BJP list : ಮೋದಿ ನೇತೃತ್ವದಲ್ಲಿ ಬಿಜೆಪಿ ಮಹತ್ವದ ಸಭೆ: ಸೋಮವಾರ ಬಿಜೆಪಿ ಲಿಸ್ಟ್ ಅನೌನ್ಸ್

ಬೆಂಗಳೂರು : (BJP list) ಮೇ 10ರಂದು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ಪಕ್ಷಗಳ ಅಭ್ಯರ್ಥಿ ಆಯ್ಕೆ ಕಸರತ್ತು ಚುರುಕುಗೊಂಡಿದೆ. ಈ ಮಧ್ಯೆ ಒಂದೇ ಒಂದು ಅಭ್ಯರ್ಥಿಗಳನ್ನು ಪ್ರಕಟಿಸಿದ ಬಿಜೆಪಿಯತ್ತೇ ಎಲ್ಲರ ಚಿತ್ತ ನೆಟ್ಟಿದ್ದು, ಇಂದು ದೆಹಲಿಯಲ್ಲಿ ನಡೆಯೋ ಮೋದಿ ನೇತೃತ್ವದ ಸಭೆಯಲ್ಲಿ ಬಿಜೆಪಿ ಟಿಕೇಟ್ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಬಿಜೆಪಿ ಬಂಡಾಯವಿಲ್ಲದ ಹಾಗೂ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗಾಗಿ ಕಳೆದ ಒಂದು ವಾರದಿಂದ ಸಭೆ ಮೇಲೆ ಸಭೆ ನಡೆಸಿದೆ. ಈಗಾಗಲೇ ಒಂದು ಕ್ಷೇತ್ರಕ್ಕೆ ಮೂವರಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಹೈಕಮಾಂಡ್ ಗೂ ರವಾನಿಸಿದೆ. ಈಗ ಅಂತಿಮಗೊಂಡಿರೋ ಅಭ್ಯರ್ಥಿಗಳ ಪೈಕಿ ಗೆಲ್ಲುವ ಕುದುರೆಯನ್ನು ಹುಡುಕುವ ಫೈನಲ್ ಸಭೆಗೆ ಮೋದಿ ಎಂಟ್ರಿಕೊಟ್ಟಿದ್ದು, ರವಿವಾರ ಸಂಜೆ ದೆಹಲಿಯಲ್ಲಿ ಪ್ರಧಾನಿ‌ಮೋದಿ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಂಸದೀಯ ಮಂಡಳಿಯ ಅಂತಿಮ ಸಭೆಯಲ್ಲಿ ಪಟ್ಟಿ ಫೈನಲ್ ಅಗಲಿದ್ದು ನಾಳೆ ಬಿಜೆಪಿ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆ 10.30ರಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ದೆಹಲಿಯ ಜೆಪಿ ನಡ್ಡಾ ನಿವಾಸದಲ್ಲೇ ಸಭೆ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಚುನಾವಣಾ ಉಸ್ತುವಾರಿ ಗಳಾದ ಧರ್ಮೇಂದ್ರ ಪ್ರಧಾನ್, ಮನ್ಸೂಕ್ ಮಾಂಡವೀಯ, ಅಣ್ಣಾ ಮಲೈ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರ

ಇದನ್ನೂ ಓದಿ : ಸಾಂಸ್ಕೃತಿಕ ನಗರಿಗೆ ಇಂದು ಮೋದಿ ಆಗಮನ : ಇಲ್ಲಿದೆ ಸಂಪೂರ್ಣ ಕಾರ್ಯಕ್ರಮದ ವಿವರ

ಬಳಿಕ ಸಂಜೆ 5ಗಂಟೆಗೆ ನಡೆಯಲಿರುವ ಸಂಸದೀಯ ಮಂಡಲಿ ಸಭೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಟಿಕೆಟ್ ಪಟ್ಟಿ ಅಂತಿಮಗೊಳ್ಳಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಎರಡು ದಿನಗಳಿಂದ ನಾಯಕರಿಂದ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಿದ್ದಾರೆ. ಅಂತಿಮಗೊಂಡ ಟಿಕೆಟ್ ಪಟ್ಟಿ ನಾಳೆ ಪ್ರಕಟವಾಗಲಿದ್ದು, ಟಿಕೇಟ್ ಆಕಾಂಕ್ಷಿಗಳ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಸದ್ಯ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಚಾಮರಾಜನಗರ ಹಾಗೂ ಮೈಸೂರು ಪ್ರವಾಸ ಮುಗಿಸಿ, ಮಧ್ಯಾಹ್ನ ದೆಹಲಿಗೆ ವಾಪಸ್ಸಾಗಲಿದ್ದು, ಬಿಜೆಪಿ ನಾಯಕರು ಬಹುತೇಕರು ದೆಹಲಿಯಲ್ಲೇ ಬೀಡುಬಿಟ್ಟು ಟಿಕೇಟ್ ಲಾಭಿಯಲ್ಲಿ ತೊಡಗಿದ್ದಾರೆ.

BJP list: BJP important meeting under the leadership of Modi: BJP list announced on Monday

Comments are closed.