Congress Candidate List : ಕಾಂಗ್ರೆಸ್‌ ಪಕ್ಷದ 42 ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿ ರಿಲೀಸ್‌

ಬೆಂಗಳೂರು: (Congress Candidate List ) ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯ ಕುರಿತು ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಿದ್ದ ಕಾಂಗ್ರೆಸ್‌ ಗೆ ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿ ಪರಿಣಮಿಸಿತ್ತು. ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು.

ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆ ಪಟ್ಟಿಯನ್ನು ಇಂದು ಎಐಸಿಸಿಯಿಂದ ಪ್ರಕಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹುರಿಯಾಳುಗಳನ್ನು 2ನೇ ಪಟ್ಟಿಯಲ್ಲಿ ಘೋಷಿಸಿದೆ.

42 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಹೀಗಿದೆ :

  • ನಿಪ್ಪಣಿ – ಕಾಕಾಸಾಹೇಬ್‌ ಪಾಟೀಲ್‌
  • ಗೋಕಾಕ್‌- ಮಹಾಂತೇಶ್‌ ಕದಡಿ
  • ಕಿತ್ತೂರು- ಬಾಬಾಸಾಹೇಬ್‌ ಡಿ. ಪಾಟೀಲ್‌
  • ಸವದತ್ತಿ ಯಲ್ಲಮ್ಮ – ವಿಶ್ವಾಸ್‌ ವಸಂತ ವೈಧ್ಯ
  • ಮುಧೋಳ-ರಾಮಪ್ಪ ಬಾಲಪ್ಪ ತಿಮ್ಮಪ್ಪೂರು
  • ಬಿಳ್ಗಿ – ಜೆ.ಟಿ. ಪಾಟೀಲ್‌
  • ಬಾದಾಮಿ – ಭೀಮಸೇನ ಬಿ ಚಿಮ್ಮನ್ನಕಟ್ಟಿ
  • ಬಾಗಾಲಕೋಟೆ – ಹುಲ್ಲಪ್ಪ-ವೈ.ಮೇಟಿ
  • ಬಿಜಾಪುರ ನಗರ – ಅಬ್ದುಲ್‌ ಹಮೀದ್‌ ಕಾಜಾಸಾಹೇಬ್‌ ಮುಶ್ರೀಫ್‌
  • ನಾಗ್ತಾನ್-‌ ವಿಠ್ಠಲ್‌ ಕಟಕಾಧೋಂಡ್‌
  • ಅಫ್ಜಾಲ್ಪುರ- ಎಮ್‌.ವೈ ಪಾಟೀಲ್‌
  • ಯಾದಗಿರಿ- ಚನ್ನರೆಡ್ಡಿ ಪಾಟೀಲ್‌ ತುನ್ನೂರು
  • ಗುರುಮಿಟ್ಕಲ್‌ – ಬಾಬುರಾವ್‌ ಚಿಂಚನಚೂರು
  • ಗುಲ್ಬರ್ಗಾ ದಕ್ಷಿಣ – ಅಲ್ಲಮಪ್ರಭು ಪಾಟೀಲ್‌
  • ಬಸವಕಲ್ಯಾಣ – ವಿಜಯ್‌ ಧರಮ್‌ ಸಿಂಗ್‌
  • ಗಂಗಾವತಿ – ಇಕ್ಬಾಲ್‌ ಅನ್ಸಾರಿ
  • ನರಗುಂದ- ಬಿ ಆರ್‌ ಯವಗಲ್‌
  • ಧಾರವಾಡ – ವಿನಯ್‌ ಕುಲಕರ್ಣಿ
  • ಕಲ್ಘಟಗಿ- ಸಂತೋಷ್‌ ಎಸ್‌
  • ಸಿರಸಿ-ಭೀಮಣ್ಣ ನಾಯ್ಕ್‌
  • ಯಲ್ಲಾಪುರ – ವಿ.ಎಸ್‌ ಪಾಟೀಲ್‌
  • ಕೂಡ್ಲಿಗಿ- ಡಾ. ಶ್ರೀನಿವಾಸ್‌ ಎನ್‌ ಟಿ
  • ಮೊಳಕಾಲ್ಮೂರು – ಎನ್‌ವೈ ಗೋಪಾಲಕೃಷ್ಣ
  • ಚಿತ್ರದುರ್ಗ – ಕೆಸಿ ವೀರೇಂದ್ರ
  • ಹೊಲಕೆರೆ – ಆಂಜನೇಯ ಎಚ್‌
  • ಚೆನ್ನಗಿರಿ – ಬಸವರಾಜು ವಿ ಶಿವಮೊಗ್ಗ
  • ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್‌
  • ಉಡುಪಿ-ಪ್ರಸಾದ್‌ ಕಾಂಚನ್‌
  • ಕಾದರ್-‌ ಆನಂದ್‌ ಕೆಎಸ್‌
  • ತುಮಕೂರು ನಗರ- ಇಕ್ಬಾಲ್‌ ಅಹ್ಮದ್‌
  • ಗುಬ್ಬಿ- ಎಸ್‌ ಆರ್‌ ಶ್ರೀನಿವಾಸ್‌
  • ಯಲಹಂಕ-ಕೇಶವ ರಾಜಣ್ಣ ಬಿ
  • ಯಶವಂತಪುರ- ಎಸ್‌ ಬಾಲರಾಜ ಗೌಡ
  • ಮಹಾಲಕ್ಷ್ಮಿ ಲೇಔಟ್-‌ ಕೇಶವಮೂರ್ತಿ
  • ಪದ್ಮನಾಭ ನಗರ- ವಿ ರಘುನಾಥ್‌ ನಾಯ್ಡು
  • ಮೇಲುಕೋಟೆ – ದರ್ಶನ್‌ ಪುಟ್ಟಣ್ಣಯ್ಯ
  • ಮಂಡ್ಯ- ಪ ರವಿಕುಮಾರ್‌
  • ಕೃಷ್ಣರಾಜಪೇಟೆ – ಬಿಎಲ್‌ ದೇವರಾಜ
  • ಬೇಲೂರು – ಬಿ ಶಿವರಾಮ್‌
  • ಮಡಿಕೇರಿ- ಡಾ. ಮಂತರ್‌ ಗೌಡ
  • ಚಾಮುಂಡೇಶ್ವರಿ- ಸಿದ್ದೇಗೌಡ
  • ಕೊಳ್ಳೆಗಾಲ -ಎ ಆರ್‌ ಕೃಷ್ಣಮೂರ್ತಿ

ಇದನ್ನೂ ಓದಿ : Bandipur Narendra Modi Visit : ಏ. 9ಕ್ಕೆ ಬಂಡೀಪುರಕ್ಕೆ ಮೋದಿ ಭೇಟಿ: ಇಂದಿನಿಂದ 4 ದಿನ ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ, ರೆಸಾರ್ಟ್ ವಾಸ್ತವ್ಯ ಬಂದ್

Congress Candidate List: Release of the second phase list of 42 candidates of the Congress party

Comments are closed.