ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ : ಬಿಎಸ್ವೈ ಭೇಟಿ ಮಾಡಿದ ತಮಿಳು ನಾಯಕರು

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಗೆಲುವಿಗಾಗಿ ಬಗೆ ಬಗೆಯ ತಂತ್ರ ಹೂಡುತ್ತಿದ್ದಾರೆ.‌ ಇದರ ಮಧ್ಯೆಯೇ ಇರೋ ಪಕ್ಷಗಳ ಜೊತೆ ಇನ್ನಷ್ಟು ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗ್ತಿದ್ದು, ಈ ಪೈಕಿ ತಮಿಳುನಾಡಿನ ಪ್ರಬಲ ಪಕ್ಷ ಎಐಡಿಎಂಕೆ (AIADMK – BS Yeddyurappa) ಕೂಡ ಕರ್ನಾಟಕ ವಿಧಾನಸಭೆಗೆ ಆಯ್ಕೆ ಬಯಸಿದ್ದು, ಈ ಸಂಬಂಧ ಎಐಎಡಿಎಂಕೆ ನಾಯಕರು ಬಿಎಸ್ವೈ ಭೇಟಿ ಮಾಡಿದ್ದಾರೆ.

ತಮಿಳುನಾಡಿನ ಎಐಎಡಿಎಂಕೆ ಪಕ್ಷ ಕರ್ನಾಟಕದ ತಮಿಳು ಮತಗಳ ಮೇಲೆ ಕಣ್ಣಿಟ್ಟಿದೆ.‌ ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ. ಕೇವಲ ಚುನಾವಣಾ ಸ್ಪರ್ಧೆ ಮಾತ್ರವಲ್ಲದೇ ಕರ್ನಾಟಕದ ಆಡಳಿತ ಪಕ್ಷ ಬಿಜೆಪಿಯೊಂದಿಗೆ AIADMK ಮೈತ್ರಿ ಕನಸಿನಲ್ಲಿದೆ. ಹೀಗಾಗಿ AIADMK ಪಕ್ಷದ ನಾಯಕ ವಿ.ಪುಗಳೆಂದಿ ಬೆಂಗಳೂರಿನಲ್ಲಿ ಮಾಜಿಸಿಎಂ ಹಾಗೂ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಅವರೊಂದಿಗೆ ಚುನಾವಣೆಯ ಕುರಿತು ಚರ್ಚಿಸಿದ್ದಾರಂತೆ.

ಇದನ್ನೂ ಓದಿ : ಸಾಂಸ್ಕೃತಿಕ ನಗರಿಗೆ ಇಂದು ಮೋದಿ ಆಗಮನ : ಇಲ್ಲಿದೆ ಸಂಪೂರ್ಣ ಕಾರ್ಯಕ್ರಮದ ವಿವರ

ಇದನ್ನೂ ಓದಿ : BJP Candidates List : ಬಿಜೆಪಿಯಲ್ಲಿ ಅಂತಿಮ ಹಂತಕ್ಕೆ ಟಿಕೇಟ್ ಸರ್ಕಸ್: ದೆಹಲಿ ತಲುಪಿದ ಪಟ್ಟಿ ಹಾಗೂ ಅಭ್ಯರ್ಥಿಗಳು

ರಾಜ್ಯದಲ್ಲಿ ತಮಿಳು ಭಾಷಿಕರು ಹೆಚ್ಚಿರುವ ಕಡೆ ಸ್ಪರ್ಧೆಗೆ ನಾವು ಒಲವು ಹೊಂದಿದ್ದೇವೆ. ಈ ಬಗ್ಗೆ ಬಿಎಸ್ವೈ ಯವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಸ್ಪರ್ಧೆ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕರ್ನಾಟಕದಲ್ಲಿ ಈ ಭಾರಿ ವಿಧಾನಸಭೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಗುರಿ ಹೊಂದಿದ್ದೇವೆ ಎಂದು ಎಐಎಡಿಎಂಕೆ ನಾಯಕ ಒ.ಪನ್ನೀರ್ ಸೆಲ್ವಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೇವಲ‌ ರಾಜ್ಯ ಬಿಜೆಪಿ ನಾಯಕರು ಮಾತ್ರವಲ್ಲ ಎಐಎಡಿಎಂಕೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದು, ಮೈತ್ರಿ ಬಗ್ಗೆ ಚರ್ಚಿಸಲಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಹೊಸ ಹೊಸ ಪಕ್ಷಗಳು ರಾಜಕೀಯ ಹಿಡಿತಕ್ಕೆ ಸರ್ಕಸ್ ಆರಂಭಿಸಿದ್ದು ಮತದಾರರು ಯಾರ ಯಾರ ಭವಿಷ್ಯವನ್ನು ಹೇಗ್ಹೇಗೆ ಬರೆಯುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕನಸು ನನಸು: 60 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಟ್ಟ ಬಿಜೆಪಿ

AIADMK – BS Yeddyurappa : AIADMK alliance with BJP : Tamil leaders meet BSY

Comments are closed.