ವಿವಾದದ ನಡುವೆ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್‌ ಕಂಡ ದಿ ಕೇರಳ ಸ್ಟೋರಿ

ದಿ ಕೇರಳ ಸ್ಟೋರಿ ಬಿಡುಗಡೆಯಾಗಿ ಒಂದು ವಾರ ಕಳೆದರೂ ಬಾಕ್ಸ್‌ ಆಫೀಸ್‌ನಲ್ಲಿ (The Kerala Story Collection) ಘರ್ಜನೆ ಮಾತ್ರ ನಿಂತಿರುವುದಿಲ್ಲ. ನಿರ್ದೇಶಕ ಸುದೀಪ್ತೋ ಸೇನ್‌ ಅವರ ಆಕ್ಷನ್ ಕಟ್‌ನಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಾಲ್ಲೊಂದು ವಿಷಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಇಂದಿನವರೆಗೂ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಕಾಣುತ್ತಿದೆ. ಒಂದು ವಾರಕ್ಕೆ ಒಟ್ಟು 81.36 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಎನಿಸಿಕೊಂಡಿದೆ.

ಈ ಸಿನಿಮಾ ಗೆಲುವಿನಿಮದ ನಟಿ ಅದಾ ಶರ್ಮಾ ಸಖತ್‌ ಖುಷಿಯಲ್ಲಿ ಇದ್ದಾರೆ. ಇನ್ನು ನಿರ್ಮಾಪಕ ವಿಪುಲ್‌ ಅಮೃತ್‌ಲಾಲ್‌ ಶಾ ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ದೊರಕಿದೆ. ಹೀಗಾಗಿ ದಿ ಕೇರಳ ಸ್ಟೋರಿ ಸಿನಿಮಾದ ಅಬ್ಬರ ಮತ್ತಷ್ಟು ದಿನ ಮುಂದುವರೆಯುವಂತೆ ಕಾಣುತ್ತಿದೆ. ವಿಮರ್ಶಕರ ಪ್ರಕಾರ ಎರಡನೇ ವಾರಾಂತ್ಯದಲ್ಲಿ ಕೂಡ ಭರ್ಜರಿ ಕಲೆಕ್ಷನ್‌ ಕಾಣುವ ಸಾಧ್ಯತೆ ಇದೆ. ಶೀಘ್ರದಲ್ಲೇ ಈ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಲಿದೆ. ಅದಾ ಶರ್ಮಾ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಸಖತ್‌ ಮೈಲೇಜ್‌ ಸಿಕ್ಕಿದೆ. ಹೀಗಾಗಿ ಅವರಿಗೆ ಹೊಸ ಹೊಸ ಅವಕಾಶಗಳು ಅರಸಿ ಬರಲಿದೆ.‌

ಇದನ್ನೂ ಓದಿ : ಆದಿಪುರುಷ್‌ ಟ್ರೇಲರ್‌ ರಿಲೀಸ್‌ : ರಾಮನ ಪಾತ್ರದಲ್ಲಿ ಮಿಂಚಿದ ನಟ ಪ್ರಭಾಸ್‌

ಇದನ್ನೂ ಓದಿ : ಕಾಂತಾರ 2 ಸ್ಕ್ರಿಫ್ಟ್‌ ತಯಾರಿ ನಡುವಲ್ಲೇ ದೇವರ ಮೊರೆ ಹೋದ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : ಕೇರಳ‌ ಸ್ಟೋರಿ ಸುಂದರಿಯ ಶಿವಭಕ್ತಿ : ಅದಾ ಶರ್ಮಾ ವಿಡಿಯೋ ವೈರಲ್

ದಿ ಕೇರಳ ಸ್ಟೋರಿ ಸಿನಿಮಾವು ಲವ್‌ ಜಿಹಾದ್‌ ಮತ್ತು ಮತಾಂತರದ ಘಟನೆಗಳನ್ನು ಒಳಗೊಂಡಿದೆ. ವಿವಾದತ್ಮಕ ಕಥಾಹಂದರ ಇರುವುದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನುಳಿದಂತೆ ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಅಡ್ಡಿ ಆಗಿದ್ದರೂ ಕೂಡ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿಲ್ಲ.

The Kerala Story Collection: The Kerala Story saw a huge collection at the box office amid controversy

Comments are closed.