ವಿಧಾನಸಭೆ ಚುನಾವಣೆ : ದ.ಕ ಜಿಲ್ಲೆಯಲ್ಲಿ ಪಥಸಂಚಲನದ ಮೂಲಕ ಜನಜಾಗೃತಿ

ದಕ್ಷಿಣ ಕನ್ನಡ : (Public awareness about voting) ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಡೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ. ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪಥಸಂಚಲನಗಳ ಮೂಲಕವಾಗಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು, ಹಾಗೂ ಇನ್ನೂ ಕೆಲವು ರಕ್ಷಣಾ ಅಧಿಕಾರಿಗಳು ನಡೆಸುತ್ತಿದ್ದಾರೆ.

ಮೇ ೧೦ ರಂದು ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಯಲು ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದಲ್ಲಿ ಕೆ ಎಸ್‌ ಆರ್‌ ಪಿ ತುಕಡಿ ಪಡೆ ಪಥಸಂಚಲನ ನಡೆಸಿ ಮತದಾರರೇ ದೈರ್ಯದಿಂದ ಮುಕ್ತವಾಗಿ ಮತದಾನ ಮಾಡಿ ನಾವಿದ್ದೇವೆ ಎಂದು ಮತದಾರರಲ್ಲಿ ಧೈರ್ಯ ತುಂಬುವ ಜಾಗೃತಿ ಜಾಥಾದ ಪಥಸಂಚಲನ ನಡೆಸಿದರು. ‌

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಘಟಕದ ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಾದ ಕಡಬ ಪೇಟೆ, ಕಾಳಾರ, ಕೊಡಿಮ್ಬಾಳ, ಕಲ್ಲುಗುಡ್ಡೆ ಕಡೆಗಳಲ್ಲಿ ಪಥಸಂಚನಲ ನಡೆಸಲಾಗಿದ್ದು, ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ವೇಣೂರು ಮೇಲಿನ ಪೇಟೆ, ಕೆಳಗಿನ ಪೇಟೆ ಕರಿಮನೇಳು, ಮೊಡುಕೊಡಿ ಹಾಗೂ ನಾರಾವಿ ಕಡೆಗಳಲ್ಲಿ, ಇನ್ನೂ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿನ ಮುಕ್ವೆಯಿಂದ ಪುರುಷ ಕಟ್ಟೆಯವರೆಗೆ ಪಥಸಂಚಲನ ನಡೆಸಲಾಯಿತು.

ಇನ್ನೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಾದ ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ, ಹಿರೇಬಂಡಾಡಿ, ಸುಬ್ರಹ್ಮಣ್ಯ ಕ್ರಾಸ್, ಕರಾಯ, ಕಲ್ಲೇರಿ, ಕುಪ್ಪೆಟ್ಟಿ, ಹಾಗೂ ಪುಂಜಾಲಕಟ್ಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಾದ ಕಾವಲಕಟ್ಟೆ, ಧೂಮಳಿಕೆ, ಎನ್‌ ಸಿ ರೋಡ್‌ ಕಡೆಗಳಲ್ಲಿ ಸಿಆರ್‌ಪಿಎಫ್‌ ಕಂಪನಿಗಳು, ಕೆ ಎಸ್‌ ಆರ್‌ ಪಿ ತುಕಡಿ ಮತ್ತು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಪಥಸಂಚಲನ ನಡೆಸಿ ಸಾರ್ವಜನಿಕ ಆತ್ಮವಿಶ್ವಾಸ ಮೂಡಿಸಲಾಯಿತು.

ಇದನ್ನೂ ಓದಿ : BJP candidates lists : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ: ಯಾರಿಗೆಲ್ಲಾ ಟಿಕೆಟ್ ?

ಪಥಸಂಚಲನ ನಡೆಸಿ ಯಾವುದೇ ಮತದಾರರು ಪ್ರಜಾಪ್ರಭುತ್ವದ ಸಂವಿಧಾನದ ಮತದಾನದ ಹಕ್ಕನ್ನು ಯಾವುದೇ ಮುಜುಗರ, ಅಂಜಿಕೆ, ಹಾಗೂ ಹೆದರಿಕೆಯಿಂದ ಮತದಾನ ಮಾಡದೇ ಇರಬೇಡಿ ಮುಕ್ತ ಮತದಾನವನ್ನು ನೀವು ತಪ್ಪದೆ ಚಲಾಯಿಸಿ ನಿಮ್ಮ ಜೊತೆ ನಾವಿರುತ್ತೇವೆ ಶಾಂತಿಯುತ ಮತದಾನ ನಮ್ಮೆಲ್ಲರದಾಗಿರಲಿ ಎಂದು ಮತದಾರರಲ್ಲಿ ಧೈರ್ಯ ತುಂಬುವ ಪಥಸಂಚಲನದ ಜಾಗೃತಿ ಜಾಥಾ ನಡೆಸಲಾಯಿತು.

Public awareness about voting: Assembly election: Public awareness through road movement in D.K. district

Comments are closed.