BJP candidates lists : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ: ಯಾರಿಗೆಲ್ಲಾ ಟಿಕೆಟ್ ?

ಬೆಂಗಳೂರು : (BJP candidates lists) ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷಗಳ ನಡುವೆಯೇ ಚುನಾವಣೆ ಬಿಸಿ ಏರುತ್ತಿದೆ. ಇದರ ಮಧ್ಯೆ ಟಿಕೆಟ್‌ ಅಭ್ಯರ್ಥಿಗಳ ಫೈಟ್‌ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ. ಜೆಡಿಎಸ್‌ ತನ್ನ 93 ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಸಹ ಪ್ರಕಟಿಸಿದೆ. ಇದೀಗ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಇಂದು (10 ಏಪ್ರಿಲ್) ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ನಿನ್ನೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (CEC) ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದು, ಅಳೆದು ತೂಗಿ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದಾರೆ. ಇಂದು ಟಿಕೆಟ್‌ ಘೋಷಣೆಗೂ ಮೊದಲೇ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ನಂತರ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಿಇಸಿಯ ಇತರ ಸದಸ್ಯರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಕರ್ನಾಟಕ ಚುನಾವಣೆ 2023 ಕ್ಕೆ ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ :

ನಿಪ್ಪಾಣಿ: ಶಶಿಕಲಾ ಜೊಲ್ಲೆ
ಕುಡಚಿ (ಎಸ್‌ಸಿ): ಪಿ.ರಾಜೀವ್
ರಾಯಬಾಗ (ಎಸ್‌ಸಿ): ದುರ್ಯೋಧನ ಮಹಾಲಿಂಗಪ್ಪ ಐಹೊಳೆ
ಅರಾಬಾವಿ: ಬಾಲಚಂದ್ರ ಜಾರಕಿಹೊಳಿ
ಗೋಕಾಕ: ರಮೇಶ ಜಾರಕಿಹೊಳಿ
ಬೆಳಗಾವಿ ಉತ್ತರ: ಅನಿಲ್ ಎಸ್ ಬೆನಕೆ
ಬೆಳಗಾವಿ ದಕ್ಷಿಣ: ಅಭಯ ಪಾಟೀಲ
ಕಿತ್ತೂರು: ಮಹಾಂತೇಶ ದೊಡ್ಡಗೌಡರ
ರಾಮದುರ್ಗ: ಮಹಾದೇವಪ್ಪ ಶಿವಲಿಂಗಪ್ಪ ಯಾದವ
ಮುಧೋಳ (ಎಸ್‌ಸಿ): ಗೋವಿಂದ ಕಾರಜೋಳ
ತೇರದಾಳ: ಸಿದ್ದು ಸವದಿ
ಬಿಳಗಿ: ಮುರುಗೇಶ ನಿರಾಣಿ
ಬಾಗಲಕೋಟೆ: ವೀರಣ್ಣ ಚರಂತಿಮಠ
ಹುನಗುಂದ: ದೊಡ್ಡನಗೌಡ ಪಾಟೀಲ
ಮುದ್ದೇಬಿಹಾಳ: ಎ.ಎಸ್.ಪಾಟೀಲ ನಡಹಳ್ಳಿ
ದೇವರ ಹಿಪ್ಪರಗಿ: ಸೋಮನಗೌಡ ಬಿ ಪಾಟೀಲ್ ಸಾಸನೂರ
ಬಿಜಾಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್
ಸಿಂದಗಿ: ರಮೇಶ ಭೂಸನೂರ
ಸುರಪುರ (ಎಸ್‌ಟಿ): ರಾಜುಗೌಡ
ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್
ಸೇಡಂ: ರಾಜಕುಮಾರ ಪಾಟೀಲ್
ಗುಲ್ಬರ್ಗ ಗ್ರಾಮಾಂತರ (ಎಸ್‌ಸಿ): ಬಸವರಾಜ ಮಟ್ಟಿಮೂಡ
ಗುಲ್ಬರ್ಗ ದಕ್ಷಿಣ: ದತ್ತಾತ್ರೇಯ ಸಿ.ಪಾಟೀಲ
ಆಳಂದ: ಸುಭಾಷ ಗುತ್ತೇದಾರ
ಔರಾದ್ (SC): ಪ್ರಭು ಚೌಹಾಣ್
ರಾಯಚೂರು: ಡಾ.ಶಿವರಾಜ್ ಪಾಟೀಲ್
ದೇವದುರ್ಗ (ಎಸ್‌ಟಿ): ಶಿವನಗೌಡ ನಾಯ್ಕ
ಗಂಗಾವತಿ: ಪರಣ್ಣ ಮುನವಳ್ಳಿ
ಯಲಬುರ್ಗಾ: ಹಾಲಪ್ಪ ಆಚಾರ್
ಶಿರಹಟ್ಟಿ (ಎಸ್‌ಸಿ): ರಾಮಪ್ಪ ಲಮಾಣಿ
ರೋಣ: ಕಳಕಪ್ಪ ಬಂಡಿ
ನರಗುಂದ: ಸಿ.ಸಿ.ಪಾಟೀಲ
ನವಲಗುಂದ: ಶಂಕರ ಪಾಟೀಲ ಮುನೇನಕೊಪ್ಪ
ಧಾರವಾಡ: ಅಮೃತ ದೇಸಾಯಿ
ಹುಬ್ಬಳ್ಳಿ-ಧಾರವಾಡ ಕೇಂದ್ರ: ಜಗದೀಶ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ್
ಕಲಘಟಗಿ : ಸಿಎಂ ನಿಂಬಣ್ಣನವರ್
ಕಾರವಾರ: ರೂಪಾಲಿ ನಾಯ್ಕ
ಕುಮಟಾ: ದಿನಕರ ಶೆಟ್ಟಿ
ಭಟ್ಕಳ: ಸುನೀಲ್ ನಾಯ್ಕ
ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ
ಶಿಗ್ಗಾಂವ: ಬಸವರಾಜ ಬೊಮ್ಮಾಯಿ
ಬ್ಯಾಡಗಿ: ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರ: ಬಿ.ಸಿ.ಪಾಟೀಲ
ವಿಜಯನಗರ: ಆನಂದ್ ಸಿಂಗ್
ಸಿರುಗುಪ್ಪ (ಎಸ್ಟಿ): ಎಂ.ಎಸ್.ಸೋಮಲಿಂಗಪ್ಪ
ಬಳ್ಳಾರಿ ನಗರ: ಜಿ.ಸೋಮಶೇಖರ ರೆಡ್ಡಿ
ಚಿತ್ರದುರ್ಗ: ಜಿ.ಎಚ್.ತಿಪ್ಪಾರೆಡ್ಡಿ
ಹೊಸದುರ್ಗ: ಗೂಳಿಹಟ್ಟಿ ಡಿ.ಶೇಖರ್
ಜಗಳೂರು (ಎಸ್ ಟಿ): ಎಸ್ ವಿ ರಾಮಚಂದ್ರ
ಹೊನ್ನಾಳಿ: ಎಂ.ಪಿ.ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ): ಕೆ.ಬಿ.ಅಶೋಕ್ ನಾಯ್ಕ್
ತೀರ್ಥಹಳ್ಳಿ : ಆರಗ ಜ್ಞಾನೇಂದ್ರ
ಶಿಕಾರಿಪುರ: ಬಿ.ವೈ.ವಿಜಯೇಂದ್ರ
ಸೊರಬ: ಕುಮಾರ್ ಬಂಗಾರಪ್ಪ
ಕಾರ್ಕಳ: ವಿ.ಸುನೀಲ್ ಕುಮಾರ್
ತರೀಕೆರೆ: ಡಿ.ಎಸ್.ಸುರೇಶ್
ಕಡೂರು: ಬೆಳ್ಳಿ ಪ್ರಕಾಶ್
ಚಿಕ್ಕನಾಯಕನಹಳ್ಳಿ : ಜೆಸಿ ಮಾಧುಸ್ವಾಮಿ
ತಿಪಟೂರು: ಬಿ.ಸಿ.ನಾಗೇಶ್
ತುರುವೇಕೆರೆ: ಎ.ಎಸ್.ಜಯರಾಮ್
ತುಮಕೂರು ನಗರ: ಜಿ.ಬಿ.ಜ್ಯೋತಿ ಗಣೇಶ್
ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್
ಯಲಹಂಕ: ಎಸ್.ಆರ್.ವಿಶ್ವನಾಥ್
ಕೃಷ್ಣರಾಜಪುರ: ಬೈರತಿ ಬಸವರಾಜ
ಯಶವಂತಪುರ: ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿನಗರ: ಮುನಿರತ್ನ
ಮಹಾಲಕ್ಷ್ಮಿ ಬಡಾವಣೆ: ಕೆ.ಗೋಪಾಲಯ್ಯ
ಮಲ್ಲೇಶ್ವರಂ: ಡಾ.ಸಿ.ಎನ್.ಅಶ್ವತ್ ನಾರಾಯಣ
ಸಿ.ವಿ.ರಾಮನ್ ನಗರ (ಎಸ್‌ಸಿ): ಎಸ್.ರಘು
ರಾಜಾಜಿ ನಗರ: ಎಸ್.ಸುರೇಶ್ ಕುಮಾರ್
ಬಸವನಗುಡಿ: ಎಲ್.ಎ.ರವಿ ಸುಬ್ರಹ್ಮಣ್ಯ
ಪದ್ಮನಾಭನಗರ: ಆರ್.ಅಶೋಕ
ಇದನ್ನೂ ಓದಿ: ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: 16 ಹಾಲಿ ಶಾಸಕರ ಹೆಸರು ಪಟ್ಟಿಯಲ್ಲಿಲ್ಲ
ಮಹದೇವಪುರ (ಎಸ್‌ಸಿ): ಅರವಿಂದ ಲಿಂಬಾವಳಿ
ಬೊಮ್ಮನಹಳ್ಳಿ: ಎಂ ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ
ಕೆ.ಆರ್.ಪೇಟೆ: ನಾರಾಯಣ ಗೌಡ
ಹಾಸನ: ಪ್ರೀತಮ್ ಜೆ.ಗೌಡ
ಬೆಳ್ತಂಗಡಿ : ಹರೀಶ್ ಪೂಂಜ
ಮಂಗಳೂರು ನಗರ ಉತ್ತರ: ಭರತ್ ಶೆಟ್ಟಿ
ಮಂಗಳೂರು ನಗರ ದಕ್ಷಿಣ: ಡಿ.ವೇದವ್ಯಾಸ್ ಕಾಮತ್
ಬಂಟ್ವಾಳ: ರಾಜೇಶ್ ನಾಯ್ಕ್
ಮಡಿಕೇರಿ: ಅಪ್ಪಚ್ಚು ರಂಜನ್
ವಿರಾಜಪೇಟೆ: ಕೆ.ಜಿ.ಬೋಪಯ್ಯ
ನಂಜನಗೂಡು (ಎಸ್‌ಸಿ): ಹರ್ಷವರ್ಧನ್ ಬಿ.
ಕೃಷ್ಣರಾಜ: ಎಸ್.ಎ.ರಾಮದಾಸ್.

ಇದನ್ನೂ ಓದಿ : ಬಿಜೆಪಿಯಲ್ಲಿ ಹಾಲಿ 20 ಶಾಸಕರಿಗೆ ಕೋಕ್ : ಹೊರಬಿತ್ತು ಎಕ್ಸಕ್ಲೂಸಿವ್ ಲಿಸ್ಟ್

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದ್ದು, ಮೇ 13 ರಂದು ವಿಧಾನಸಭೆಯ ಮತ ಎಣಿಕೆ ನಡೆಯಲಿದೆ. ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಮತ್ತು ಜನತಾದಳ-ಸೆಕ್ಯುಲರ್ ಕ್ರಮವಾಗಿ 166 ಮತ್ತು 93 ಅಭ್ಯರ್ಥಿಗಳನ್ನು ಇಲ್ಲಿಯವರೆಗೆ ಘೋಷಿಸಿವೆ. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳನ್ನು ಮತ್ತು ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳನ್ನು ಘೋಷಿಸಿದೆ.

BJP candidates lists: The first list of BJP candidates is likely to be released today: Who will get the ticket?

Comments are closed.