ಶಾಲೆಗಳಿಗೆ ದಸರಾ ರಜೆ ಕಡಿತ : ವಿಶೇಷ ಮಕ್ಕಳಿಗೆ ರಜೆಯೇ ರದ್ದು, ಬಾರೀ ಆಕ್ರೋಶ

ಈ ಬಾರಿಯೂ ದಸರಾ ರಜೆ ಅಕ್ಟೋಬರ್‌ನಿಂದ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ರಾಜ್ಯ ಸರಕಾರ ಹೊರಡಿಸಿರುವ ಪರಿಷ್ಕೃತ ಮಾರ್ಯಸೂಚಿಯ ಪ್ರಕಾರ ಈ ಬಾರಿಯೂ ದಸರಾ ರಜೆಯಲ್ಲಿ ( (Karnataka Dasara Holiday 2023) ) ಕಡಿತ ಮಾಡಿದೆ.

ಬೆಂಗಳೂರು : ಕಳೆದ ಕೆಲವು ವರ್ಷಗಳಿಂದಲೂ ಕೊರೊನಾ ಕಾರಣಕ್ಕೆ ದಸರಾ ರಜೆಯ ಅವಧಿ ಕಡಿತವಾಗಿತ್ತು. ಆದ್ರೆ ಈ ಬಾರಿಯೂ ದಸರಾ ರಜೆ ಅಕ್ಟೋಬರ್‌ನಿಂದ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ರಾಜ್ಯ ಸರಕಾರ ಹೊರಡಿಸಿರುವ ಪರಿಷ್ಕೃತ ಮಾರ್ಯಸೂಚಿಯ ಪ್ರಕಾರ ಈ ಬಾರಿಯೂ ದಸರಾ ರಜೆಯಲ್ಲಿ ( (Karnataka Dasara Holiday 2023) ) ಕಡಿತ ಮಾಡಿದೆ.

ಕರ್ನಾಟಕ ರಾಜ್ಯ ಸರಕಾರ (Karnataka Governament) ವರ್ಷಾರಂಭದಲ್ಲಿ ಹೊರಡಿಸಿದ್ದ ಮಾರ್ಗಸೂಚಿಯ (Govt New Circuler) ಪ್ರಕಾರ ಅಕ್ಟೋಬರ್‌ 2 ರಿಂದ 29ರ ವರೆಗೆ ದಸರಾ ರಜೆಯನ್ನು ನಿಗದಿ ಪಡಿಸಲಾಗಿತ್ತು. ಆದ್ರೆ ಇದೀಗ ಹೊರಡಿಸಿರುವ ದಸರಾ ಮಾರ್ಗಸೂಚಿಯ ಪ್ರಕಾರ ಈ ಬಾರಿಯ ದಸರಾ ರಜೆಯನ್ನು ಅಕ್ಟೋರ್‌ 8 ರಿಂದ 24 ರ ವರೆಗೆ ನಿಗದಿ ಪಡಿಸಲಾಗಿದೆ. ಇದರಿಂದಾಗಿ ರಜೆಯ (School Holiday)  ಅವಧಿಯಲ್ಲಿ ಬಾರೀ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ : ಸೆಪ್ಟೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ ಘೋಷಣೆ

ಇನ್ನು ವಿಶೇಷ ಮಕ್ಕಳಿಗೆ (Special Childrens) ಈ ಬಾರಿ ದಸರಾ ರಜೆಯನ್ನೇ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು (School Teachers) ದಸರಾ ರಜೆಯಲ್ಲಿಯೂ ಶಾಲೆಗಳಿಗೆ ತೆರಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಕೊರೊನಾ ಕಾರಣ ನೀಡಿ ರಾಜ್ಯ ಸರಕಾರ ಬೇಸಿಗೆ ರಜೆಯನ್ನು ಕಡಿತ ಮಾಡಿತ್ತು. ಆದ್ರೀಗ ಶೈಕ್ಷಣ ಚಟುವಟಿಕೆ ಸರಿಯಾಗಿ ನಡೆಯುವಾಗಲೇ ರಾಜ್ಯ ಸರಕಾರ ದಸರಾ ರಜೆ ಕಡಿತ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Karnataka Dasara Holiday 2023 For Karnatak Schools Reduced
Image Credit to Original Source

ಇನ್ನು ಕಳೆದ ವರ್ಷ ಮಂಗಳೂರು ( ದಕ್ಷಿಣ ಕನ್ನಡ), ಮೈಸೂರು ಜಿಲ್ಲೆಗಳಲ್ಲಿ ದಸರಾ ರಜೆಯ ಅವಧಿಯನ್ನು ಮಾರ್ಪಾಡು ಮಾಡಲಾಗಿತ್ತು. ಆದರೆ ಈ ಬಾರಿ ದಸರಾ ಅವಧಿಯಲ್ಲೇ ದಸರಾ ಆಚರಣೆ ನಡೆಯಲಿರುವುದು ಮಕ್ಕಳಿಗೆ ಹಾಗೂ ಪೋಷಕರಿಗೆ ಖುಷಿ ಕೊಟ್ಟಿದ್ದು, ರಾಜ್ಯದಾದ್ಯಂತ ದಸರಾ ರಜೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಈ ಬಾರಿಯ ಮೈಸೂರು ದಸರಾ ಅಕ್ಟೋಬರ್‌ 15 ರಂದು ಆರಂಭಗೊಂಡು ಅಕ್ಟೋಬರ್‌ 24ರ ವರೆಗೆ ನಡೆಯಲಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

2023-24ರ ಶೈಕ್ಷಣಿಕ ವರ್ಷದ ರಜೆಯ ( School Holidays) ವಿವರ :

ಶೈಕ್ಷಣಿಕ ವರ್ಷ 2023-24 ಲಭ್ಯ ಶಾಲಾ ದಿನಗಳು : 244
ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸಗಿ (FA ಮತ್ತು SA): 26 ದಿನಗಳು.
ಪಠ್ಯೇತರ ಚಟುವಟಿಕೆಗಳು / ಸಹಪಠ್ಯ ಚಟುವಟಿಕೆಗಳು / ಸ್ಪರ್ಧೆಗಳ ನಿರ್ವಹಣೆಗೆ : 24 ದಿನಗಳು.
ಶಾಲೆಯ ಸ್ಥಳೀಯ ರಜಾದಿನಗಳು : 10 ದಿನಗಳು.
ಬೋಧನೆ-ಕಲಿಕೆ ಪ್ರಕ್ರಿಯೆಗೆ ಉಳಿದಿರುವ ಕರ್ತವ್ಯದ ದಿನಗಳು – 180 ದಿನಗಳು.

ಮೊದಲ ಅವಧಿಗೆ ಶಾಲಾ ಕರ್ತವ್ಯದ ದಿನಗಳು – 29-05-2023 ರಿಂದ 02-10-2023 ರವರೆಗೆ.
ಎರಡನೇ ಅವಧಿಯ ಶಾಲಾ ಕರ್ತವ್ಯದ ದಿನಗಳು – ದಿನಾಂಕ 25-10-2023 ರಿಂದ ದಿನಾಂಕ 10-04-2024.

ಶಾಲಾ ರಜಾದಿನಗಳು:

08-10-2023 ರಿಂದ 24-10-2023 ರವರೆಗೆ ದಸರಾ ರಜೆ.
11-04-2024 ರಿಂದ 28-05-2024 ರವರೆಗೆ ಬೇಸಿಗೆ ರಜೆ.

Karnataka Dasara Holiday 2023 For Karnatak Schools Reduced
Image Credit To Original Source

15 ದಿನ ದಸರಾ ರಜೆ (dasara Holidays : ಸರಕಾರದ ಆದೇಶ

ಕರ್ನಾಟಕದಲ್ಲಿ ದಸರಾ ರಜೆ ಅವಧಿಯಲ್ಲಿ ಕಡಿತ ಮಾಡಿದ್ದರೆ, ಬಿಹಾರ ಶಿಕ್ಷಣ ಇಲಾಖೆಯು ಅಧಿಕೃತ ಅಧಿಸೂಚನೆಯ ಪ್ರಕಾರ ಸರ್ಕಾರಿ ಶಾಲೆಗಳಿಗೆ ಸೆಪ್ಟೆಂಬರ್‌ನಿಂದ ಡಿಸೆಂಬರ್ ನಡುವೆ ನೀಡಲಾಗುತ್ತಿದ್ದ ಹಬ್ಬದ ರಜೆಗಳ ಅವಧಿಯನ್ನು 23 ರಿಂದ 11 ಕ್ಕೆ ಇಳಿಸಿದೆ. ಬಿಹಾರದ ಸರ್ಕಾರಿ ಶಾಲೆಗಳಲ್ಲಿ 15 ರಜೆಗಳನ್ನು ರದ್ದುಗೊಳಿಸಿರುವ ನಡೆಯನ್ನು ಬಿಜೆಪಿ ಟೀಕಿಸಿದೆ. ರಾಜ್ಯ ಸರಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ ಸರಕಾರಿ ಶಾಲೆಗಳಿಗೆ ನೀಡಲಾಗುತ್ತಿದ್ದ ರಕ್ಷಾ ಬಂಧನ, ತೀಜ್, ಜುತಿಯಾ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ : ಸರಕಾರಿ ಶಾಲೆಯಲ್ಲಿ ಬಿಸಿಯೂಟ ಸೇವೆನೆ : 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಈ ನಿರ್ಧಾರಕ್ಕೆ ಸಿಎಂ ನಿತೀಶ್‌ ಕುಮಾರ್‌ ಅವರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಹಿಂದೂ ಹಬ್ಬಗಳ ರಜಾ ದಿನಗಳನ್ನು ರದ್ದುಗೊಳಿಸಿ ಷರಿಯಾ ಕಾನೂನು ಹೇರಿದ ಎಂದು ಆರೋಪಿಸಿದ್ದಾರೆ. ಇನ್ನು ಬಿಹಾರದಲ್ಲಿ ಚುನಾವಣೆ, ಪರೀಕ್ಷೆ, ಕಾನೂನು ಸುವ್ಯವಸ್ಥೆ, ಹಬ್ಬ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಕಾರಣಗಳಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ಕೊರತೆ ಉಂಟಾಗುತ್ತಿದ್ದು, ಈ ನಿರ್ಧಾರ ಕೈಗೊಂಡಿದೆ ಎಂದು ಸರಕಾರ ಹೇಳಿಕೊಂಡಿದೆ. ಪ್ರಾಥಮಿಕ ಶಾಲೆಗಳಿಗೆ 200 ಮತ್ತು ಮಧ್ಯಮ ಶಾಲೆಗಳ ಕೆಲಸದ ದಿನಗಳನ್ನು ವರ್ಷದಲ್ಲಿ 220ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ರಕ್ಷಾ ಬಂಧನ, ಸೆಪ್ಟೆಂಬರ್ 7 ರಂದು ಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 18 ಮತ್ತು 19 ರಂದು ಹರ್ತಾಲಿಕಾ ತೀಜ್, ಅಕ್ಟೋಬರ್ 6 ರಂದು ಜುತಿಯಾ ರಜೆಗಳನ್ನು ರದ್ದುಗೊಳಿಸಲಾಗಿದೆ. ದುರ್ಗಾ ಪೂಜೆಯ ರಜೆಯನ್ನು ಆರು ದಿನಗಳಿಂದ (ಅಕ್ಟೋಬರ್ 19 ರಿಂದ 24) ಮೂರು ದಿನಕ್ಕೆ ಕಡಿತಗೊಳಿಸಲಾಗಿದೆ. (ಅಕ್ಟೋಬರ್ 22 ರಿಂದ 24 ರವರೆಗೆ). ಗುರುನಾನಕ್ ಜಯಂತಿ ಮತ್ತು ಕಾರ್ತಿಕ್ ಪೂರ್ಣಿಮೆಯನ್ನು ನವೆಂಬರ್ 27 ರಂದು ಒಂದು ದಿನಕ್ಕೆ ವಿಲೀನಗೊಳಿಸಲಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯಿಂದ ರಜೆಯನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

Karnataka Dasara Holiday 2023 For Karnatak Schools Reduced

Comments are closed.