ಕರ್ನಾಟಕ ವಿಧಾನಸಭಾ ಚುನಾವಣೆ 2023 : ನಾಳೆ ಮತ ಎಣಿಕೆಗೆ ಸಕಲ ಸಿದ್ದತೆ

ಬೆಂಗಳೂರು : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ಎಲ್ಲಾ ಜಿಲ್ಲೆಗಳಲ್ಲಿ ನಡೆದಿದೆ. ರಾಜ್ಯದಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಆಯಾ ಕ್ಷೇತ್ರದಲ್ಲಿ ಮತ ಏಣಿಕೆಗೆ (Assembly election vote counting) ಸಕಲ ಸಿದ್ದತೆಯು ನಡೆದಿದೆ. ಹೀಗಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ, ನಾಳೆ (ಮೇ 13 ) ಶನಿವಾರದಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇನ್ನು 224 ಕ್ಷೇತ್ರಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯ ನಾಳೆ ಹೊರ ಬೀಳಲಿದೆ.

ನಾಳೆ ಮುಂಜಾನೆಯಿಂದಲ್ಲೇ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ. ಯಾವ ಕ್ಷೇತ್ರದಲ್ಲಿ ಯಾರು ಜಯಭೇರಿ ಬಾರಿಸಲಿದ್ದಾರೆ ? ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದು ನಾಳೆ ತಿಳಿಯಿದೆ. ಆಯಾ ಪಕ್ಷದವರು ನಾವೇ ಅಧಿಕಾರ ಚುಕ್ಕಾಣಿ ಹಿಡಿಯುತ್ತೆವೆ ಎನ್ನುವ ಭರವಸೆಯಲ್ಲಿ ಇದ್ದಾರೆ. ಎಣಿಕೆ ಕೇಂದ್ರದ ಒಳಗೆ 3 ಭದ್ರತೆ ಲೇಯರ್‌ ಕಲ್ಪಿಸಲಾಗಿದೆ. ಒಳಗೆ ಪ್ಯಾರಾಮಿಲಿಟರಿ ಫೋರ್ಸ್‌ ಇರಲಿದೆ. ಪ್ರತಿ ಟೇಬಲ್‌ ಮೋಲೂ ವೆಬ್‌ ಕ್ಯಾಮೆರಾ ಇರಿಸಲಾಗಿದೆ. 2ನೇ ಲೇಯರ್‌ನಲ್ಲಿ ಬ್ಯಾರಿಕೇಡಿಂಗ್‌ ಹಾಗೂ ಪೊಲೀಸರು ಭದ್ರತೆ ಇರಲಿದೆ. ಸುಮಾರು 4000 ಸಿಬ್ಬಂದಿಯನ್ನು ಕೌಂಟಿಂಗ್‌ ಪ್ರಕ್ರಿಯೆಗೆ ಬಳಸಿಕೊಂಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಭರ್ಜರಿ ಪೈಪೋಟಿ : ಸಿದ್ದು, ಡಿಕೆಶಿ ಬೆನ್ನಲ್ಲೇ ಪ್ರಿಯಾಂಕ ಖರ್ಗೆ ಹೆಸರು

ಇದನ್ನೂ ಓದಿ : BJP MLA BM Sukumar Shetty : ಬೈಂದೂರು ಬಿಜೆಪಿ ಶಾಸಕ ಬಿಎಂ ಸುಕುಮಾರ ಶೆಟ್ಟಿ ಉಚ್ಚಾಟನೆ

ಮತ ಎಣಿಕೆ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಮತ ಎಣಿಕೆ ಕೇಂದ್ರದಿಂದ ಲೈವ್‌ ವೆಬ್‌ಕಾಸ್ಟಿಂಗ್‌ ನಡೆಯಲಿದೆ. ವೆಬ್‌ಸದೈಟ್‌ನಲ್ಲಿ ಯಾರು ಬೇಕಾದ್ರೂ ಲಾಗಿನ್‌ ಆಗಿ ಕೌಂಟಿಂಗ್‌ ಪ್ರಕ್ರಿಯೆ ಗಮನಿಸಬಹುದು. ಮತ ಎಣಿಕೆಗಾಗಿ 450 ಟೇಬಲ್ಸ್‌ ಇರಿಸಲಾಗಿದೆ. ಪೋಸ್ಟಲ್‌ ಬ್ಯಾಲೆಟ್‌ಗಾಗಿಯೇ 2 ರಿಂದ 3 ಟೇಬಲ್‌ ಇರಿಸಲಾಗಿದೆ. ಈಗ ದೆಹಲಿಯಿಂದ 14 ವೀಕ್ಷಕರು ಬಂದಿದ್ದಾರೆ. ಪ್ರತಿ ಅಸೆಂಬ್ಲಿಗೆ 1 ವೀಕ್ಷಕರು ಈಗ ಇರಲಿದ್ದಾರೆ. ಎಣಿಕೆ ಪ್ರಕ್ರಿಯೆಯಲ್ಲಿ ಮೊದಲು ಪೋಸ್ಟಲ್‌ ಬ್ಯಾಲೆಟ್‌ ಪರಿಗಣಿಸಲಾಗಿದೆ. 18 ರಿಂದ 20 ಸಾವಿರ ಪೋಸ್ಟಲ್‌ ಬ್ಯಾಲೆಟ್‌ಗಳಿವೆ. ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ಹೇಳಿದರು.

Assembly election vote counting : Karnataka assembly election 2023 : All ready for vote counting tomorrow

Comments are closed.