Trinity for BJP : ರಾಜ್ಯ ಬಿಜೆಪಿಗೆ ತ್ರಿಮೂರ್ತಿಬಲ: ರಾಜ್ಯದಲ್ಲೇ ಬೀಡು ಬಿಡಲಿದ್ದಾರೆ ಅಮಿತ್ ಶಾ, ಯೋಗಿ, ಮೋದಿ

ಬೆಂಗಳೂರು : (Trinity for BJP) 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಎರಡೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಕಾಂಗ್ರೆಸ್,ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ಬಿಜೆಪಿಯ ಕರ್ನಾಟಕ ಗೆಲುವಿಗಾಗಿ ಚುನಾವಣಾ ಚಾಣಕ್ಯ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಕೂಡ ಪ್ರಯತ್ನಶೀಲರಾಗಿದ್ದು ಚುನಾವಣೆ ವೇಳೆ ಈ ಇಬ್ಬರೂ ಬಿಜೆಪಿ ನಾಯಕರು ಎಂಟು ದಿನ ರಾಜ್ಯದಲ್ಲೇ ವಾಸ್ತವ್ಯ ಹೂಡಲಿದ್ದಾರಂತೆ.

ಹೌದು ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ರಾಷ್ಟ್ರೀಯ ನಾಯಕರು ಪಣ ತೊಟ್ಟಿದ್ದು, ರಾಜ್ಯದಲ್ಲೇ ಇದ್ದು ಚುನಾವಣೆ ಗೆಲ್ಲಲು ಮೋದಿ, ಅಮಿತ್ ಶಾ ಮುಂದಾಗಿದ್ದಾರಂತೆ. ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಅಮಿತ್ ಶಾ 20 ದಿನ ವಾಸ್ತವ್ಯ ಹೂಡಲಿದ್ದರೇ ಮೋದಿ ಕೂಡ ಆರೆಂಟು ದಿನಗಳ ಕಾಲ ಕರ್ನಾಟಕದಲ್ಲಿ  ಇದ್ದು ಚುನಾವಣೆ ಗೆಲ್ಲಲು ತಂತ್ರ ಮಾಡಲಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರೋ ನೂತನ ಮಾಧ್ಯಮ ಕೇಂದ್ರದಲ್ಲಿದ್ದು ಎಲ್ಲ ನಾಯಕರನ್ನು  ಆಪರೇಟ್ ಮಾಡಲಿರುವ ಅಮಿತ್ ಶಾ, ರಾಜ್ಯದ ಚುನಾವಣಾ ವಿದ್ಯಮಾನಗಳ ಬಗ್ಗೆ ಕಣ್ಣಿಡಲಿದ್ದಾರಂತೆ. ಈಗಾಗಲೇ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆಗೊಂಡಿದ್ದು, ಅದರ ಎರಡನೇ ಮಹಡಿಯಲ್ಲಿ ವಿಶೇಷವಾದ ಕೊಠಡಿಯನ್ನು ಅಮಿತ್ ಶಾ ಗಾಗಿ ಸಿದ್ಧ ಪಡಿಸಲಾಗಿದೆ. ಆ ಕೊಠಡಿಯಲ್ಲಿ ಕುಳಿತು ಪ್ರತಿಯೊಂದು ಚುನಾವಣಾ ತಂತ್ರ ಗಳ ಬಗ್ಗೆ ನಾಯಕರ ಜೊತೆ ಶಾ ಆಪರೇಟ್  ಮಾಡಲಿದ್ದಾರಂತೆ.

ಇನ್ನು ಕರ್ನಾಟಕದಲ್ಲಿ ಶತಾಯ ಗತಾಯ ಅಧಿಕಾರಕ್ಕೆ ಬರಲು ರಾಜ್ಯಕ್ಕೆ ಹೆಚ್ಚು ತಮ್ಮ ಸಮಯ ಮೀಸಲಿಟ್ಟ ಮೋದಿ ಕೂಡ ಮೇ 2 ರಿಂದ 8 ನೇ ತಾರೀಕಿನವರೆಗೆ ರಾಜ್ಯದಲ್ಲೇ ಇರಲಿದ್ದಾರಂತೆ. ಇಲ್ಲಿಯೇ ಇದ್ದು ಚುನಾವಣಾ ರ್ಯಾಲಿ, ಸಭೆ,ಪ್ರವಾಸ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಸಿ ಮೋದಿ ಮೇಲಿನ ಅಭಿಮಾನವನ್ನು ಬಿಜೆಪಿಗೆ ಮತವಾಗಿ ಪರಿವರ್ತಿಸುವ ಪ್ರಯತ್ನ ಮಾಡಲಿದ್ದಾರಂತೆ.

ಇದನ್ನೂ ಓದಿ : Haladi Srinivasa Shetty retires: ಹಾಲಾಡಿಯವರು ರಾಜಕೀಯ ನಿವೃತ್ತಿ ಘೋಷಿಸಿರುವುದು ಸ್ವಂತ ನಿರ್ಧಾರವೇ ? ಈ ಬಗ್ಗೆ ಜನರ ಅಭಿಪ್ರಾಯವೇನು..

ಇನ್ನು ಮೋದಿ ಹಾಗೂ ಶಾಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಕೂಡ  ಸಾಥ್ ನೀಡಲಿದ್ದು,  ಯೋಗಿ ಆದಿತ್ಯನಾಥ ಆದಿಚುಂಚನಗಿರಿ ಮಠದಲ್ಲೇ  ಇದ್ದು  ಮೋದಿ ಹಾಗೂ ಶಾ ರಣತಂತ್ರಗಳಿಗೆ ಬಲ ತುಂಬಲಿದ್ದಾರಂತೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ತ್ರಿಮೂರ್ತಿಗಳು ಬಲತುಂಬಲಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿ, ರಾಜ್ಯದ ವಿವಿಧ ಕಡೆ ಚುನಾವಣಾ ಪ್ರಚಾರ ಕೈಗೊಳ್ಳಲಿರುವ ಯೋಗಿ, ಮೇ 2 ರಿಂದ 8ರ ವರೆಗೆ ರಾಜ್ಯದಲ್ಲೇ ಉಳಿಯಲಿರುವ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಕಾರ್ಯದಲ್ಲಿ ತೊಡಗಲಿದ್ದಾರೆ.

Trinity for BJP: Trinity for BJP: Amit Shah, Yogi, Modi will leave the state

Comments are closed.