World Health Day : ವಿಶ್ವ ಆರೋಗ್ಯ ದಿನ 2023 : ಇತಿಹಾಸ, ಮಹತ್ವ ಇಲ್ಲಿದೆ ಸಂಪೂರ್ಣ ವಿವರ

ನಮ್ಮಗೆಲ್ಲರಿಗೂ ತಿಳದಿರುವಂತೆ ಆರೋಗ್ಯವೇ ಭಾಗ್ಯ ಎನ್ನುವುದು ಸಾಮಾನ್ಯ ವಿಚಾರ. ಆದರೆ ನಮ್ಮ ಬಿಡುವಿಲ್ಲದ ಜೀವನಶೈಲಿಯಿಂದಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನಕೊಡದಂತೆ ಆಗಿದೆ. ಆರೋಗ್ಯವೇ ದೊಡ್ಡ ಸಂಪತ್ತು ಎನ್ನುವುದನ್ನು ಜನರಿಗೆ ನೆನಪಿಸಲು ವಿಶ್ವ ಆರೋಗ್ಯ ಸಂಸ್ಥೆಯು (World Health Day 2023) ಪ್ರತಿ ವರ್ಷ ಏಪ್ರಿಲ್ 7 ರಂದು ಜಗತ್ತಿನಾದ್ಯಂತ ‘ ವಿಶ್ವ ಆರೋಗ್ಯ ದಿನ’ವನ್ನು ಆಚರಿಸುತ್ತದೆ. ಒಬ್ಬ ವ್ಯಕ್ತಿಯ ಸಂತೋಷದ ಜೀವನಕ್ಕಾಗಿ ಉತ್ತಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ವಿಶೇಚವಾಗಿ ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ದಿನ ಇತಿಹಾಸ :
ವಿಶ್ವ ಆರೋಗ್ಯ ಸಂಸ್ಥೆಯನ್ನು 1948 ರಲ್ಲಿ ಸ್ಥಾಪಿಸಲಾಯಿತು. ಜಗತ್ತನ್ನು ಒಂದು ಸಾಮಾನ್ಯ ಗುರಿಯತ್ತ ಒಟ್ಟುಗೂಡಿಸಲು, ಆರೋಗ್ಯಕರ ಜೀವನವನ್ನು ನಡೆಸುವುದು ಇದ್ದರ ಮುಖ್ಯ ಉದ್ದೇಶವಾಗಿದೆ. ವಿವಿಧ ದೇಶಗಳು ಒಗ್ಗೂಡಿ 1948 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅನ್ನು ಸ್ಥಾಪಿಸಿದೆ. ಇದು ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಜೀವನದ ಮಹತ್ವದ ಅಂಶವಾಗಿ ಉತ್ತೇಜಿಸುತ್ತದೆ. ಜಗತ್ತನ್ನು ಸುರಕ್ಷಿತವಾಗಿರಿಸಲು, ದುರ್ಬಲರಿಗೆ ಸಹಾಯ ಮಾಡಲು, ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನರಿಗೆ ಅರ್ಥಮಾಡಿಕೊಳ್ಳಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮೊದಲ ವಿಶ್ವ ಆರೋಗ್ಯ ದಿನವನ್ನು 1950 ರಲ್ಲಿ ಏಪ್ರಿಲ್ 7 ರಂದು ಆಚರಿಸಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ (WHO)ನ ಆರಂಭವನ್ನು ಗುರುತಿಸಲು ನಡೆಸಲಾಗಿದೆ. ಅಂದಿನಿಂದ, ಜಗತ್ತುಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಬಂದಿದೆ.

ವಿಶ್ವ ಆರೋಗ್ಯ ದಿನ ಮಹತ್ವ :
ವಿಶ್ವ ಆರೋಗ್ಯ ದಿನವನ್ನು ಜನರಿಗೆ ಶಿಕ್ಷಣ ನೀಡಲು, ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ಹೊಸ ಔಷಧಗಳು, ಸಂಶೋಧನೆ ಮತ್ತು ಆರೋಗ್ಯ ಸೌಲಭ್ಯಗಳು ಎಲ್ಲರಿಗೂ, ಎಲ್ಲೆಡೆ ಲಭ್ಯವಾಗುವಂತೆ ನೋಡಿಕೊಳ್ಳಲು ಆಚರಿಸಲಾಗುತ್ತದೆ. ಈ ದಿನವು ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಮತ್ತು ಗುಣಮಟ್ಟದ ಜೀವನವನ್ನು ನಡೆಸಲು ಸುಧಾರಣೆಗಳನ್ನು ಮಾಡಲು ನೆನಪಿಸುತ್ತದೆ. ವಿಶ್ವ ಆರೋಗ್ಯ ದಿನವು ಸಂಸ್ಥೆಯು ಪ್ರತಿ ವರ್ಷ ಜಾಗತಿಕ ಆರೋಗ್ಯವನ್ನು ಚರ್ಚಿಸುವ ಸಂದರ್ಭವನ್ನು ಸೂಚಿಸುತ್ತದೆ. ಈ ದಿನ ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಅವರ ಯೋಗಕ್ಷೇಮದ ಕಡೆಗೆ ಎಲ್ಲರ ಗಮನವನ್ನು ಸೆಳೆಯಲು ಒಂದು ಅವಕಾಶವಾಗಿದೆ.

ವಿಶ್ವ ಆರೋಗ್ಯ ದಿನ 2023: ಥೀಮ್

ವಿಶ್ವ ಆರೋಗ್ಯ ಸಂಸ್ಥೆ (WHO) ನ 75 ನೇ ವಾರ್ಷಿಕೋತ್ಸವವನ್ನು ಗುರುತಿಸಿ, ವಿಶ್ವ ಆರೋಗ್ಯ ದಿನದ 2023 ರ ಥೀಮ್ “ಎಲ್ಲರಿಗೂ ಆರೋಗ್ಯ” ಎಂದಿದೆ. ಜಾಗತಿಕ ಆರೋಗ್ಯವನ್ನು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಅನೇಕ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಇದನ್ನೂ ಓದಿ : Hanuman Jayanti 2023 : ಹನುಮ ಜಯಂತಿಯ ಬಗ್ಗೆ ಪುರಾಣ ಕಥೆಗಳು ಏನು ಹೇಳುತ್ತವೆ ?

ವಿಶ್ವ ಆರೋಗ್ಯ ದಿನ 2023: ಆಚರಣೆಗಳು
ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಸೆಮಿನಾರ್‌ಗಳು, ಅಭಿಯಾನಗಳು ಮತ್ತು ಪ್ಯಾನಲ್ ಚರ್ಚೆಗಳನ್ನು ಆಯೋಜಿಸುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶಿಕ್ಷಣ ನೀಡಲು ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತದೆ. ಉತ್ತಮ ಆರೋಗ್ಯದ ಬಗ್ಗೆ ಮಾತನಾಡಲು ವಿವಿಧ ಎನ್‌ಜಿಒಗಳು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಸೆಷನ್‌ಗಳನ್ನು ಆಯೋಜಿಸುತ್ತದೆ.

World Health Day 2023 : History, Significance Here is the complete details

Comments are closed.