈ ವಿಚಾರವಾಗಿ ಮಾಹಿತಿ ನೀಡಿದ್ದು ದೆಹಲಿಯಲ್ಲಿ ಅತೀ ಹೆಚ್ಚು ಅಂದರೆ 8 ನಕಲಿ ವಿಶ್ವ ವಿದ್ಯಾಲಯಗಳನ್ನು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸ್, ಕರ್ಮಷಿಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ, ವೊಕೆಶನಲ್ ವಿಶ್ವವಿದ್ಯಾಲಯ, ಎಡಿಆರ್ ಜ್ಯೂರಿಡಿಕಲ್ ಯೂನಿವರ್ಸಿಟಿ ಸೇರಿದಂತೆ ದೆಹಲಿಯ 8 ವಿವಿಗಳನ್ನು ನಕಲಿ ವಿವಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.


ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು ಇಲ್ಲಿನ ನಾಲ್ಕು ವಿವಿಗಳನ್ನು ಅಮಾನ್ಯ ಮಾಡಲಾಗಿದೆ. ಇದಾದ ಬಳಿಕ ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ಪುದುಚೇರಿ, ಆಂಧ್ರ ಪ್ರದೇಶ, ಕೇರಳದಲ್ಲಿರುವ ವಿವಿಗಳೂ ಸಹ ಅಮಾನ್ಯಗೊಂಡಿವೆ.

ಇದನ್ನು ಓದಿ : bs yeddiyurappa : ಸಂಸದೀಯ ಮಂಡಳಿ ಆಯ್ಕೆ ಬಳಿಕ ಮೊದಲ ಬಾರಿಗೆ ದೆಹಲಿಗೆ ಹಾರಿದ ಬಿಎಸ್​ವೈ : ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಸುಳಿವು

ಇದನ್ನೂ ಓದಿ : DK Shivakumar : ಮತ್ತೊಮ್ಮೆ ಸಿಎಂ ಸ್ಥಾನದ ಅಭಿಲಾಷೆ ಹೊರಹಾಕಿದ ಡಿಕೆಶಿ : ಒಕ್ಕಲಿಗರ ಬಳಿ ಆಶೀರ್ವಾದ ಬೇಡಿದ ಕನಕಪುರ ಬಂಡೆ

ugc releases list of fake universities in india karnataka has one

Comments are closed.