ಸೋಮವಾರ, ಏಪ್ರಿಲ್ 28, 2025
HomeElectionಕೈಪಾಳಯಕ್ಕೆ ತಲೆನೋವಾದ ಕಡೂರು : ಪಕ್ಷೇತರ ಅಭ್ಯರ್ಥಿಯಾಗಿ ದತ್ತಾ ಕಣಕ್ಕೆ

ಕೈಪಾಳಯಕ್ಕೆ ತಲೆನೋವಾದ ಕಡೂರು : ಪಕ್ಷೇತರ ಅಭ್ಯರ್ಥಿಯಾಗಿ ದತ್ತಾ ಕಣಕ್ಕೆ

- Advertisement -

ಕಡೂರು : ಹಲವು ವರ್ಷಗಳ ಕಾಲ ಜೆಡಿಎಸ್‌ನಲ್ಲಿ ಪಕ್ಷ ಬಲವರ್ಧನೆಗಾಗಿ ದುಡಿದು ಸ್ಥಾನಮಾನದಿಂದ ವಂಚಿತರಾಗಿ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಶಾಸಕ ವೈ.ಎಸ್.ವಿ ದತ್ತಾ (MLA YSV Dutta) ಸದ್ಯ ಕಾಂಗ್ರೆಸ್ ನಿಂದಲೂ ಹೊರಬಂದು ಪಕ್ಷೇತರವಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದಾರೆ. ಟಿಕೇಟ್ ವಂಚಿತರಾದ ಹಿನ್ನೆಲೆಯಲ್ಲಿ ಅಭಿಮಾನಿಗಳು,ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಟವೆಲ್ ಗುರುತಿನೊಂದಿಗೆ ಸ್ಪರ್ಧಿಸೋದಾಗಿ ಹೇಳಿದ್ದಾರೆ.

ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈ.ಎಸ್.ವಿ ದತ್ತಾ ಕಡೂರಿನಿಂದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ದತ್ತಾಗೆ ಟಿಕೇಟ್ ನೀಡಿರಲಿಲ್ಲ. ಇದರಿಂದ ದತ್ತಾಗೆ ತೀವ್ರ ಮುಜುಗರ ಎದುರಾಗಿತ್ತು. ಟಿಕೇಟ್ ಕೈ ತಪ್ಪಿದ್ದರಿಂದ ಮುಜುಗರಕ್ಕೊಳಗಾದ ದತ್ತಾ ಬಹಿರಂಗವಾಗಿಯೇ ತಮ್ಮ ಅಸಮಧಾನ ತೋಡಿಕೊಂಡಿದ್ದರು. ಆದರೆ ದತ್ತಾ ಟಿಕೇಟ್ ತಪ್ಪಿದನ್ನು ಹಾಗೂ ದತ್ತಾ ಅಸಮಧಾನವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ದತ್ತಾಗೆ ಕಡೂರಿನ ಟಿಕೇಟ್ ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿರಲಿಲ್ಲ ಎಂದಿದ್ದರು.

ಈ ಹಿನ್ನೆಲೆಯಲ್ಲಿ ನೊಂದಿದ್ದ ದತ್ತಾ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಕಾರ್ಯಕರ್ತರ ಜೊತೆ ಸರಣಿ ಸಭೆಗಳನ್ನು ನಡೆಸಿದ್ದರು. ಅಲ್ಲದೇ ಭಾನುವಾರ ಅಂತಿಮ ಹಂತದ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದರು. ಹೇಳಿದಂತೆ ಅಪಾರ ಅಭಿಮಾನಿಗಳ ಜೊತೆ ಮೆರವಣಿಗೆ ಹಾಗೂ ಸಭೆ ಮಾಡಿದ ವೈ.ಎಸ್.ವಿ ದತ್ತಾ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಕೊಂಚ ಭಾವುಕರಾದರು. ನನ್ನ ಬಳಿ ಜಾತಿ ಬೆಂಬಲ ಇಲ್ಲ. ಹಣ ಇಲ್ಲ. ನಾನೊಬ್ಬ ಸಾಲಗಾರ ಎಂದು ಕಣ್ಣೀರಿಟ್ಟರು.

ಇದೇ ಸಭೆಯಲ್ಲಿ ತಾವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ದತ್ತಾ ಹೆಗಲ ಮೇಲಿದ್ದ ಟವೆಲ್ ಒಡ್ಡಿ ಇದೇ ಗುರುತಿನಲ್ಲಿ ಚುನಾವಣೆ ಸ್ಪರ್ಧಿಸುತ್ತೇನೆ. ನೀವೆಲ್ಲರೂ ಸಹಾಯ ಮಾಡಿ. ನನಗೆ ಚುನಾವಣೆಗಾಗಿ ಮತ ಹಾಗೂ ಹಣದ ಭೀಕ್ಷೆ ನೀಡಿ ಎಂದು ಮನವಿ ಮಾಡಿದರು. ದತ್ತಾ ಮಾತಿಗೆ ತಕ್ಷಣ ಸ್ಪಂದಿಸಿದ ಕಾರ್ಯಕರ್ತರು ತಕ್ಷಣ 50 ಸಾವಿರ ರೂಪಾಯಿ ಚೆಕ್, ನಗದು ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದಲ್ಲದೇ, ಚುನಾವಣೆಗೆ ಸ್ಪರ್ಧಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರಾಮೀಸ್ ಮಾಡಿದರು.

ಇದನ್ನೂ ಓದಿ : ಕಮಲ ಪಡೆಗೆ ಕಿಚ್ಚನೇ ಶಕ್ತಿ : ಬಿಜೆಪಿ ಪರ ಪ್ರಚಾರಕ್ಕೆ ಸಿದ್ಧವಾದ ಸುದೀಪ್

ಇದನ್ನೂ ಓದಿ : ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ : ಬಿಎಸ್ವೈ ಭೇಟಿ ಮಾಡಿದ ತಮಿಳು ನಾಯಕರು

ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್ ದತ್ತಾ ಮನೆಗೆ ಸ್ಥಳೀಯ ನಾಯಕರನ್ನು ಕಳುಹಿಸಿ ರಾಜಿ ಸಂಧಾನದ ಪ್ರಯತ್ನ ಕೂಡ ನಡೆಸಿತ್ತು. ಆದರೆ ಸದ್ಯ ದತ್ತಾ ಕಾಂಗ್ರೆಸ್ ನಿಂದಲೂ ಹೊರಬಂದಂತಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ.

A headache for Kaipalaya: MLA YSV Dutta as a non-party candidate

RELATED ARTICLES

Most Popular