Karnataka Election Result : ಬಿಜೆಪಿಯಲ್ಲಿ ಸೋಲು ಕಂಡ ಪ್ರಭಾವಿ ನಾಯಕರು

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Result) ಈಗಾಗಲೇ ಹೊರಬಿದ್ದಿದ್ದು, ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೇರಿದೆ. ಬಿಜೆಪಿ ಹೀನಾಯ ಸೋಲು ಕಂಡಿದ್ದು, ಮಾತ್ರವಲ್ಲ ಬಿಜೆಪಿಯ ಪ್ರಭಾವಿ ನಾಯಕರೇ ಸೋಲನ್ನು ಕಂಡಿದ್ದಾರೆ. ಹಾಗಾದ್ರೆ ಈ ಬಾರಿಯ ಚುನಾವಣೆಯಲ್ಲಿ ಯಾವ ನಾಯಕರು ಸೋಲನ್ನು ಕಂಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಕರ್ನಾಟಕದಲ್ಲಿ ಮೋಡಿ ಮಾಡುವ ಫ್ಲ್ಯಾನ್‌ ರೂಪಿಸಿದ್ದರು. ಆದರೆ ಬಿಜೆಪಿಯ ಫ್ಲ್ಯಾನ್‌ ಕೈಕೊಟ್ಟಿದೆ. ಕಾಂಗ್ರೆಸ್‌ ಪ್ರನಾಳಿಕೆಯಲ್ಲಿನ ಭಜರಂಗದಳ ಅಸ್ತ್ರ ಕೂಡ ಯಾವುದೇ ರೀತಿಯಲ್ಲಿಯೂ ಫಲಕೊಟ್ಟಿಲ್ಲ. ಅದ್ರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ, ಪ್ರಭಾವಿ ಬಿಜೆಪಿ ಮುಖಂಡರು ಸೋಲನ್ನು ಕಂಡಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು : ಸಿಎಂ ಬಸವರಾಜ್‌ ಬೊಮ್ಮಾಯಿ ರಾಜೀನಾಮೆ

ಇದನ್ನೂ ಓದಿ : ಸೋನಿಯಾ ಗಾಂಧಿ ಜೊತೆ ಜೈಲು ಸಭೆ ನೆನಪಿಸಿಕೊಂಡು ಡಿಕೆ ಶಿವಕುಮಾರ್ ಭಾವುಕ

ಆರೋಗ್ಯ ಸಚಿವ ಡಾ.ಸುಧಾಕರ್‌ ಸೋಲನ್ನು ಕಂಡಿದ್ದರೆ, ಗೋವಿಂದ ಕಾರಜೋಳ, ಸಿ.ಟಿ.ರವಿ, ಬಿ. ಶ್ರೀ ರಾಮುಲು, ವಿ. ಸೋಮಣ್ಣ (ಎರಡೂ ಕ್ಷೇತ್ರ ), ಜೆ. ಸಿ ಮಾಧುಸ್ವಾಮಿ, ಶಂಕರ ಪಾಟೀಲ ಮುನೇನ ಕೊಪ್ಪ, ಹಾಲಪ್ಪ ಆಚಾರ್‌, ಆರ್‌. ಆಶೋಕ (ಕನಕಪುರ ಸೋಲು), ನಾರಾಯಣ ಗೌಡ, ಬಿ.ಸಿ.ನಾಗೇಶ್‌, ಮುರುಗೇಶ ನಿರಾಣಿ, ಎಂ.ಟಿ.ಬಿ.ನಾಗರಾಜ್‌ ಹಾಗೂ ಮಾಜಿ ಸ್ಪೀಕರ್‌ ವಿಶ್ವೇಶ್ವರ ಕಾಗೇರಿ ಸೋಲನ್ನು ಕಂಡಿದ್ದಾರೆ.

ಇದನ್ನೂ ಓದಿ : ಡಿಕೆ ಶಿವಕುಮಾರ್‌, ಸ್ವರೂಪ್‌ ಗೆ ಗೆಲುವು : ಮುನ್ನಡೆ ಸಾಧಿಸಿದ ಎಚ್‌ಡಿ ಕುಮಾರಸ್ವಾಮಿ

224 ಸದಸ್ಯ ಬಲದ ವಿಧಾನಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮೇ 10 ರಂದು ನಡೆದ ಮತದಾನದಲ್ಲಿ ಕರ್ನಾಟಕದಲ್ಲಿ ಶೇ.73.19 ರಷ್ಟು ಮತದಾನ ನಡೆದಿತ್ತು. ರಾಜ್ಯದ 224 ವಿಧಾನಸಭಾ ಚುನಾವಣೆಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2615ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 2430 ಪುರುಷರು, 184 ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರು. ಬಳ್ಳಾರಿ ನಗರ ಕ್ಷೇತ್ರದಲ್ಲಿ 24 , ಹೊಸಕೊಟೆ ಕ್ಷೇತ್ರದಲ್ಲಿ 23 ಚಿತ್ರದುರ್ಗದಲ್ಲಿ 21, ಯಲಹಂಕದಲ್ಲಿ 20 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

Karnataka Election Result : Influential leaders who lost in BJP

Comments are closed.