Sudeep join BJP : ಕಮಲ ಮುಡಿದ ಕಿಚ್ಚ: ಬಿಜೆಪಿ ಸೇರಲಿದ್ದಾರಾ ನಟ ಸುದೀಪ್

ಬೆಂಗಳೂರು : (Sudeep join BJP) ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ದಿನದಿಂದ ದಿನಕ್ಕೆ‌ ರಾಜಕೀಯ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಈಗ ಸ್ಯಾಂಡಲ್ ವುಡ್ ಅಂಗಳದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದ್ದು, ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಕಮಲ ಪಾಳಯ ಸೇರೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಬುಧವಾರ ಮಧ್ಯಾಹ್ನ ಸ್ವತಃ ಸುದೀಪ್ ಈ ವಿಚಾರವನ್ನು ಪ್ರಕಟಿಸೋ ಸಾಧ್ಯತೆ ಇದೆ.

ಸ್ಯಾಂಡಲ್ ವುಡ್ ಹಾಗೂ ರಾಜಕೀಯದ ನಡುವಿನ ನಂಟು ಇಂದು ನಿನ್ನೆಯದಲ್ಲ. ಹಲವು ದಶಕದಿಂದ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಹಲವರು ಚುನಾವಣೆ ರಾಜಕೀಯಕ್ಕೆ ಇಳಿದು ಸಚಿವರೂ ಆಗಿದ್ದಾರೆ. ಸದ್ಯ ಈ ಸಾಲಿಗೆ ಹೊಸ ಸೇರ್ಪಡೆ ಕಿಚ್ಚ ಸುದೀಪ್. ಇದುವರೆಗೂ ರಾಜ್ಯದ ಎಲ್ಲ ರಾಜಕಾರಣಿಗಳ ಜೊತೆಗೂ ಆತ್ಮೀಯವಾದ ಬಾಂಧವ್ಯವನ್ನು ಹೊಂದಿದ್ದರು. ಪಕ್ಷಾತೀತವಾಗಿ ಎಲ್ಲ ನಾಯಕರ ಜೊತೆಗೂ ಸುದೀಪ್ ಕಾಣಿಸಿಕೊಳ್ಳುತ್ತ, ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದರು.

ಈ ಹಿಂದೆಯೂ ಹಲವು ಭಾರಿ ಸುದೀಪ್ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಮಾತು ಕೇಳಿ ಬಂದಿತ್ತಾದರೂ ಸುದೀಪ್ ಯಾವುದನ್ನು ಖಚಿತಪಡಿಸಿರಲಿಲ್ಲ. ಆದರೆ ಈಗ 2023 ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ನಟ ಕಿಚ್ಚ ಸುದೀಪ್ ನೇರವಾಗಿ ಬಿಜೆಪಿ ಬೆಂಬಲಿಸಲಿದ್ದು, ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗ್ತಿದೆ. ಬುಧವಾರ ಮಧ್ಯಾಹ್ನ ನಟ ಸುದೀಪ್ ಬೆಂಗಳೂರಿನ ಹೊಟೇಲ್‌ವೊಂದರಲ್ಲಿ ಸುದ್ದಿ ಗೋಷ್ಠಿ ಕರೆದಿದ್ದು ಈ ಸುದ್ದಿ ಗೋಷ್ಠಿಯಲ್ಲಿ ಅಧಿಕೃತವಾಗಿ ಸುದೀಪ್ ಬಿಜೆಪಿ ಸೇರ್ಪಡೆಯನ್ನು ಘೋಷಿಸಲಿದ್ದಾರೆ ಎನ್ನಲಾಗ್ತಿದೆ.

ಮೂಲಗಳ ಮಾಹಿತಿ ಪ್ರಕಾರ, ಸುದೀಪ್ ಈ ಭಾರಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಲಿದ್ದು ರಾಜ್ಯದಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರಂತೆ. ಇದಲ್ಲದೇ ರಾಜ್ಯದ ಚುನಾವಣೆ ಬಳಿಕ ಸುದೀಪ್ ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಲಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಸುದೀಪ್ ರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವ ಪ್ರಯತ್ನ ಹಲವು ಭಾರಿ ನಡೆದಿತ್ತು. ನಟಿ ಹಾಗೂ ಮಾಜಿ ಸಂಸದೆ ರಮ್ಯ ಸುದೀಪ್ ರನ್ನು ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು.

ಇದನ್ನೂ ಓದಿ : Trinity for BJP : ರಾಜ್ಯ ಬಿಜೆಪಿಗೆ ತ್ರಿಮೂರ್ತಿಬಲ: ರಾಜ್ಯದಲ್ಲೇ ಬೀಡು ಬಿಡಲಿದ್ದಾರೆ ಅಮಿತ್ ಶಾ, ಯೋಗಿ, ಮೋದಿ

ಆದರೆ ಆ‌ ಸಂದರ್ಭದಲ್ಲಿ ಸುದೀಪ್ ರಾಜಕೀಯ ಪ್ರವೇಶವನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ಈಗ ಚುನಾವಣೆ ಹೊತ್ತಿನಲ್ಲಿ ಸುದೀಪ್‌ ಮೋದಿಯವರ ವಿಚಾರಧಾರೆ ಮೆಚ್ಚಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗ್ತಿದ್ದು, ನಾಳೆ ಅಧಿಕೃತ ಪ್ರಕಟಣೆ ಬಳಿಕ ಸುದೀಪ್ ಹಾದಿ ಇನ್ನಷ್ಟು ಸ್ಪಷ್ಟವಾಗಲಿದೆ. ಈ ಮಧ್ಯೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸುದೀಪ್ ಬಿಜೆಪಿಯಿಂದ ಚಿತ್ರದುರ್ಗದಲ್ಲಿ ಎಲೆಕ್ಷನ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

Sudeep join BJP: Kamal Mudida Kiccha: Will actor Sudeep join BJP?

Comments are closed.