ಬೆಂಗಳೂರು : ವಯಸ್ಸು, ರಾಜಕಾರಣ ಸೇರಿದಂತೆ ನಾನಾ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ( BS Yeddyurappa) ಅವರಿಂದ ಸಿಎಂ ಪಟ್ಟ ಕಿತ್ತುಕೊಂಡ ಬಿಜೆಪಿಗೆ ಈಗ ಮತ್ತೆ ರಾಜಾಹುಲಿ ಎಂದೇ ಖ್ಯಾತಿ ಗಳಿಸಿಕೊಂಡ ಬಿ.ಎಸ್.ಯಡಿಯೂರಪ್ಪ ಅನಿವಾರ್ಯವಾಗಿದ್ದಾರೆ.ಕೇವಲ ಬಿಎಸ್ವೈ ಮಾತ್ರವಲ್ಲ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಕೂಡ ಬಿಜೆಪಿ ಚುನಾವಣೆಯ ಹೊಣೆ ಹೊತ್ತಿದ್ದು, ಅಪ್ಪ ಮಗನನ್ನು ಬಳಸಿಕೊಂಡ ಬಿಜೆಪಿ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಿದೆ.
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಿಜೆಪಿ ಅವರನ್ನು ಕಡೆಗಣಿಸಿತ್ತು.ಬಿಜೆಪಿ ಕಾರ್ಯಕ್ರಮಗಳಲ್ಲಿ, ಸಭೆಗಳಲ್ಲಿ ಬಿಎಸ್ವೈ ಕಾಣಿಸುತ್ತಿರಲಿಲ್ಲ.ಆದರೆ 2023 ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಅನಿವಾರ್ಯವಾಗಿದ್ದು, ಚುನಾವಣೆಯ ಇಡೀ ಪ್ರಚಾರಕ್ಕೆ ಯಡಿಯೂರಪ್ಪ ನನ್ನು ತೊಡಗಿಸಿಕೊಳ್ಳುವ ಸಂಬಂಧ ಮಹತ್ವದ ತೀರ್ಮಾನವಾಗಿದೆ.
ಫೆಬ್ರವರಿ ಕೊನೆಯ ವಾರದಿಂದ ಶುರುವಾಗಲಿರುವ ನಾಲ್ಕು ಭಾಗದ ರಥಯಾತ್ರೆಗಳಲ್ಲೂ ಬಿಎಸ್ವೈ ಮೂಲಕ ಪ್ರಚಾರಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಶಾಸಕರ ಕೋರಿಕೆಯಂತೆ ಈಗ ಬಿಎಸ್ವೈ ರನ್ನು ರಥಯಾತ್ರೆಗಳು ಅಲ್ಲದೇ ರಾಜ್ಯದ ಎಲ್ಲ ಕ್ಷೇತ್ರ ಗಳಲ್ಲೂ ಪ್ರಚಾರ ಮಾಡಿಸೋದ್ರ ಮೂಲಕ, ಬಹುಮತ ದೊಂದಿಗೆ ಅಧಿಕಾರ ಹಿಡಿಯುವ ಕಸರತ್ತು ಆರಂಭ ವಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಚುನಾವಣೆಗೆ ವಿವಿಧ ಸಮುದಾಯಗಳನ್ನು ಸೆಳೆಯುವ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಲ್ಲೂ ಮೋರ್ಚಾ ಗಳ ಸಮಾವೇಶ ಮಾಡಲು ಬಿಜೆಪಿ ಪ್ಲಾನ್ ರೂಪಿಸಿದೆ.ಜೊತೆಗೆ ಈ ಸಮಾವೇಶಗಳ ಜವಾಬ್ದಾರಿಯನ್ನು ಬಿ ವೈ ವಿಜಯೇಂದ್ರಗೆ ಕೊಡಲಾಗಿದೆ.
ಇಷ್ಟು ದಿನಗಳ ಕಾಲ ವಿಜಯೇಂದ್ರಗೆ ಪಕ್ಷದಿಂದ ಅಧಿಕೃತವಾಗಿ ಯಾವುದೇ ಚಟುವಟಿಕೆಗಳ ಬಗ್ಗೆ ಜವಾಬ್ದಾರಿ ನೀಡರಲಿಲ್ಲ. ಆದ್ದರಿಂದ ಅವ್ರು ಕೇವಲ ಶಿಕಾರಿಪುರದ ಕಡೆ ಮಾತ್ರ ಗಮನ ಕೊಟ್ಟಿದ್ರು. ಈಗ ಅಧಿಕೃತವಾಗಿ ಪಕ್ಷದಿಂದ ಮೋರ್ಚಾಗಳ ಸಮಾವೇಶದ ಜವಬ್ದಾರಿ ಕೊಡಲಾಗಿದೆ.ಮೂಲಗಳ ಮಾಹಿತಿ ಪ್ರಕಾರ ಕಾಂಗ್ರೆಸ್ , ಬಿ.ಎಸ್.ಯಡಿಯೂರಪ್ಪ ಕಡೆ ಗಣನೆಯನ್ನು ಸದಾ ಕಾಲ ಉಲ್ಲೇಖಿಸುತ್ತ ಬಂದಿತ್ತು. ಈ ವಿಚಾರವನ್ನು ಬಿಎಸ್ವೈ ಗಮನಕ್ಕೆ ಮತ್ತೆ ಮತ್ತೆ ತಂದು ಬಿಎಸ್ವೈ ರನ್ನು ಕೆಣಕಿ ಪಕ್ಷದ ವಿರುದ್ದ ಮುನಿಸಿಕೊಳ್ಳುವಂತೆ ಮಾಡೋದು ಕಾಂಗ್ರೆಸ್ ಉದ್ದೇಶವಾಗಿತ್ತು. ಇದನ್ನು ಅರಿತ ಬಿಜೆಪಿ ಬಿಎಸ್ವೈ ಮನವೊಲಿಸಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡೋ ಪ್ರಯತ್ನಕ್ಕೆ ಈಗ ಬಿಜೆಪಿ ಸನ್ನದ್ಧವಾಗಿದೆ.
ಇದನ್ನೂ ಓದಿ : H D Kumaraswamy :ಕುಮಾರಸ್ವಾಮಿ ಪ್ರಲ್ಹಾದ್ ಜೋಶಿಯನ್ನುದ್ದೇಶಿಸಿ ಹೇಳಿದ ದೇಶಸ್ಥ ಬ್ರಾಹ್ಮಣರು ಅಂದ್ರೆ ಯಾರು?
BS Yeddyurappa is indispensable for BJP again The responsibility of campaign