WhatsApp Avatar : ಏನಿದು ವ್ಯಾಟ್ಸ್‌ಅಪ್‌ನ ಹೊಸ ‘ಅವತಾರ್‌’ ವೈಶಿಷ್ಟ್ಯ…

ಇನ್ಸ್ಟಂಟ್‌ ಮೆಸ್ಸೇಜಿಂಗ್‌ ಆಪ್‌ ವಾಟ್ಸ್‌ಅಪ್‌ (WhatsApp) ಹೊಸ ವೈಶಿಷ್ಟ್ಯವೊಂದನ್ನು (New Feature) ಪರಿಚಯಿಸಲಿದೆ. ಹೊಸ ವೈಶಿಷ್ಟ್ಯವು (WhatsApp Avatar) ಬಳಕೆದಾರರಿಗೆ ಕಸ್ಟಮೈಸ್‌ ಮಾಡಿದ ಡಿಜಿಟಲ್‌ ಅವತಾರಗಳನ್ನು ರಚಿಸಲು ಅನುವು ಮಾಡಿಕೊಡತ್ತದೆ. ಬಟ್ಟೆಗಳು, ಕೇಶವಿನ್ಯಾಸ ಮತ್ತು ಫೇಶಿಯಲ್‌ ಫೀಚರ್‌ಗಳನ್ನು ಸಂಯೋಜಿಸಬಹುದಾಗಿದೆ. ಅವತಾರ್‌ ಗಳು ಈಗಾಗಲೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿವೆ. ಈಗ ಅವುಗಳನ್ನು ವ್ಯಾಟ್ಸ್‌ಅಪ್‌ನಲ್ಲಿಯೂ ಬಳಸಬಹುದಾಗಿದೆ.

ಬ್ಲಾಗ್‌ನ ಪೋಸ್ಟ್‌ ಪ್ರಕಾರ ವ್ಯಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯ ಅವತಾರ್‌ ಅನ್ನು ಪ್ರೊಫೈಲ್‌ ಫೋಟೋವಾಗಿಯೂ ಬಳಸಬಹುದು. ಇದು ಬಳಕೆದಾರರು ತಮ್ಮ ಅವತಾರದ ಕ್ರಿಯೆಗಳು ಮತ್ತು ಭಾವನೆಗಳ ಆಧಾರದ ಮೇಲೆ 36 ಕಸ್ಟಮ್‌ ಸ್ಟಿಕ್ಕರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಾಗಿದೆ. ಒಮ್ಮೆ ಕ್ರಿಯೇಟ್‌ ಮಾಡಿದಮೇಲೆ ಅದನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಲೈಟಿಂಗ್, ಹೇರ್ ಸ್ಟೈಲ್ ಟೆಕಶ್ಚರ್, ಶೇಡಿಂಗ್ ಮತ್ತು ಇತರೆ ಕಸ್ಟಮೈಸೇಶನ್ ಆಕ್ಷನ್‌ ಗಳನ್ನು ಇದರಲ್ಲಿ ಸೇರಿಸುವುದಾಗಿ ವ್ಯಾಟ್ಸ್‌ಅಪ್‌ ಹೇಳಿದೆ. ಹೊಸ ಅವತಾರ್‌ ವೈಶಿಷ್ಟ್ಯವು ಕ್ರಮೇಣ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ.

ವ್ಯಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯ ‘ಅವತಾರ್‌’ ಅನ್ನು ಬಳಸುವುದು ಹೇಗೆ?

  • ಮೊದಲಿಗೆ ವ್ಯಾಟ್ಸ್‌ಅಪ್‌ ಚಾಟ್‌ ಅನ್ನು ತೆರೆಯಿರಿ
  • ಅಲ್ಲಿ ಸ್ಟಿಕ್ಕರ್‌ ಆಯ್ಕೆಗೆ ಹೋಗಿ. iOS ನಲ್ಲಿ, ಸ್ಟಿಕ್ಕರ್ ಆಯ್ಕೆಯು ಚಾಟ್ ಬಾಕ್ಸ್‌ನಲ್ಲಿದ್ದರೆ, ಆಂಡ್ರಾಯ್ಡ್‌ನಲ್ಲಿ ಚಾಟ್‌ಬಾಕ್ಸ್‌ನ ಇಮೋಜಿ ಚಿಹ್ನೆಯನ್ನು ಟ್ಯಾಪ್‌ ಮಾಡಿದಾಗ ಅದರ ಕೆಳಭಾಗದಲ್ಲಿ GIF ನ ಪಕ್ಕದಲ್ಲಿದೆ.
  • ನಿಮ್ಮ ಮೊಬೈಲ್‌ನ ವಾಟ್ಸ್‌ಅಪ್‌ ಅಲ್ಲಿ ಸ್ಟಿಕ್ಕರ್‌ ಆಯ್ಕೆಗೆ ಹೋದಾಗ ಅವತಾರ್‌ ವೈಶಿಷ್ಟ್ಯ ಗೋಚಿರಿಸಿದರೆ, ಆಗ ನೀವು ಅದರ ಮೇಲೆ ಟ್ಯಾಪ್‌ ಮಾಡುವುದರ ಮೂಲಕ ಕ್ರಿಯೇಟ್‌ ಮಾಡಬಹುದಾಗಿದೆ.
  • ಹೊಸ ಪುಟದಲ್ಲಿ ‘ಗೆಟ್‌ ಸ್ಟಾರ್ಟೆಡ್‌’ ಮೇಲೆ ಟ್ಯಾಪ್‌ ಮಾಡುವುದರ ಮೂಲಕ ಅವತಾರ್‌ ರಚಿಸಲು ಪ್ರಾರಂಭಿಸಬಹುದಾಗಿದೆ.
  • ಅಲ್ಲಿ ಸ್ಕಿನ್‌ ಟೋನ್‌, ಹೇರ್‌ಸ್ಟೈಲ್‌, ಮುಖ, ಕಣ್ಣು ಇತ್ಯಾದಿಗಳನ್ನು ಕ್ರಿಯೇಟ್‌ ಮಾಡಿ ನಂತರ ಬಲ ಮೂಲೆಯಲ್ಲಿರುವ ‘ಡನ್‌ ’ ಮೇಲೆ ಟ್ಯಾಪ್‌ ಮಾಡಿ ಮತ್ತು ಅದನ್ನು ಸೇವ್‌ ಮಾಡಿ.
  • ಹೀಗೆ ವ್ಯಾಟ್ಸ್‌ಅಪ್‌ನಲ್ಲಿ ಹೊಸ ಅವತಾರದೊಂದಿಗೆ ಸ್ಟಿಕ್ಕರ್‌ ರಚಿಸಬಹುದಾಗಿದೆ.
  • ಇದು ಸ್ಟಿಕ್ಕರ್‌ ಗಳಲ್ಲಿ ಗೋಚರಿಸಿದ ನಂತರ ಅವುಗಳನ್ನು ಯಾವುದೇ ಚಾಟ್‌ನಲ್ಲಿ ನೇರವಾಗಿ ಹಂಚಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Tecno Pova 4 : ಭಾರತದಲ್ಲಿ ಬಿಡುಗಡೆಯಾದ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಟೆಕ್ನೋ ಪೊವಾ 4

ಇದನ್ನೂ ಓದಿ : Dual SIM features: ಇನ್ಮುಂದೆ ಮೊಬೈಲ್​ಗಳಲ್ಲಿ ಡ್ಯುಯಲ್​ ಸಿಮ್​ ಫೀಚರ್ಸ್​ ಬರಲ್ಲ: ಯಾಕೆ ಗೊತ್ತಾ?

WhatsApp Avatar WhatsApp introduces a new feature Avatar. How to use it

Comments are closed.