Gujarat Election Result 2022: ಗುಜರಾತ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಬಿಜೆಪಿ

ಗುಜರಾತ್:‌ (Gujarat Election Result 2022) ಬಹುನಿರೀಕ್ಷಿತ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇಂದು ಪ್ರಕಟವಾಗಲಿದೆ. ಗುಜರಾತ್‌ನಲ್ಲಿ ಸತತ 7ನೇ ಬಾರಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಗೆದ್ದುಕೊಳ್ಳಲಿದೆ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಗುಜರಾತ್‌ನಲ್ಲಿ (Gujarat Election Result 2022) ಡಿ.1 ಹಾಗೂ 5ರಂದು 2 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಒಟ್ಟು ಶೇ. 66.31ರಷ್ಟು ಮತ ಚಲಾಯಿಸಲಾಗಿತ್ತು. ಗುಜರಾತ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಮೊಟ್ಟ ಮೊದಲ ಬಾರಿ ಆಮ್‌ ಆದ್ಮಿ ಪಕ್ಷ ಕೂಡ ಕಣಕ್ಕಿಳಿದಿದೆ. ಆದರೆ ತ್ರಿಕೋನ ಸ್ಪರ್ಧೆ ಹೊರತಾಗಿಯೂ ಗುಜರಾತ್‌ ನಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳಿವೆ. ಇದೀಗ ಮ್ಯಾಜಿಕ್‌ ನಂಬರ್‌ ಅನ್ನು ಸಹ ದಾಟಿ ಬಿಜೆಪಿ ಮುನ್ನಡೆಯಲ್ಲಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿದೆ. ಗುಜರಾತ್​ನಲ್ಲಿ ಬಿಜೆಪಿಯು ದಾಖಲೆಯ 150 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಅದೇ ರೀತಿ ನ.12 ರಂದು ನಡೆದ ಹಿಮಾಚಲ ಪ್ರದೇಶದ ಮತ ಎಣಿಕೆ ಕಾರ್ಯವೂ ಇಂದು ಮುಂಜಾನೆ 8 ಗಂಟೆಗೆ ಆರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು ಶೇ. 76.44ರಷ್ಟು ಮತದಾನ ನಡೆದಿದೆ. 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲದಲ್ಲಿ ಹೋರಾಟ ನೆಡೆಸುತ್ತಿದ್ದು, ಎರಡು ಪಕ್ಷಗಳ ನಡುವೆ ಹಾವು ಏಣಿ ಆಟ ಮುಂದುವರಿದಿದೆ.

ಇದನ್ನೂ ಓದಿ : MODI ROAD SHOW : ದಾಖಲೆ ಬರೆದ ಪ್ರಧಾನಿ ಮೋದಿ ಮೆಗಾ ರೋಡ್ ಶೋ.. 50 ಕಿ.ಮೀ 16 ಕ್ಷೇತ್ರ ಕವರ್

ಅದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಕೇಸರಿ ಪಡೆ ಸತತ 2ನೇ ಬಾರಿಗೆ ಅಧಿಕಾರ ಪಡೆಯುವುದು ನಿಶ್ಚಿತ ಎನ್ನುವ ಅಂಕಿ-ಅಂಶಗಳು ಬಂದಿವೆ. ಗುಜರಾತ್‌ನಲ್ಲಿ ಬಹುಮತಕ್ಕೆ 92 ಕ್ಷೇತ್ರಗಳ ಗೆಲುವು ಬೇಕಿದ್ದರೆ, ಹಿಮಾಚಲ ಪ್ರದೇಶದಲ್ಲಿ 35 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ.

(Gujarat Election Result 2022) The much awaited Gujarat and Himachal Pradesh assembly election results will be declared today. Almost all post-election polls have said that the BJP will win power again in Gujarat for the 7th time in a row.

Comments are closed.