ಗೃಹಲಕ್ಷ್ಮೀ ಯೋಜನೆಯ ಹಣ 2000 ರೂ. ಸಿಗದವರಿಗೆ ಗುಡ್‌ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ರಾಜ್ಯದ 8 ಲಕ್ಷಕ್ಕೂ ಅಧಿಕ ಮಂದಿಯ ಖಾತೆಗೆ ತಾಂತ್ರಿಕ ಸಮಸ್ಯೆಯಿಂದಾಗಿ ಗೃಹಲಕ್ಷ್ಮೀ (Gruha Lakshmi Yojana)ಹಣ ವರ್ಗಾವಣೆ ಆಗಿಲ್ಲ. ಹೀಗಾಗಿ ಹಣ ಸಿಗದವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Minister Lakshmi Hebbalkar) ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಬೆಂಗಳೂರು : ರಾಜ್ಯದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಬಡವರ ಪಾಲಿಗೆ ವರದಾನವಾಗಿದೆ. ಕೋಟ್ಯಾಂತರ ಮಹಿಳೆಯರ ಬ್ಯಾಂಕ್‌ ಖಾತೆಗೆ (Bank Account) 2000 ರೂಪಾಯಿ ನೇರ ವರ್ಗಾವಣೆಯಾಗಿದೆ.

ಆದರೆ ಕರ್ನಾಟಕ ರಾಜ್ಯದ 8 ಲಕ್ಷಕ್ಕೂ ಅಧಿಕ ಮಂದಿಯ ಖಾತೆಗೆ ಹಣ ಜಮೆಯಾಗಿಲ್ಲ. ಇದರಿಂದಾಗಿ ಲಕ್ಷಾಂತರ ಮಹಿಳೆಯರು ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದು, ಸರಕಾರದ ಮೇಲೆ ಒತ್ತಡ ಹೇರಿದ್ದರು. ಈ ನಡುವಲ್ಲೇ ಗೃಹಲಕ್ಷ್ಮೀ (Gruha Lakshmi Yojana) ಹಣ ಸಿಗದವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Minister Lakshmi Hebbalkar) ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಬಹುತೇಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನಂತರದಲ್ಲಿ ಸರಕಾರದಿಂದ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಮೆಸೆಜ್‌ ಕೂಡ ಬಂದಿತ್ತು. ಆದರೆ ಹಣ ಮಾತ್ರ ಖಾತೆಗೆ ವರ್ಗಾವಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಸುಮಾರು 1.28 ಕೋಟಿ ಗೃಹಿಣಿಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಅರ್ಜಿ ಸಲ್ಲಿಸಿರುವವರ ಪೈಕಿ 8 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಲ್ಲ. ಇದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಹಣ ವರ್ಗಾವಣೆ ಆಗದೇ ಇರುವ ಮಹಿಳೆಯರ ಮನೆಗಳಿಗೆ ತೆರಳಿ ಸಮಸ್ಯೆಯನ್ನು ಪರಿಹಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಘೋಷಿಸಿದ್ದಾರೆ. ಸಮಸ್ಯೆಯ ಪರಿಹಾರಕ್ಕಾಗಿ ಈಗಾಗಲೇ ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಸರಕಾರದ ಈ ನಂಬರ್‌ಗೆ ಮೆಸೇಜ್‌ ಮಾಡಿದ್ರೆ ಜಮೆ ಆಗುತ್ತೆ ಹಣ

ಈ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಅವರ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗದೇ ಇರುವ ಮಹಿಳೆಯರ ಪಟ್ಟಿಯನ್ನ ಸಿದ್ದ ಪಡಿಸಿ, ಅವರ ಮನೆಗಳಿಗೆ ತೆರಳಿ ಸಮಸ್ಯೆಯನ್ನು ಪರಿಹಾರ ಮಾಡುವ ಕಾರ್ಯವನ್ನು ಮಾಡಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಈ ವಿಚಾರ ವನ್ನು ಇತ್ತೀಚಿಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

Karnataka News Gruha Lakshmi Yojana Everyone Get 2000rs  Good news For Minister Lakshmi Hebbalkar
Imaeg credit To Original Source

ರಾಜ್ಯದಲ್ಲಿನ ಅರ್ಹ ಪ್ರತೀ ಮಹಿಳೆಯರೂ ಕೂಡ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಸೌಲಭ್ಯ ಪಡೆಯಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ ಸರಕಾರದಿಂದ ನೇರವಾಗಿ 2000 ರೂಪಾಯಿ ಹಣ (DBT) ವರ್ಗಾವಣೆಯಾಗಲಿದೆ.  ಇದರಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಆದರೆ ಸರಕಾರ ಈ ಯೋಜನೆಗೆ ಹಲವು ನಿಯಮಗಳನ್ನು ರೂಪಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಬಾರೀ ಬದಲಾವಣೆ : ಹಣ ಜಮೆ ಆಗದೆ ಮಹಿಳೆಯರು ಕಂಗಾಲು

ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಅಲ್ಲದೇ ಮಹಿಳೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ತೆರಿಗೆ ಪಾವತಿದಾರರಾಗಿದ್ದರೆ ಅಂತಹ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ದೊರೆಯುವುದಿಲ್ಲ. ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯ ಬೇಕಾದ್ರೆ ರೇಷನ್‌ ಕಾರ್ಡ್‌ನಲ್ಲಿ ಮನೆಯ ಯಜಮಾನಿ ಮಹಿಳೆ ಆಗಿರಬೇಕು. ಆದರೆ ಬಹುತೇಕರ ಕಾರ್ಡುಗಳಲ್ಲಿ ಪುರುಷರು ಮನೆಯ ಯಜಮಾನ ರಾಗಿದ್ದಾರೆ. ಇಂತಹ ಕಾರ್ಡುದಾರರಿಗೆ ಈ ಸೌಲಭ್ಯ ದೊರೆಯುವುದಿಲ್ಲ.

ಇದೇ ಕಾರಣಕ್ಕೆ ರಾಜ್ಯ ಸರಕಾರ ರೇಷನ್‌ ಕಾರ್ಡ್‌ ತಿದ್ದುಪಡಿ (Ration Card Correction) ಮಾಡಿಸಿಕೊಳ್ಳಲು ಸಪ್ಟೆಂಬರ್‌ 10 ರ ವರೆಗೆ ಕಾಲಾವಕಾಶವನ್ನು ನೀಡಿತ್ತು. ಆದ್ರೀಗ ನಾಲ್ಕು ದಿನಗಳ ಹೆಚ್ಚುವರಿ ಕಾಲಾವಕಾಶ ವನ್ನು ನೀಡಿದೆ. ಹೀಗಾಗಿ ಸಪ್ಟೆಂಬರ್‌ 14 ರ ಒಳಗಾಗಿ ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

Karnataka News Gruha Lakshmi Yojana Everyone Get 2000rs  Good news For Minister Lakshmi Hebbalkar
Image Credit to Original Source

ಇದನ್ನೂ ಓದಿಶಾಲೆಗಳಿಗೆ ದಸರಾ ರಜೆ ಕಡಿತ : ವಿಶೇಷ ಮಕ್ಕಳಿಗೆ ರಜೆಯೇ ರದ್ದು, ಬಾರೀ ಆಕ್ರೋಶ

ರಾಜ್ಯ ಸರಕಾರ ಈಗಾಗಲೇ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್‌ ಬಳಕೆ ಮಾಡುವ ಕುಟುಂಬಗಳಿಗೆ ಉಚಿತ ವಿದ್ಯುತ್‌, ಗೃಹಲಕ್ಷ್ಮೀ ಯೋಜನೆಯ ಮೂಲಕ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2000 ರೂಪಾಯಿ ನೀಡುವ ಯೋಜನೆಯ ಜಾರಿಗೆ ತಂದಿದೆ.

Karnataka News Gruha Lakshmi Yojana Everyone Get 2000rs  Good news For Minister Lakshmi Hebbalkar

Comments are closed.