ಭಾರತಕ್ಕೆ ನೆಟ್ ಬೌಲರ್ ಆಗಿದ್ದಾತ ಇಂದು ಪಾಕಿಸ್ತಾನದ ಬೆಂಕಿ ಬೌಲರ್

ಬೆಂಗಳೂರು: ಆತ ಕೇವಲ ನಾಲ್ಕು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ (India Cricket team) ನೆಟ್ ಬೌಲರ್ ಆಗಿದ್ದ. ಈಗ ಅದೇ ಆಟಗಾರ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪ್ರಮುಖ ವೇಗದ ಬೌಲರ್. ಟೀಮ್ ಇಂಡಿಯಾ ನೆಟ್ ಬೌಲರ್ ಆಗಿದ್ದಾತ (Haris Rauf) ಪಾಕಿಸ್ತಾನ ತಂಡದ ಬೆಂಕಿ ಬೌಲರ್ ಆಗಿ ಬೆಳೆದು ನಿಂತ ಕಥೆಯಿದು.

ಇದು ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ (Haris Rauf) ಅವರ ಸ್ಫೂರ್ತಿದಾಯಕ ಕಥೆ. 29 ವರ್ಷದ ಬಲಗೈ ವೇಗದ ಬೌಲರ್ ಹ್ಯಾರಿಸ್ ರೌಫ್, ಸದ್ಯದ ಕ್ರಿಕೆಟ್ ಜಗತ್ತಿನ ಸೂಪರ್ ಫಾಸ್ಟ್ ವೇಗಿ. ಟಿ20 ಕ್ರಿಕೆಟ್’ನಲ್ಲಿ ಖತರ್ನಾಕ್ ಬೌಲರ್ ಆಗಿರುವ ರೌಫ್, ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಗಮನ ಸೆಳೆದಿದ್ದರು.

ಹ್ಯಾರಿಸ್ ರೌಫ್ ಕೇವಲ 4 ವರ್ಷಗಳ ಹಿಂದೆ ಭಾರತ ತಂಡಕ್ಕೆ ನೆಟ್ ಬೌಲರ್ ಆಗಿದ್ದರು. 2018-19ನೇ ಸಾಲಿನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳಿಗೆ ನೆಟ್ಸ್’ನಲ್ಲಿ ರೌಫ್ ಬೌಲಿಂಗ್ ಮಾಡಿದ್ದರು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ರವಿ ಶಾಸ್ತ್ರಿಯವರನ್ನು ಭೇಟಿ ಮಾಡಿದಾಗಲೆಲ್ಲಾ ಇದನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದು ಹ್ಯಾರಿಸ್ ರೌಫ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ನಾನು ರವಿ ಶಾಸ್ತ್ರಿಯವರನ್ನು ಭೇಟಿ ಮಾಡಿದಾಗಲೆಲ್ಲಾ ನಾನು ನೆಟ್ ಬೌಲರ್ ಆಗಿದ್ದ ದಿನಗಳ ಬಗ್ಗೆ ಮಾತನಾಡುತ್ತಾರೆ. ನೀನೀಗ ಸಾಕಷ್ಟು ಹೆಸರು ಮಾಡಿದ್ದೀಯಾ ಎಂದು ಹೇಳುತ್ತಾರೆ. ನಾನು ಎಲ್ಲಿಂದ ಬಂದಿದ್ದೇನೆ ಎಂಬುದು ಅವರಿಗೆ ಗೊತ್ತು. ನನ್ನ ಸಾಧನೆಗಳ ಬಗ್ಗೆ ಅವರಿಗೆ ಹೆಮ್ಮೆಯಿದೆ” ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ.

“ನಾನು ಈ ಹಂತಕ್ಕೆ ಬಂದು ನಿಂತಿರುವುದಕ್ಕೆ ವಿರಾಟ್ ಭಾಯ್ ಸಾಕಷ್ಟು ಬಾರಿ ನನ್ನನ್ನು ಅಭಿನಂದಿಸಿದ್ದಾರೆ. ನೀನು ನಮ್ಮ ನೆಟ್ಸ್’ನಲ್ಲಿ ಬೌಲಿಂಗ್ ಮಾಡುತ್ತಿದ್ದೆ, ಈಗ ನೀನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದರು”.

  • ಹ್ಯಾರಿಸ್ ರೌಫ್, ಪಾಕಿಸ್ತಾನ ತಂಡದ ವೇಗದ ಬೌಲರ್

2020ರ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಹ್ಯಾರಿಸ್ ರೌಫ್ ಪದಾರ್ಪಣೆ ಮಾಡಿದ್ದರು. ಅದೇ ವರ್ಷದ ಆಗಸ್ಟ್’ನಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

ಇದನ್ನೂ ಓದಿ : IPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

ಇದನ್ನೂ ಓದಿ : India cricket Player Rishabh Pant : “ನೆಟ್ಟಗೆ ಆಟವಾಡದಿದ್ದರೂ ಮಾತಿನಲ್ಲೇನು ಕಮ್ಮಿಯಿಲ್ಲ..” ರಿಷಭ್ ಪಂತ್ ಆಡಿದ ಮಾತು ಕೇಳಿದಿರಾ?

Once India Cricket team net bowler, now Pakistan speedster Haris Rauf

Comments are closed.