GUJARAT ELECTION:  ಗುಜರಾತ್ ವಿಧಾನಸಭೆ ಚುನಾವಣೆ ಇಂದು.. 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಅಹಮದಾದ್ ಬಾದ್ : GUJARAT ELECTION ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಬೆಳಗ್ಗೆ 8  ಗಂಟೆಗೆ ಮತದಾನ ಆರಂಭವಾಗಲಿದ್ದು ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು ಡಿಸೆಂಬರ್ 8 ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಎರಡು ವಿಧಾನಸಭೆ ಚುನಾವಣೆಗಳ ಫಲಿತಾಂಶ ಪ್ರಕಟಕವಾಗಲಿದೆ.

ಒಟ್ಟು 182 ಕ್ಷೇತ್ರಗಳಿರೋ ಗುಜರಾತ್ ವಿಧಾನಸಭೆ ಇಂದು ಮೊದಲ ಹಂತದಲ್ಲಿ ಒಟ್ಟು 89 ಸ್ಥಾನಗಳಿಗೆ ವೋಟಿಂಗ್ ನಡೆಯಲಿದೆ. ದಕ್ಷಿಣ ಗುಜರಾತ್ ಮತ್ತು ಕಚ್-ಸೌರಾಷ್ಟ್ರ ಪ್ರದೇಶದ 19 ಜಿಲ್ಲೆಗಳ 89 ಸ್ಥಾನಗಳಿಗೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರತಿ ಬಾರಿಯೂ ಸಾಂಪ್ರದಾಯಿಕವಾಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ಮಾತ್ರ ನೇರಾನೇರ ಹಣಾಹಣಿ ಇರ್ತಿತ್ತು. ಆದ್ರೆ ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (ಎಎಪಿ) ಕೂಡಾ ಕಣದಲ್ಲಿದ್ದ ಭಾರಿ ಸದ್ದು ಮಾಡಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಪ್ ಪಕ್ಷ ಒಟ್ಟು 182 ಕ್ಷೇತ್ರಗಳ ಪೈಕಿ ಆಪ್ ರಲ್ಲಿ 181 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮೊದಲ ಹಂತದಲ್ಲಿ ಗಮನಾರ್ಹ ಅಭ್ಯರ್ಥಿಗಳ ಪೈಕಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಮುಖ ಇಸುದನ್ ಗಧ್ವಿ ಅವರು ದೇವಭೂಮಿ ದ್ವಾರಕಾ ಜಿಲ್ಲೆಯ ಖಂಭಾಲಿಯಾದಿಂದ ಸ್ಪರ್ಧಿಸುತ್ತಿದ್ದಾರೆ. ಗುಜರಾತ್‌ನ ಮಾಜಿ ಸಚಿವ ಪರಶೋತ್ತಮ್ ಸೋಲಂಕಿ, ಆರು ಬಾರಿ ಶಾಸಕರಾಗಿರುವ ಕುನ್ವರ್ಜಿ ಬವಲಿಯಾ, ಮೊರ್ಬಿ ‘ಹೀರೋ’ ಕಾಂತಿಲಾಲ್ ಅಮೃತಿಯಾ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಮತ್ತು ಗುಜರಾತ್ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಕೂಡ ಕಣದಲ್ಲಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು: ಮೊದಲ ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 89 ಅಭ್ಯರ್ಥಿಗಳು ಮತ್ತು AAPಯ 88 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೂರತ್ ಪೂರ್ವದ ಆಪ್ ಅಭ್ಯರ್ಥಿ ಕೊನೆಯ ದಿನ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿಯ 9, ಕಾಂಗ್ರೆಸ್ 6 ಮತ್ತು ಆಪ್​ನ 5 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದಲ್ಲಿ ಕಣದಲ್ಲಿರುವ ಒಟ್ಟು 788 ಅಭ್ಯರ್ಥಿಗಳಲ್ಲಿ 718 ಪುರುಷರು ಮತ್ತು 70 ಮಹಿಳೆಯರು ಇದ್ದಾರೆ.  ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮೊದಲ ಹಂತದಲ್ಲಿ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಭಾರತೀಯ ಬುಡಕಟ್ಟು ಪಕ್ಷ 14, ಸಮಾಜವಾದಿ ಪಕ್ಷ 12, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ) 4, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 2 ಅಭ್ಯರ್ಥಿಗಳಿದ್ದು, ಒಟ್ಟು 339 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ : Rishab Shetty Photoshoot: ‘ಹ್ಯಾಷ್ ಟ್ಯಾಗ್’ ಮ್ಯಾಗಜಿನ್ ಮುಖಪುಟದಲ್ಲಿ ರಿಷಬ್ ಶೆಟ್ಟಿ; ಫೋಟೋಶೂಟ್ ನಲ್ಲಿ ಮಿಂಚಿದ್ದು ಹೀಗೆ..

ಇದನ್ನೂ ಓದಿ : Vijay Devarakonda: ‘ಲೈಗರ್’ ಚಿತ್ರತಂಡಕ್ಕೆ ಸೋಲಿನ ನಡುವೆಯೇ ಇಡಿ ಶಾಕ್; ವಿಚಾರಣೆಗೆ ಹಾಜರಾದ ವಿಜಯ ದೇವರಕೊಂಡ

GUJARAT ELECTION Today Voting for phase 1 polls 788 candidates in fray from 89 Assembly constituencies

Comments are closed.