Sweet Corn Uppittu: ಹೊಸ ಬಗೆಯ ಸ್ವೀಟ್​ ಕಾರ್ನ್​ ಉಪ್ಪಿಟ್ಟು ಒಮ್ಮೆ ಟ್ರೈ ಮಾಡಿ

(Sweet Corn Uppittu) ಪ್ರತಿದಿನ ಮನೆಯಲ್ಲಿ ಬೆಳಗ್ಗೆ ತಿಂಡಿ ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಹೊಸ ಬಗೆಯ ತಿಂಡಿ ರೆಸಿಪಿಯನ್ನು ತಯಾರಿಸುವ ವಿಧಾನ ತಿಳಿಸುತ್ತೇನೆ. ಮಾರುಕಟ್ಟೆಗೆ ಹೋದ್ರೆ ಮಕ್ಕಳು ಹಠ ಮಾಡಿ ಸ್ವೀಟ್ ಕಾರ್ನ್ ಖರೀದಿಸಿ ತಿನ್ನುತ್ತಾರೆ. ಇಂದು ನೀವು ಅದೇ ಸ್ವೀಟ್ ಕಾರ್ನ್​ ಬಳಸಿ ಬೆಳಗಿನ ತಿಂಡಿ ಮಾಡಬಹುದು. ಸ್ವೀಟ್ ಕಾರ್ನ್​ ಇಷ್ಟಪಡುವ ಮಕ್ಕಳು ಈ ಉಪ್ಪಿಟ್ಟನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇಂದು ನಿಮಗೆ ರುಚಿಯಾದ ಸ್ವೀಟ್ ಕಾರ್ನ್​ ಉಪ್ಪಿಟ್ಟು ಹೇಗೆ ಮಾಡುವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡುತ್ತಿದ್ದೇನೆ.

ಹಾಗಿದ್ದರೆ ಸ್ವೀಟ್‌ ಕಾರ್ನ್‌ ಉಪ್ಪಿಟ್ಟು (Sweet Corn Uppittu) ಮಾಡಲು ಬೇಕಾಗುವ ಸಾಮಾಗ್ರಿಗಳು ಏನೆಂಬುದು ತಿಳಿಯೋಣ
4 ಕಪ್ ಸ್ವೀಟ್​ ಕಾರ್ನ್​
ಒಂದು ಕಪ್ ರವೆ
ತೆಂಗಿನಕಾಯಿ ತುರಿ
1 ಟೀ ಸ್ಪೂನ್ ಕಡಲೆಬೀಜ
1 ಟೀ ಸ್ಪೂನ್ ಉದ್ದಿನಬೇಳ
ಒಂದು ದೊಡ್ಡ ಟೊಮ್ಯಾಟೋ
ಒಂದು ದೊಡ್ಡ ಈರುಳ್ಳಿ
4 ರಿಂದ 5 ಹಸಿಮೆಣಸಿನಕಾಯಿ
ಅರಿಶಿನ
ಕರೀಬೇವು
ಮೂರು ಟೀ ಸ್ಪೂನ್ ಎಣ್ಣೆ
ರುಚಿಗೆ ತಕ್ಕಷ್ಟುಉಪ್ಪು
ಕೊತ್ತಂಬರಿ ಸೊಪ್ಪು

ಸ್ವೀಟ್​ ಕಾರ್ನ್​ ಉಪ್ಪಿಟ್ಟು ಮಾಡುವ ವಿಧಾನ
ಮೊದಲಿಗೆ ಮೂರು ಕಪ್​ನಷ್ಟು ಸ್ವೀಟ್​ ಕಾರ್ನ್​ಗಳನ್ನು ಜಾರ್​ಗೆ ಹಾಕಿ ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ರುಬ್ಬಿದ ಸ್ವೀಟ್​ ಕಾರ್ನ್​ ತೆಗೆದಿಟ್ಟುಕೊಳ್ಳಿ. ಈಗ ಇದೇ ಜಾರ್​ಗೆ ಉಳಿದ ಮತ್ತೊಂದು ಕಪ್​ ಸ್ವೀಟ್ ಕಾರ್ನ್​ ಹಾಕಿ ನೀರು ಸೇರಿಸದೇ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇರಿಸಿಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸಿವೆ ಮತ್ತು ಜೀರಿಗೆ ಹಾಕಿ. ಸಾಸಿವೆ ಮತ್ತು ಜೀರಿಗೆ ಚಿಟಪಟ ಅಂತ ಸಿಡಿಯಲು ಆರಂಭಿಸುತ್ತಿದ್ದಂತೆ ಉದ್ದಿನಬೇಳೆ ಮತ್ತು ಶೇಂಗಾ ಸೇರಿಸಿ ಹುರಿಯಿರಿ. ಉದ್ದಿನಬೇಳೆ ಮತ್ತು ಶೇಂಗಾ ಫ್ರೈ ಆಗುತ್ತಿದ್ದಂತೆ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಬೇಯಿಸಿ. ನಂತರ ಟೊಮ್ಯಾಟೋ ಮಿಕ್ಸ್​ ಮಾಡಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ಈಗ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಮತ್ತು ಕರೀಬೇವು ಸೇರಿಸಿ. ಈಗ ಇದಕ್ಕೆ ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಮಸಾಲೆಯನ್ನು ಎರಡರಿಂದ ಮೂರು ನಿಮಿಷ ಬೇಯಿಸಿದ ನಂತರ ನುಣ್ಣಗೆ ರುಬ್ಬಿಕೊಂಡಿರುವ ಸ್ವೀಟ್ ಕಾರ್ನ್​ ಪೇಸ್ಟ್​​ ಸೇರಿಸಿ. ನಂತರ ತರಿ ತರಿಯಾಗಿ ರುಬ್ಬಿರುವ ಸ್ವೀಟ್ ಕಾರ್ನ್​ ಸಹ ಸೇರಿಸಿಕೊಳ್ಳಿ. ಸ್ವೀಟ್​ ಕಾರ್ನ್​ ಪೇಸ್ಟ್​ ಸೇರಿಸಿದ ನಂತರ ಅದು ಸೀದು ಹೋಗದಂತೆ ಕೈ ಆಡಿಸುತ್ತಿರಬೇಕು. ಈ ವೇಳೆ ಅರ್ಧ ಕಪ್​ ನೀರು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಸ್ವೀಟ್ ಕಾರ್ನ್​ ಪೇಸ್ಟ್​ ಬೇಯುತ್ತಿರುವಾಗಲೇ ಅದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್​ ಮಾಡಿ. ಈಗ ಸಿದ್ಧವಾಗಿರುವ ಮಸಾಲೆಗೆ ಎರಡೂವರೆ ಕಪ್​ನಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ. ನೀರು ಕುದಿಯುತ್ತಿರುವಾಗಲೇ ರವೆ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ. ನಂತರ ಮುಚ್ಚಳ ತೆಗೆದು ಸೀದು ಹೋಗದಂತೆ ರವೆಯನ್ನು ಮೇಲೆ ಕೆಳಗೆ ತಿರುಗಿಸುತ್ತಿರಬೇಕು. ಈಗ ಒಲೆ ಬಂದ್ ಮಾಡಿ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಎತ್ತಿಡಿ. ನಂತರ ಮುಚ್ಚಳ ತೆಗೆದು ಕೋತ್ತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಸ್ವೀಟ್ ಕಾರ್ನ್​ ಉಪ್ಪಿಟ್ಟು ಸವಿಯಲು ಸಿದ್ಧ.

ಇದನ್ನೂ ಓದಿ : Watermelon Rind Halwa: ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ರುಚಿಕರ ಹಲ್ವ ತಯಾರಿಸಿ ನೋಡಿ

ಇದನ್ನೂ ಓದಿ : Sabbakki Idli: ಬೆಳಗ್ಗಿನ ತಿಂಡಿಗೆ ತಯಾರಿಸಿ ವಿಭಿನ್ನವಾದ ಸಬ್ಬಕ್ಕಿ ಇಡ್ಲಿ

(Sweet Corn Uppittu) Are you worried about what to have for breakfast every morning at home? If so, I will tell you how to prepare a new type of snack recipe. If they go to the market, the children insist on buying sweet corn and eating it. Today you can use the same sweet corn for breakfast

Comments are closed.