ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು : ಸಿಎಂ ಬಸವರಾಜ್‌ ಬೊಮ್ಮಾಯಿ ರಾಜೀನಾಮೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (CM Basavaraj Bommai resigns) ಅವರು ಸಿಎಂ ಹುದ್ದೆಗೆ ನೀಡಲಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸರಕಾರವನ್ನು ವಿಸರ್ಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಬಸವರಾಜ್‌ ಬೊಮ್ಮಾಯಿ ಅವರು ತವರು ಕ್ಷೇತ್ರ ಶಿಗ್ಗಾವಿಯಲ್ಲಿದ್ದು, ಇಂದು ಸಂಜೆಯ ವೇಳೆಗೆ ಬೆಂಗಳೂರಿಗೆ ವಾಪಾಸಾಗುವ ಸಾಧ್ಯತೆಯಿದೆ. ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಬಸವರಾಜ್‌ ಬೊಮ್ಮಾಯಿ ಅವರ ಮುಖ್ಯಮಂತ್ರಿಯಾಗಿ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋಲಿನ ಕುರಿತು ಸಂಪೂರ್ಣವಾಗಿ ಆತ್ಮಾವಲೋಕನವನ್ನು ಮಾಡುತ್ತೇವೆ. ಎಲ್ಲೆಲ್ಲೆ ಯಾವ ಕಾರಣಕ್ಕೆ ಸೋಲನ್ನು ಕಂಡಿದ್ದೇವೆ ಎನ್ನುವುದನ್ನು ಅರಿತು ತಪ್ಪನ್ನು ತಿದ್ದಿಕೊಳ್ಳುತ್ತೇವೆ. ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತೇವೆ. ಅಲ್ಲದೇ ಚುನಾವಣೆಗೆ ಸಂಘಟನಾತ್ಮಕ ಹಾಗೂ ಆಡಳಿತಾತ್ಮಕವಾಗಿ ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಸೋನಿಯಾ ಗಾಂಧಿ ಜೊತೆ ಜೈಲು ಸಭೆ ನೆನಪಿಸಿಕೊಂಡು ಡಿಕೆ ಶಿವಕುಮಾರ್ ಭಾವುಕ

ಇದನ್ನೂ ಓದಿ : ಕುಂದಾಪುರದಲ್ಲಿ ಕಿರಣ್‌ ಕೊಡ್ಗಿ ಭರ್ಜರಿ ಗೆಲುವು

ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ರೆ ಮುಖ್ಯಮಂತ್ರಿಯಾದವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಕೂಡ ಇಂದೇ ರಾಜೀನಾಮೆ ನೀಡುವುದು ಬಹುತೇಕ ಖಚಿತ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ರಾಜೀನಾಮೆ ಸಲ್ಲಿಸಿದ ನಂತರದಲ್ಲಿ ಕಾಂಗ್ರೆಸ್‌ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರದ ರಚನೆಯ ಕುರಿತು ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಲಿದ್ದಾರೆ.

ಇದನ್ನೂ ಓದಿ : ಡಿಕೆ ಶಿವಕುಮಾರ್‌, ಸ್ವರೂಪ್‌ ಗೆ ಗೆಲುವು : ಮುನ್ನಡೆ ಸಾಧಿಸಿದ ಎಚ್‌ಡಿ ಕುಮಾರಸ್ವಾಮಿ

BJP’s crushing defeat in Karnataka elections: CM Basavaraj Bommai resigns

Comments are closed.